ಬೆಂಗಳೂರು: ಜನಸಂಖ್ಯೆಯ ಅನುಗುಣವಾಗಿ ಹಣದ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚಾಗಿ ಬೇಕಾಗಿರುವ ನಮ್ಮ ದೇಶದಲ್ಲಿ ಅರ್ಧಂಬರ್ಧ ವಿದ್ಯೆ ಕಲಿಯುವುದರಲ್ಲಿ ಮತ್ತು ದುರ್ಮಾರ್ಗದಲ್ಲಿ ಹಣ ಸಂಪಾದನೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.
ಕನಿಷ್ಠ ವಿದ್ಯೆಯನ್ನು ಕಲಿಯದೆ ಆನ್ ಲೈನ್ ದುರ್ಮಾರ್ಗದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಹೆಸರಿನಲ್ಲಿ ಆಸೆ ಮತ್ತು ಆಮಿಷ ತೋರಿಸಿ ವಂಚಿಸಲು ಮತ್ತು ನಿಷೇಧಿಸಿದ ಡ್ರಗ್ಸ್ ಮಾರಾಟದಲ್ಲಿ ಸಾರ್ವಜನಿಕ ಅಮಾಯಕರುಗಳಿಗೆ ರಣಹದ್ದುಗಳಂತೆ ಕಾಯುತ್ತಿರುತ್ತಾರೆ.
ಪ್ರಕರಣಗಳನ್ನು ಭೇದಿಸಿ ಮತ್ತು ಬಂಧಿಸಿ ಆರೋಪಿಗಳನ್ನು ಜೈಲಿಗಟ್ಟುವಲ್ಲಿ ಪೊಲೀಸರೇನೋ ಮುಂದಾಗಿದ್ದಾರೆ ಆದರೆ ಜೈಲಿನ ಸಿಬ್ಬಂದಿ ಮತ್ತು ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಸರ್ಕಾರದ ಆದೇಶ ಶೇಕಡ 1:5 ಅನುಪಾತದಲ್ಲಿ ಕೈದಿಗಳನ್ನು ನೋಡಿಕೊಳ್ಳಲು ಆದೇಶ ಹೊರಡಿಸಿರುತ್ತದೆ.ಕರ್ನಾಟಕ ರಾಜ್ಯದಲ್ಲಿ 54 ಜೈಲುಗಳಿದ್ದು ಇದರಲ್ಲಿ ಸಬ್ ಜೈಲುಗಳು ಸಹ ಸೇರಿರುತ್ತವೆ. ಅಂದಾಜುನ ಪ್ರಕಾರ 12,550 ಇಡೀ ರಾಜ್ಯದ ಜೈಲುಗಳಲ್ಲಿ ಕೈದಿಗಳನ್ನು ಇಡಬಹುದಾದ ಸ್ಥಳವಿರುವ ಜಾಗದಲ್ಲಿ 16,000 ಕೈದಿಗಳನ್ನು ತುಂಬಿರುತ್ತಾರೆ.
ಆರು ಜನ ಕೈದಿಗಳಿಗೆ ಒಬ್ಬ ವಾರ್ಡನ್ ಇರಬೇಕು, ಆದರೆ 300 ರಿಂದ 350 ಜನ ಇರೋ ಕೈದುಗಳಿಗೆ ಒಬ್ಬನೇ ವಾರ್ಡನ್ ಆಗಿರುತ್ತಾನೆ ಈಗ. ಇದರಲ್ಲಿ ಮಹಿಳಾ ಖೈದಿಗಳು ಸಹ ಸೇರಿಸುತ್ತಾರೆ.ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಒಂದರಲ್ಲಿ ನಾಲ್ಕು ಸಾವಿರ ಕೈದಿಗಳನ್ನು ಇಡುವ ಜಾಗದಲ್ಲಿ 6,000 ಕೈದಿಗಳನ್ನು ಕುರಿಗಳಂತೆ ತುಂಬಿರುತ್ತಾರೆ.
ರಾಜ್ಯ ಸರ್ಕಾರಕ್ಕೆ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಕೊರತೆಗಳನ್ನು ತುಂಬಲು ಎಷ್ಟೇ ಪತ್ರ ಬರೆದರು ಆಸಕ್ತಿ ತೋರುತ್ತಿಲ್ಲ.
ನೀರು, ಚಾಪೆ,ದಿಂಬು, ಹೊದಿಕೆಗಳು,ತಟ್ಟೆ ಅಡುಗೆ ಮಾಡುವವರು ಮತ್ತು ಸ್ವಚ್ಛಗೊಳಿಸುವವರ ಸಂಖ್ಯೆಯು ಕೆಲವೊಮ್ಮೆ ಆರೋಪಿಗಳು ಬಡಿದಾಡಿಕೊಂಡಿರುವುದು ಸಹ ಉಂಟು ಹಾಗೂ ಇತರೆ ಅವಶ್ಯಕತೆ ವಸ್ತುಗಳ ಕೊರತೆಯೂ ಸಹ ಎದ್ದು ಕಾಣುತ್ತಿದೆ. ಜೈಲಿನ ಒಳಗೆ ಗಲಾಟೆಯಾದರೆ ನಿಯಂತ್ರಿಸಲು ಸಿಬ್ಬಂದಿ ಕೊರತೆಗಳು ಎದ್ದು ಕಾಣುತ್ತದೆ.
ಪ್ರತಿದಿನ ಜೈಲಿಗೆ ಬರುವವರ ಸಂಖ್ಯೆ ಜಾಸ್ತಿ, ಬಿಡುಗಡೆಯಾಗುವವರ ಸಂಖ್ಯೆ ತೀರಾ ವಿರಳ. ಇದಲ್ಲದೆ ದೇವನಹಳ್ಳಿ ಹಾಗೂ ಇನ್ನೂ ಮೂರು ಕಡೆ ಹೊಸದಾಗಿ ಜೈಲುಗಳನ್ನು ಸಹ ಅತಿ ಶೀಘ್ರದಲ್ಲೇ ಉದ್ಘಾಟಿಸುವವರಿದ್ದಾರೆ, ಇಲ್ಲಿಗೂ ಸಹ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ.