ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ವಿಡಿಯೋ ರಿಲೀಸ್ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ಕಾರಾಗೃಹ ಇಲಾಖೆ ಕಚೇರಿಯಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಡಿಜಿಪಿ ಎಂಎ ಸಲೀಂ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ ಶರತ್ ಚಂದ್ರ, ಗೃಹ ಇಲಾಖೆ ಕಾರ್ಯದರ್ಶಿ ತುಷಾರ್ ಗಿರಿನಾಥ್ ಭಾಗಿಯಾಗಿದ್ದಾರೆ. ಸಂಪೂರ್ಣ ವರದಿ ಕೇಳಿದ ಪರಮೇಶ್ವರ್ ಅವುö್ರ ಕಠಿಣ ಕ್ರಮ ತೆಗೆದುಕೊಳ್ಳಲು ಈ ಸಭೆ ನಡೆಸುತ್ತಿದ್ದೇವೆ ಎಂದಿದ್ದಾರೆ. ರಾಜ್ಯದ ಎಲ್ಲಾ ಜೈಲುಗಳ ಸೂಪರಿಂಟೆAಡೆAಟ್ಗಳು, ಅಧಿಕಾರಿಗಳು, ಜೈಲು ಆಧೀಕ್ಷಕರುಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಜೈಲುಗಳಲ್ಲಿರುವ ಕೈದಿಗಳ ಅಂಕಿ ಅಂಶಗಳನ್ನ ಸಚಿವರು ಪಡೆದಿದ್ದು, ಸಭೆಯಲ್ಲಿ ಫೋಟೋಗಳನ್ನ ತೋರಿಸಿ ಜೈಲು ಅಧಿಕಾರಿಗಳನ್ನ ಗೃಹ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಗೃಹ ಸಚಿವರ ಪ್ರಶ್ನೆಗೆ ಎದ್ದು ನಿಂತು ಜೈಲು ಅಧಿಕಾರಿಗಳು ಉತ್ತರ ನೀಡಿದ್ದಾರೆ.
ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತಾಡಿದ ಗೃಹ ಸಚಿವ ಪರಮೇಶ್ವರ್, ರಾಜ್ಯದಲ್ಲಿ ಜೈಲುಗಳಲ್ಲಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ನನಗೆ ಅನೇಕ ಮಾಹಿತಿಗಳು ಬಂದಿವೆ ಅದೆಲ್ಲವನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳು ಕೂಡ ಸೂಚನೆ ಕೊಟ್ಟಿದ್ದಾರೆ. ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಆಗಬೇಕು ಎಂದು ಹೇಳಿದ್ದಾರೆ ಎಂದರು.ಇವತ್ತು ಮೀಟಿಂಗ್ ಕರೆದಿರುವುದೇ ಕ್ರಮಕೈಗೊಳ್ಳುವ ಉದ್ದೇಶಕ್ಕಾಗಿ. ಮೊದಲೆಲ್ಲಾ ಡಿಜಿ ಕರೆದು ಸೂಚನೆ ಕೊಡುತ್ತಿದ್ವಿ. ಇವತ್ತು ಎಲ್ಲಾ ಸೂಪರಿಡೆಂಟ್ಗಳನ್ನ ಕರೆದಿದ್ದೇವೆ. ಪ್ರಮುಖ ಜೈಲಿನ ಎಲ್ಲಾ ಸೂಪರಿಡೆಂಟ್ ಗಳನ್ನ ಕರೆದಿದ್ದೇವೆ. ನಮ್ಮ ಕಮಿಷನರ್ ಗೆ ಸೂಚನೆ ಕೊಟ್ಟು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪರಮೇಶ್ವರ್ ತಿಳಿಸಿದ್ದಾರೆ.



