ದೇವನಹಳ್ಳಿ: ತಾಲೂಕಿನ ಅತ್ಯಂತ ಶ್ರೀಮಂತಪಂಚಾಯಿತಿ ಎಂದು ಹೆಸರು ಹೊಂದಿರುವ, ಕೇಂದ್ರ ಸರಕಾರದಿಂದ ಅತ್ಯುನ್ನತ ಪಂಚಾಯಿತಿಎಂಬ ಪ್ರಶಸ್ತಿ ತೆಗೆದುಕೊಂಡ ಹಾಗೂ ಬಿರುಸಿನಿಂದ ಅಭಿವೃದ್ಧಿ ಹೊಂದುತ್ತಿರುವ ಅಂತಾರಾಷ್ಟೀಯ ವಿಮಾನ ನಿಲ್ದಾಣ ಸಮೀಪವಿರುವ ಅಣ್ಣೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಜಮಾಬಂದಿ ಕಾರ್ಯಕ್ರಮ ನಡೆಯಿತು.
ಜಮಾಬಂದಿ ಎಂದರೆ ಗ್ರಾಮ ಪಂಚಾಯಿತಿಯ ಎಲ್ಲ ಲೆಕ್ಕ ಮತ್ತು ರಿಜಿಸ್ಟರ್ಗಳ ತನಿಖೆಯಷ್ಟೇ ಅಲ್ಲ. ಜಮಾಬಂದಿ ಅಧಿಕಾರಿ ಮತ್ತು ತಂಡ ಆಯ್ದ ಕಾಮಗಾರಿಗಳ ತನಿಖೆಯನ್ನೂ ಮಾಡುತ್ತದೆ ಎಂದು ಜಮಾಬಂಧಿ ನೋಡಲ್ ಅಧಿಕಾರಿ ರಮೇಶ್ ತಿಳಿಸಿದರು.ದೇವನಹಳ್ಳಿ ತಾಲೂಕು ಅಣ್ಣೇಶ್ವರ ಗ್ರಾಮಪಂಚಾಯಿತಿ ಯಲ್ಲಿ 2022-2023 ಹಾಗೂ 2024-25 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಜಮಾಬಂದಿ ನಡೆಸುವವರ ಪ್ರಮುಖ ಜವಾಬ್ದಾರಿಗಳಲ್ಲಿ,
ಫಲಾನುಭವಿ ಆಧಾ¬ರಿತ ಯೋಜನೆಗಳಲ್ಲಿ ಫಲಾನುಭವಿ¬ಗಳು ಪೂರ್ಣ ಮೊತ್ತವನ್ನು ಸ್ವೀಕರಿಸಿ¬ದ್ದಾರೆಯೇ ಎಂಬುದನ್ನು ಖಚಿತಪಡಿಸಿ¬ಕೊಳ್ಳುವುದು.
ಹಿಂದಿನ ವರ್ಷದ ಅನುದಾನವನ್ನೇ ಜನರಿಗೆನೀಡದಿದ್ದರೆ ಮತ್ತೆ ಅವರಲ್ಲಿ ಜಾಗೃತಿಯ ಮಾತನಾಡು¬ವುದು ಹೇಗೆ ಎಂಬುದು ಸದಸ್ಯರ ಹಾಗೂ ಗ್ರಾಮಸ್ಥರ ಪ್ರಶ್ನೆಯಾಗುತ್ತದೆ.
ಜಮಾಬಂದಿ ಸರಿಯಾಗಿ ನಡೆದಿದ್ದರೆ ಈ ಸನ್ನಿವೇಶ ಸೃಷ್ಟಿಯಾಗುವುದಿಲ್ಲ. ಸರ್ಕಾರದಅನುದಾನಗಳ ಬಳಕೆ, ಮಾಸಿಕ ಲೆಕ್ಕಪತ್ರ,ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಅನುದಾನದ ಬಳಕೆ, ಪಂಚಾಯಿತಿಯ ಇತರೆ ಸಮಿತಿಗಳ ಕಾರ್ಯನಿರ್ವಹಣೆಯನ್ನೂ ಜಮಾಬಂದಿ ಸಂದರ್ಭದಲ್ಲಿ ಪರಿಶೀಲಿಸ ಬೇಕಾಗುತ್ತದೆ. ಆದ್ದರಿಂದ ವರ್ಷಕೊಮ್ಮೆ ಕಡ್ಡಾಯವಾಗಿ ಜಮಾಬಂದಿಯನ್ನು ಆಯಾ ಕಾಲಮಿತಿಯಲ್ಲಿ ನಡೆಸಲು ಕ್ರಮ ಕೈ ಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಣ್ಣೇಶ್ವರ ಪಂಚಾಯಿತಿ ಅದ್ಯಕ್ಷೆ ಉಮಾ, ಉಪಾದ್ಯಕ್ಷ ಮುನರಾಜಪ್ಪ, ಸದಸ್ಯರಾದ ಚಂದ್ರಶೇಖರ್, ರಾಜಣ್ಣ,ಮುಕುಂದ, ವೆಂಕಟೇಶ್, ಶಿಲ್ಪಾಅಶೋಕ್, ಮಂಜುಳಾ ವೆಂಕಟೇಶ್, ರುಕ್ಮಿಣಿಯಮ್ಮ, ಮುನಿಲಕ್ಷ್ಮಮ್ಮ ನಾರಾಯಣಸ್ವಾಮಿ, ಗೋಪಾಲ್, ಪ್ರಭಾವತಿವೇಣು ಗೋಪಾಲ್,ಪಿಡಿಒ ಗಂಗ
ರಾಜು, ಕಾರ್ಯದರ್ಶಿ ಕೃಷ್ಣಮೂರ್ತಿ, ಗ್ರಾಮದಅಶೋಕ,ಚೇತನ್, ಮುನಿಕೃಷ್ಣಪ್ಪ ಗ್ರಾಮಸ್ಥರಾದ ಚರಣ್, ಮುನಿಂದ್ರ, ಹರೀಶ್ ಮುಂತಾದವರು ಇದ್ದರು.