ದೇವನಹಳ್ಳಿ : ತಾಲೂಕಿನ ಅತ್ಯಂತ ಶ್ರೀಮಂತ ಪಂಚಾಯಿತಿ ಎಂದು ಹೆಸರು ಹೊಂದಿರುವ, ಕೇಂದ್ರ ಸರಕಾರದಿಂದ ಅತ್ಯುನ್ನತ ಪಂಚಾಯಿತಿ ಎಂಬ ಪ್ರಶಸ್ತಿ ತೆಗೆದುಕೊಂಡ ಹಾಗೂ ಬಿರುಸಿನಿಂದ ಅಭಿವೃದ್ಧಿ ಹೊಂದುತ್ತಿರುವ ಅಂತಾರಾಷ್ಟೀಯ ವಿಮಾನ ನಿಲ್ದಾಣ ಸಮೀಪವಿರುವ ಅಣ್ಣೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಜಮಾಬಂದಿ ಕಾರ್ಯಕ್ರಮ ನಡೆಯಿತು.
ಜಮಾಬಂದಿ ಎಂದರೆ ಗ್ರಾಮ ಪಂಚಾಯಿತಿಯ ಎಲ್ಲ ಲೆಕ್ಕ ಮತ್ತು ರಿಜಿಸ್ಟರ್ಗಳ ತನಿಖೆಯಷ್ಟೇ ಅಲ್ಲ. ಜಮಾಬಂದಿ ಅಧಿಕಾರಿ ಮತ್ತು ತಂಡ ಆಯ್ದ ಕಾಮಗಾರಿ ಗಳ ತನಿಖೆಯನ್ನೂ ಮಾಡುತ್ತದೆ ಎಂದು ಜಮಾಬಂಧಿ ನೋಡಲ್ ಅದಿಕಾರಿ ರಮೇಶ್ ತಿಳಿಸಿದರು.
ದೇವನಹಳ್ಳಿ ತಾಲೂಕು ಅಣ್ಣೇಶ್ವರ ಗ್ರಾಮ ಪಂಚಾಯಿತಿ ಯಲ್ಲಿ 2022-2023 ಹಾಗೂ 2024-25 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,
ಜಮಾಬಂದಿ ನಡೆಸುವವರ ಪ್ರಮುಖ ಜವಾಬ್ದಾರಿಗಳಲ್ಲಿ, ಫಲಾನುಭವಿ ಆಧಾರಿತ ಯೋಜನೆ ಗಳಲ್ಲಿ ಫಲಾನುಭವಿಗಳು ಪೂರ್ಣ ಮೊತ್ತವನ್ನು ಸ್ವೀಕರಿಸಿ¬ದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು.ಹಿಂದಿನ ವರ್ಷದ ಅನುದಾನವನ್ನೇ ಜನರಿಗೆ ನೀಡದಿದ್ದರೆ ಮತ್ತೆ ಅವರಲ್ಲಿ ಜಾಗೃತಿಯ ಮಾತನಾಡುವುದು ಹೇಗೆ ಎಂಬುದು ಸದಸ್ಯರ ಹಾಗೂ ಗ್ರಾಮಸ್ಥರ ಪ್ರಶ್ನೆ ಯಾಗುತ್ತದೆ. ಜಮಾಬಂದಿ ಸರಿಯಾಗಿ ನಡೆದಿದ್ದರೆ ಈ ಸನ್ನಿವೇಶ ಸೃಷ್ಟಿಯಾಗುವುದಿಲ್ಲ.
ಸರ್ಕಾರದ ಅನುದಾನ ಗಳ ಬಳಕೆ, ಮಾಸಿಕ ಲೆಕ್ಕಪತ್ರ, ಪರಿಶಿಷ್ಟ ಸಮುದಾ ಯಕ್ಕೆ ಮೀಸಲಿಟ್ಟ ಅನುದಾನದ ಬಳಕೆ, ಪಂಚಾಯಿ ತಿಯ ಇತರೆ ಸಮಿತಿಗಳ ಕಾರ್ಯನಿರ್ವಹಣೆ ಯನ್ನೂ ಜಮಾಬಂದಿ ಸಂದರ್ಭದಲ್ಲಿ ಪರಿಶೀಲಿಸಬೇಕಾ ಗುತ್ತದೆ. ಆದ್ದರಿಂದ ವರ್ಷಕೊಮ್ಮೆ ಕಡ್ಡಾಯವಾಗಿ ಜಮಾಬಂದಿ ಯನ್ನು ಆಯಾ ಕಾಲಮಿತಿಯಲ್ಲಿ ನಡೆಸಲು ಕ್ರಮ ಕೈ ಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಣ್ಣೇಶ್ವರ ಪಂಚಾಯಿತಿ ಅದ್ಯಕ್ಷೆ ಶ್ರೀಮತಿ ಉಮಾ, ಉಪಾದ್ಯಕ್ಷ ಮುನಿರಾಜಪ್ಪ, ಸದಸ್ಯರಾದ ಚಂದ್ರಶೇಖರ್, ರಾಜಣ್ಣ, ಮುಕುಂದ, ವೆಂಕಟೇಶ್, ಶಿಲ್ಪಾಅಶೋಕ್, ಮಂಜುಳಾ ವೆಂಕಟೇಶ್, ರುಕ್ಮಿಣಿಯಮ್ಮ, ಮುನಿಲಕ್ಷ್ಮಮ್ಮ ನಾರಾಯಣಸ್ವಾಮಿ, ಗೋಪಾಲ್, ಪ್ರಭಾವತಿವೇಣು ಗೋಪಾಲ್,ಪಿಡಿಒ ಗಂಗರಾಜು, ಕಾರ್ಯದರ್ಶಿ ಕೃಷ್ಣಮೂರ್ತಿ, ಗ್ರಾಮದ ಮುಖಂಡರಾದ ಅಶೋಕ,ಚೇತನ್, ಮುನಿಕೃಷ್ಣಪ್ಪ ಗ್ರಾಮಸ್ಥರಾದ ಚರಣ್, ಮುನಿಂದ್ರ, ಹರೀಶ್ ಮುಂತಾದವರು ಇದ್ದರು.