ಚಂದಾಪುರ: ಇಡೀ ಜಗತ್ತಿಗೆ ಮಾದರಿ ಆಡಳಿತವನ್ನು ನೀಡಿದಂತ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂಬುದಾಗಿ ಹೆನ್ನಾಗರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ ತಿಳಿಸಿದರು.
ಅವರು ಕಾಚನಾಯಕನಹಳ್ಳಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಕಾಚನಾಯಕನಹಳ್ಳಿ ವತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಆಚರಣೆ ಮತ್ತು ಅನ್ನ ಸಂತಪರ್ಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೆರೆಕಟ್ಟಿ ನಿರ್ಮಿಸಿದ ಪುಣ್ಯಾತ್ಮ ಪ್ರಭು:- ಸಂಘದ ಅಧ್ಯಕ್ಷರಾದ ಎನ್ ರಾಜಣ್ಣ ಮಾತನಾಡಿ ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರು ನಿರ್ಮಾಣದ ಶಿಲ್ಪಿಗಳಾಗಿದ್ದು ಇವರು ವೈಜ್ಞಾನಿಕವಾಗಿ ಹಾಗೂ ಪರಿಸರದ ಸಂರಕ್ಷಣೆಗಾಗಿ ಬೆಂಗಳೂರು ಸುತ್ತಮುತ್ತ ಸಾವಿರಾರು ಕೆರೆಕಟ್ಟೆಗಳನ್ನು ನಿರ್ಮಿಸಿ ಮಹಾ ಪುಣ್ಯಾತ್ಮ ಪ್ರಭುಗಳಾಗಿದ್ದಾರೆ ಇಂತಹ ಮಹಾತ್ಮರನ್ನು ಸ್ಮರಿಸಿಕೊಳ್ಳುವುದೇ ನಮ್ಮೆಲ್ಲ ಸೌಭಾಗ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಮುಖಂಡರನ್ನು ಸನ್ಮಾನಿಸಲಾಯಿತು,ಅನ್ನದಾನ ಹಮ್ಮಿಕೊಳ್ಳಾಗಿತ್ತು.ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷರಾದ ನಂಜಪ್ಪ, ವೀರ ಕೆಂಪೇಗೌಡರ ಸಂಘ ಹೆಬ್ಬಗೋಡಿ ಅಧ್ಯಕ್ಷರಾದ ದೊರೆಸ್ವಾಮಿಗೌಡ, ಉಪಾಧ್ಯಕ್ಷ ಮುನಿರಾಜ್, ಪ್ರಧಾನ ಕಾರ್ಯದರ್ಶಿ ವಿನಯ್ ಗೌಡ, ಖಜಾಂಚಿ ರಾಜಣ್ಣ ಎನ್.ಪಿ.ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ,ಕಾರ್ಯದರ್ಶಿ ರವೀಂದ್ರ, ಮಹಿಳಾ ಕಾರ್ಯದರ್ಶಿ ಲತಾಕುಮಾರ್, ನಿರ್ದೇಶಕರಾದ ವಿಜಯಮ್ಮ,ಯಶೋಧಮ್ಮ, ಮುಖ್ಯ ಅತಿಥಿಗಳಾಗಿ ನಂದಾಕುಮಾರ್, ಬಾಬು, ರಾಮಸ್ವಾಮಿ ರೆಡ್ಡಿ, ಯಲ್ಲಾರೆಡ್ಡಿ, ಮುನಿರೆಡ್ಡಿ, ವಿಜಯ್ ಕುಮಾರ್, ವಿನಯ್ ರೆಡ್ಡಿ, ಇನ್ನೂ ಮುಂತಾದವರು ಹಾಜರಿದ್ದರು.