ಅಮರಾವತಿ: ಚಂದ್ರಬಾಬು ಬಂಧನವನ್ನು ವಿರೋಧಿಸಿ ಟಿಡಿಪಿ ಇಂದು ರಾಜ್ಯಾದ್ಯಂತ ಬಂದ್‍ಗೆ ಕರೆ ನೀಡಿದೆ. ಇದರಿಂದ ಬೆಳ್ಳಂಬೆಳಗ್ಗೆಯೇ ಟಿಡಿಪಿ ಪದಾಧಿಕಾರಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಟಿಡಿಪಿ ಮುಖಂಡರನ್ನು ಪೊಲೀಸರು ಎಲ್ಲೆಂದರಲ್ಲಿ ತಡೆಯುತ್ತಿದ್ದು, ಪೊಲೀಸರು ಪ್ರಮುಖ ಟಿಡಿಪಿ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ.
ಈ ಬಂದ್ ಕರೆಗೆ ಜನಸೇನೆ ಸಿಪಿಐ, ಲೋಕಸತ್ತಾ ಸೇರಿದಂತೆ ವಿವಿಧ ಗುಂಪುಗಳು ಬೆಂಬಲ ಸೂಚಿಸಿವೆ. ಸಾರ್ವಜನಿಕ ಸಮಸ್ಯೆಗಳ ಬಾಯಿ ಮುಚ್ಚಿಸಲು ಚಂದ್ರಬಾಬು ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಟಿಡಿಪಿ ಆರೋಪಿಸಿದೆ.ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಮುಚ್ಚಲಾಗುವುದು.
ಟಿಡಿಪಿ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ಬಂದ್‍ಗೆ ಜನಸೇನಾ ಪಕ್ಷ ತನ್ನ ಒಗ್ಗಟ್ಟು ವ್ಯಕ್ತಪಡಿಸಿದೆ. ಚಂದ್ರಬಾಬು ಬಂಧನವನ್ನು ಖಂಡಿಸಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿಕೆ ನೀಡಿದ್ದು, ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದ್ದು, ಆಡಳಿತ ಪಕ್ಷವು ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಟೀಕಿಸಿದರು.
ಜನರ ಪರ ಮಾತನಾಡುವ ವಿರೋಧ ಪಕ್ಷಗಳ ಮೇಲೆ ರಾಜಕೀಯ ಪಕ್ಷ ಕೇಸು, ಬಂಧನಗಳ ಮೂಲಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
Leave a Review