ದೇವನಹಳ್ಳಿ : ಐಟಿಸಿ ಸಂಸ್ಥೆ ಸಿ.ಎಸ್.ಆರ್ ನಿಧಿಯಿಂದ ಚಿಕ್ಕಜಾಲ ಸರ್ಕಾರಿ ಪ್ರೌಢಶಾಲೆಗೆ ನೀಡಿರುವ ಸವಲತ್ತು ಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸತ್ಪçಜೆಗಳಾಗಿ ಹೊರಹೊಮ್ಮುವುದರ ಜೊತೆಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಾಗ ಮಾತ್ರ ಅವರು ಶಾಲೆಗೆ ನೀಡಿದ ಸವಲತ್ತುಗಳಿಗೆ ಅರ್ಥಸಿಗಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ದೇವನಹಳ್ಳಿ ಸಮೀಪದ ಚಿಕ್ಕಜಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಐಟಿಸಿ ಸಂಸ್ಥೆಯಿAದ ನಿರ್ಮಿಸಿರುವ ಶಾಲೆ, ಅಂಗನವಾಡಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮಳೆನೀರು ಸಂಗ್ರಹ ವ್ಯವಸ್ಥೆ, ಆರೋಗ್ಯ ಸೇರಿದಂತೆ ವಿವಿಧ ಸವಲತ್ತುಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಐಟಿಸಿ ಸಂಸ್ಥೆ ಬಂಗಾರದ
ಭವಿಷ್ಯದಡಿ ಸರಕಾರಿ ಶಾಲೆಗಳನ್ನು ಗುರುತಿಸಿ ಶಾಲೆಗಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಅನೇಕ ಸಂಸ್ಥೆಗಳಿಗೆ ಆದರೆ ಎಲ್ಲಾ ಸಂಸ್ಥೆ ಮಾಲೀಕರಿಗೆ ಸರಕಾರಿ ಶಾಲೆಗಳನ್ನು ಉನ್ನತಿಕರಿಸುವ ಮನಸ್ಸು ಬರುವುದಿಲ್ಲ ಆದರೆ ಐಟಿಸಿ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅನೇಕ ಸಂಸ್ಥೆಗಳು ಸಿ.ಎಸ್.ಆರ್ ನಿಧಿ ಹಣವನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ ಯಾವುದೇ ಸಂಸ್ಥೆ ತಾನು ಗಳಿಸಿದ ಲಾಭಾಂಶದಲ್ಲಿ ಸಮಾಜ ಸೇವೆಗೆ ಶೇ.೧ರಷ್ಟು ಹಣವನ್ನು ಸದ್ಬಳಕೆ ಮಾಡಬೇಕು. ಶಾಲೆಯ ಶಿಕ್ಷಕರು ಸಂಸ್ಥೆ ನೀಡಿರುವ ಸವಲತ್ತುಗಳನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಕಟ್ಟಕಡೆಯ ಮೆನೆಯಿಂದ ಸರಕಾರಿ ಶಾಲೆಗೆ ಮಕ್ಕಳು ಬರುತ್ತಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಸತ್ಪçಜೆಗಳನ್ನಾಗಿ ರೂಪಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾ.೧೮ ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು ಈಗಿನಿಂದಲೇ ಉತ್ತಮ ಪ್ರರಿಶ್ರಮ ಹಾಕಿ ಉತ್ತಮ ಅಂಕಗಳನ್ನು ಗಳಿಸಿ ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು.ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿ ಜಿಲ್ಲಾಧಿಕಾರಿಯಾಗಿದ್ದೇನೆ ನೀವು ಸಹ ಐ.ಎ.ಎಸ್, ಐಪಿಎಸ್ ನಂತಹ ಹುದ್ದೆಗಳನ್ನು ಅಲಂಕರಿಸಿ ಬಡವರಿಗೆ ಸಹಾಯ ಮಾಡಬೇಕು. ಎಸ್ಸೆಸ್ಸೆಲ್ಸಿ ನಂತರ ಐಟಿಐ, ಡಿಪ್ಲಮೋ ಕೋರ್ಸುಗಳನ್ನು ಮಾಡಿದರೆ ಅನೇಕ ಉದ್ಯೋಗಾವಕಾಶಗಳು ಇವೆ, ಆದರೆ ವಿದ್ಯಾರ್ಥಿಗಳು ಅಂತಹ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಮುಂದಿನ ಸ್ಪರ್ದಾತ್ಮಕ ಯುಗದಲ್ಲಿ ಕೆಲಸ ಗಳಿಸುವುದು ತುಂಬಾ ಕಷ್ಟವಾಗಲಿದೆ. ನಾನು ಜಿಲ್ಲಾಧಿಕಾರಿಯಾದ ನಂತರ ಭೂಗಳ್ಳರು ಕಬಳಿಸಿದ್ದ ೫೦೦ ಎಕರೆ ಜಾಗವನ್ನು ಸರಕಾರಕ್ಕೆ ವಶಪಡಿಸಿಕೊಂಡಿದ್ದೇನೆ ಅದರ ಬೆಲೆ ೨ ಸಾವಿರ ಕೊಟಿ ಎಂದರು.
ಐಟಿಸಿ ಸಂಸ್ಥೆಯ ಜನರಲ್ ಮ್ಯಾನೇಜರ್ ಮನೋಜ್ ಶುಕ್ಲ ಮಾತನಾಡಿ ಸಂಸ್ಥೆಯ ಸಿ.ಎಸ್.ಆರ್ ನಿಧಿಯಿಂದ ಹಳೆಯ ಸರಕಾರಿ ಶಾಲೆಗಳನ್ನು ಗುರುತಿಸಿ ಶಾಲೆಗಳಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯ ಕಟ್ಟಡ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿ ಶಾಲೆಯನ್ನು ಹಸಿರುವ ಶಾಲೆಗಳನ್ನಾಗಿ ಮಾರ್ಪಾಟು ಮಾಡುತ್ತಿದ್ದೇವೆ ಎಂದರು.
ಇದೆ ವೇಳೆ ಐಟಿಸಿ ಸಂಸ್ಥೆಯ ಕಾರ್ಯಕ್ರಮದ ವ್ಯವ
ಸ್ಥಾಪಕ ಹರೀಶ್ ಬಾಬು, ಲಲಿತ, ಪ್ರಿಯಾಂಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆೆಯ ಉಪನಿರ್ದೇಶಕಿ ಸುಮಂಗಲ, ಬಯೋಮ ಸಂಸ್ಥೆಯ ಕೋಆರ್ಡಿನೇಟರ್ ಶಿವಾನಂದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವಿನೋದಮ್ಮ, ಬಿ.ಇ.ಒ ಶೈಲಜ, ಪುರಸಭೆ ಮುಖ್ಯಾಧಿಕಾರಿ ಕಾಂತರಾಜು, ಎಂ.ಅನಿಲ್ಕುಮಾರ್, ರವೀಂದ್ರ.ಬಿ.ಕೆ, ಅಂಬಿಕ.ಟಿ, ಯೋಗಾನಂಧ.ಜೆ.ಎನ್, ಛಾಯಾಪತ್ತಾರ್, ಪುನೀತ.ಎಚ್.ಎಸ್, ಶೋಭಾವತಿ, ಮುನಿರತ್ನಮ್ಮ, ಶಾಲೆಯ ಮುಖ್ಯಶಿಕ್ಷಕ, ಸಹಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಇದ್ದರು.
ಐಟಿಸಿ ಸಂಸ್ಥೆ ಶಾಲೆಗೆ ನೀಡಿರುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಿ: ಜಗದೀಶ್



