ಚಿಂತಾಮಣಿ: ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರತಿಯೊಂದು ಮನೆಗೆ ಕುಡಿಯುವ ನೀರು ಸರಬರಾಜು ಮಾಡಬೇಕೆಂಬ ಕನಸ್ಸನ್ನು ನಾನು 10 ವರ್ಷಗಳ ಹಿಂದೆನೆ ಕಂಡಿದ್ದೆ, ಆದ್ರೆ ಆ ಕನಸ್ಸು ಇಂದು ನಾನು ಸಚಿವನಾದ ಬಳಿಕ ಜಲಜೀವನ್ ಮಿಷನ್ ಮೂಲಕ ಮನೆಮನೆಗೆ ನೀರು ಕೋಡುವುದರ ಮೂಲಕ ನನ್ನ ಕನಸ್ಸು ನನಸಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿಂತಾಮಣಿ ರವರಿಂದ ಚಿಂತಾಮಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಜೀವನ್ ಮೀಷನ್ ಯೋಜನೆಯಡಿಯಲ್ಲಿ 83 ಗ್ರಾಮಗಳು ಸೇರಿದಂತೆ ಮುರುಗಮಲ್ಲ, ಅಂಬಾಜಿದುರ್ಗಾ ಹೊಬಳಿ ಹಾಗೂ ಕಸಬಾ ಹೊಬಳಿಯಲ್ಲಿ 245 ಗ್ರಾಮಗಳಲ್ಲಿ 171ಕೋಟಿ ರೂ ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ರವರು ಹೊಸಹುಡ್ಯ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ರವರು ಮಾತನಾಡಿ ಪ್ರತಿ ಗ್ರಾಮದಲ್ಲಿನ ಪ್ರತಿ ಮನೆ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ಒದಿಗಿಸುವ ಜಲಜೀವನ್ ಮಿಷನ್ ಯೋಜನೆ ಕೇಂದ್ರ ಸರಕಾರದ 45%, ರಾಜ್ಯ ಸರಕಾರದ 45% ಹಾಗೂ ಸಮುದಾಯ ವಂತಿಕೆ 10% ನಿಂದ ಕೂಡಿರುವ ಯೋಜನೆಯಾಗಿದ್ದು, 10% ನ್ನು ಕೂಡ ರಾಜ್ಯ ಸರ್ಕಾರನೇ ಭರಿಸುತ್ತಿದ್ದು,ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿಯೂ ಕೂಡ ಈ ಕಾರ್ಯಕ್ರಮ ಅನುಷ್ಟಾನವಾಗಬೇಕಾಗಿದ್ದು,
ಗ್ರಾಮಗಳಲ್ಲಿ ಜನರು ಈ ಯೋಜನೆಯ ಕಾಮಗಾರಿಗೆ ಸಹಕಾರಿ ನೀಡ ಕಾಮಗಾರಿ ಉತ್ತಮವಾಗಿ ನಡೆಯಲು ಎಲ್ಲಾರು ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರತಿ ಮನೆ ಮನೆಗೂ ಕುಡಿಯುವ ನೀರು ಸರಬರಾಜು ಮಾಡಬೇಕೆಂಬ ಕನಸ್ಸು ನಾನು ಹತ್ತು ವರ್ಷಗಳ ಹಿಂದೆ ಕಂಡಿದ್ದೆ,ಆದ್ರೆ ಇಂದು ಆ ಕನಸ್ಸು ನನಸ್ಸಾಗುತ್ತಿದೆ ಎಂದರು.
ಶಿಡ್ಲಘಟ್ಟ ಶಾಸಕ ಮೇಲೂರು ಬಿ.ಎನ್ ರವಿಕುಮಾರ್ ಮಾತನಾಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 136 ಗ್ರಾಮಗಳಿಗೆ 76 ಕೋಟಿ ರೂ ವೆಚ್ಚದಲ್ಲಿ ಮನೆ ಮನೆಗೂ ನೀರು ಕೊಡುವ ಜಲಜೀವನ್ ಮಿಷನ್ ಗೆ ಚಾಲನೆ ನೀಡಲಾಗುತ್ತಿದ್ದು, ಈ ಯೋಜನೆಯ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು,ಶಿಡ್ಲಘಟ್ಟ ತಾಲೂಕು ಹಿಂದುಳಿದ ತಾಲೂಕಾಗಿದ್ದು, 211 ಕೀಮಿ ರಸ್ತೆಗಳು ಅಭಿವೃದ್ದಿಯಾಗಬೇಕಾಗಿದೆ,
43 ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆ ಇದ್ದು, ತಾನೂ ರಾಜಕೀಯಕ್ಕೆ ಕಾರಣಾಂತರಗಳಿಂದ ಬಂದಿದ್ದು, ಕ್ಷೇತ್ರದಲ್ಲಿ ಎಲ್ಲಾ ಜನತೆಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣವನ್ನು ಕೊಡಿಸಬೇಕೆಂಬ ಗುರಿ ಹೊಂದಿದ್ದೇನೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಎನ್.ವಿ ಶ್ರೀರಾಮರೆಡ್ಡಿ, ಏನಿಗಿದಲೇ ಗ್ರಾ.ಪಂ ಅಧ್ಯಕ್ಷೆ ಶಿವಮ್ಮ, ಬುರುಡಗುಂಟೆ ಗ್ರಾ.ಪಂ ಅಧ್ಯಕ್ಷೆ ಗಾಯಿತ್ರಿಭರತ್ ಕುಮಾರ್, ಚಿಲಕಲನೇರ್ಪು ಗ್ರಾ.ಪಂ ಅಧ್ಯಕ್ಷ ಆರ್.ಟಿ ಪ್ರಸಾದ್,ಮುಖಂಡರಾದ ತಾದೂರು ರಘು,ಮೇಲೂರು ಉಮೇಶ್, ದರ್ಮೇಂದ್ರಣ್ಣ, ರಾಜೇಶ,ಶ್ರೀನಿವಾಸ್(SMS),ನಡಂಪಲ್ಲಿ ಶ್ರೀನಿವಾಸ್, ವೆಂಕಟರಾಮರೆಡ್ಡಿ, ನಲ್ಲಪ್ಪರೆಡ್ಡಿ ಶ್ರೀರಾಮರೆಡ್ಡಿ, ಕೆಂಚಾರ್ಲಹಳ್ಳಿ ಕೃಷ್ಣಾರೆಡ್ಡಿ, ನಾರಾಯಣರೆಡ್ಡಿ, ತುಳವನೂರು ರವಿ,ಏನಿಗಿದಲೇ ರಮೇಶ್ ಸೇರಿದಂತೆ ಚಿಲಕಲನೇರ್ಪು ಹೊಬಳಿಯ ಮುಖಂಡರು ಮತಿತ್ತರರು ಉಪಸ್ಥಿತಿರಿದ್ದರು.