ಮಾಗಡಿ: ಕೆಂಪೇಗೌಡರ ನಾಡಾದ ಮಾಗಡಿ ತಾಲ್ಲೂಕಿನ ಬಲಿಜ ಸಮುದಾಯಕ್ಕೆ ಚಿಕ್ಕಮುದಿಗೆರೆ ಗ್ರಾಪಂ ಮಾಜಿ ಅದ್ಯಕ್ಷರಾದ ಜಾನಿಗೆರೆ ರವೀಶ್ ಅವರು ಅವಿರೋಧವಾಗಿ ಆಯ್ಕೆಯಾದರು.ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಸಮುದಾಯದ ಸರ್ವ ಮುಖಂಡರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಬಲಿಜ ಸಮುದಾಯವು ಹತ್ತರಿಂದ ಹದಿನೈದು ಸಾವಿರ ಸಂಖ್ಯೆಯಲ್ಲಿ ನಮ್ಮ ಸಮುದಾಯವಿದೆ.
ಬಲಿಜ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕ, ರಾಜಕೀಯವಾಗಿ ಪ್ರಸ್ತುತ ಸಮಾಜದಲ್ಲಿ ಪ್ರವರ್ಧಮಾನಕ್ಕೆ ಬರಲು ಶ್ರಮಿಸಲಾಗುವುದು.ಒಂದು ಸಮುದಾಯ ಏಳಿಗೆಗಾಗಿ ಮುಖಂಡರಾದ ನಾವುಗಳು ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ಸಮುದಾಯ ಏಳಿಗೆ ಕಾಣಲು ಸಾಧ್ಯವಾಗುತ್ತದೆ. ಸರಕಾರದಿಂದ ಬರುವಂತಹ ಸವಲತ್ತುಗಳನ್ನು ಬಲಿಜ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಾನಿಗೆರೆ ರವೀಶ್ ಸ್ಪಷ್ಟಪಡಿಸಿದರು.
ಗೌರವಾದ್ಯಕ್ಷ ಪವನ್, ಕಾರ್ಯದರ್ಶಿ ಗುರು ಮತ್ತು ಪವನ್, ಖಜಾಂಚಿ ಗುರುರಾಜು, ಉಪಾದ್ಯಕ್ಷ ಪ್ರಸನ್ನಕುಮಾರ್, ರಂಗಪ್ಪ,ಸಲಹೆಗಾರರಾಗಿ ಶೇಷಪ್ಪ, ಕೃಷ್ಣಪ್ಪ, ಗಂಗಯ್ಯ, ಗರುಡಪ್ಪ, ಲೆಕ್ಕಪರಿಶೋಧಕ ರಂಗನಾಥ್, ಉಪಕಾರ್ಯದರ್ಶಿ ಹೇಮಂತ ಕುಮಾರ್, ತಿಪ್ಪಸಂದ್ರ ರಘು, ಚನ್ನಪಟ್ಟಣ ತಾಲ್ಲೂಕು ಅದ್ಯಕ್ಷ ಕಿಶೋರ್, ಕನಕಪುರ ತಾಲ್ಲೂಕು ಬಾಲಯ್ಯ, ಕಾರ್ಯದರ್ಶಿ ಕೃಷ್ಣಪ್ಪ, ಸಾತನೂರು ವೆಂಕಟೇಶ್ ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.