ಪೀಣ್ಯ ದಾಸರಹಳ್ಳಿ: ವಿಜಯ ಸೇನೆಯ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಹೆಚ್ .ಎನ್ .ದೀಪಕ್ ಅಣ್ಣನವರು ಸಂಘಟನೆಯಲ್ಲಿ ನೆಲ.ಜಲ.ಭಾಷೆ.ಗಡಿ ವಿಚಾರದಲ್ಲಿ ನನ್ನನ್ನೂ ನಾನು ಸಂಪೂರ್ಣವಾಗಿ ಕನ್ನಡ ವಿಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ನಮ್ಮ ಕಾರ್ಯವೈಖರಿಯನ್ನು ಗುರುತಿಸಿ ನನ್ನನ್ನೂ ವಿಜಯ ಸೇನೆಯ ಜಿಲ್ಲಾಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದಂತಹ ತಮಗೆ ಹಾಗೂ ವಿಶೇಷವಾಗಿ ವಿಜಯ ಸೇನೆಯ ಸಮಸ್ತ ಕುಟುಂಬದವರಿಗೂ ಜಗದೀಶ್ ಅಭಿನಂದನೆಗಳನ್ನು ತಿಳಿಸಿದರು.
ಸಂಘಟನೆಯನ್ನು ಇನ್ನು ಹೆಚ್ಚು ಬಲಪಡಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ ಕನ್ನಡದ ಕೆಲಸದಲ್ಲಿ ಸದಾ ಮುಂಚೂಣಿಯಲ್ಲಿ ಇರೋ ಹಾಗೆ ನಾವೆಲ್ಲರೂ ಒಗ್ಗೂಡಿ ಕನ್ನಡದ ತೆರನ್ನ ಎಳೆಯೋಣ ನಮ್ಮ ಉಸಿರು ಇರೋ ತನಕ ಕನ್ನಡ ತಾಯಿಗೆ. ಕನ್ನಡಾಂಬೆಗೆ. ತಾಯಿ ಭುವನೇಶ್ವರಿಗೆ. ನಮ್ಮ ಪ್ರಾಣವನ್ನು ಮುಡುಪಾಗಿಡೋಣ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಎಸ್ ವಾಸುದೇವ್ ಹೇಳಿದರು.