ಬೆಂಗಳೂರು: ಇಂದು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ಮುಗಿಸುತ್ತಿದ್ದಂತೆ ಜೈ ಶ್ರೀರಾಮ್, ಜೈ ಭೀಮ್ ಘೋಷಣೆಗಳು ಮೊಳಗಿದವು.ಬಿಜೆಪಿಯವರು ಜೈ ಶ್ರೀರಾಮ್ ಎಂದು ಕೂಗಿದರೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಸದಸ್ಯರು ಜೈ ಭೀಮ್ ಘೋಷಣೆ ಕೂಗಿದ ಘಟನೆ ನಡೆಯಿತು.
ಒಂದು ಹಂತದಲ್ಲಿ ಬಿಜಪಿ ಕಡೆಯಿಂದ ಭಾರತ ಮಾತಾ ಕೀ ಜೈ ಎಂಬ ಘೋಷಣೆಯು ಕೇಳಿ ಬಂತು. ಸದನಕ್ಕೆ ಆಗಮಿಸಿದ ಬಿಜೆಪಿ ಶಾಸಕರೆಲ್ಲರೂ ಕೇಸರಿ ಶಾಲು ಧರಿಸಿ ಬಂದಿದ್ದರು. ಶಾಲು ಹಾಕದ ಬಿಜೆಪಿ ಶಾಸಕರಿಗೆ ಶಾಸಕ ನಂದೀಶ್ ರೆಡ್ಡಿ ಶಾಲು ನೀಡುತ್ತಿದ್ದರು.
ಸದನದ ಹೊರೆಗೆ ಶಾಸಕ ಮುನಿರತ್ನ ಅವರು ತಮ್ಮ ಬಳಿ ಬಂದ ಕಾಂಗ್ರೆಸ್ ಶಾಸಕ ಮಂಡ್ಯದ ರವಿ ಗಣಿಗ ಅವರಿಗೆ ತಾವು ಧರಿಸಿದ ಶಾಲನ್ನು ತೆಗೆದು ಹಾಕಲು ಮುಂದದಾಗ ರವಿಗಣಿಗ ನಗುತ್ತಲೇ ಕೇಸರಿ ಶಾಲು ಹಾಕಿಸಿಕೊಂಡರು.