ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಕೆ,ಸುಧಾಕರ್ ವಿರುದ್ದ ಪ್ರಚಾರ ಮಾಡಿ ನಮ್ಮ ತಿಗಳ ಜನಾಂಗ ಮತ್ತು ಇತರೆ ಎಲ್ಲಾ ಹಿಂದುಳಿದ ಸಮುದಾಯಗಳು ಅವರ ವಿರುದ್ದ ಮತಚಲಾಯಿಸುವಂತೆ ಪ್ರೇರೇಪಿಸುತ್ತೆವೆ ಎಂದು ಕರ್ನಾಟಕ ತಿಗಳ ಸಂಘದ ರಾಜ್ಯ ನಿಕಟ ಪೂರ್ವ ಅಧ್ಯಕ್ಷ ಜಯರಾಜ್ ಹೇಳಿದರು.
ದೇವನಹಳ್ಳಿ ಪಟ್ಟಣದ ಶ್ರೀಕಂಠ ಪ್ಯಾಲೇಸ್ ನಲ್ಲಿ ನಡೆದ ತಿಗಳ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು.ನಮ್ಮ ಜನಾಂಗದ ಮಾಲೂರು ತಾಳುಕಿನ ಹೂಡಿ ವಿಜಯಕುಮಾರ್ ಎಂಬವರು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಅಂತಹ ವ್ಯಕ್ತಿಗೆ ನೀನು ಮಾಲೂರಿನಲ್ಲಿ ಹೋಗಿ ಜನಸೇವೇ ಮಾಡು ಎಂದಿದ್ದರು ಅವರು ಅಲ್ಲಿ ಜನಸಂಘಟನೆ ಮಾಡುತ್ತಿದ್ದರೂ,
ಕಳೆದ ಅವರಿಗೆ ಟಿಕೇಟ್ ತಪ್ಪಿಸಿ ನಂಜೇಗೌಡರಿಗೆ ಟಿಕೆಟ್ ಕೊಡಿಸುವಲ್ಲಿ ಸುಧಾಕರ್ ಕೈವಾಡ ಪ್ರಮುಖ ವಾಗಿತ್ತು ನಮ್ಮ ಜನಾಂಗವನ್ನು ರಾಜಕೀಯವಾಗಿ ತುಳಿಯುವ ಅವರ ಪ್ರಯತ್ನ ಸ್ಪಷ್ಟವಾಯಿತು ಈಗ ಅದರ ಸೇಡು ತೀರಿಸಿಕೊಳ್ಳುವ ಕಾಲ ಬಂದಿದೆ ಈ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ತಿಗಳ ಜನಾಂಗದ ಮತದಾರರು 1.20 ಲಕ್ಷ ಇದ್ದು ಎಲ್ಲರನ್ನೂ ಸಂಪರ್ಕಿಸಿ ಸುಧಾಕರ್ ಹೊರತುಪಡಿಸಿ ಇನ್ಯಾರಿಗಾದರೂ ಮತ ಹಾಕಿ ಎಂದು ಪ್ರಚಾರ ಮಾಡುತ್ತೆವೆ ಎಂದರು.
ನಮ್ಮ ಜನಾಂಗದವರು ನಮ್ಮ ಮಿತ್ರ ವರ್ಗದ ಇತರೇ ಜನಾಂಗದರು ನಮ್ಮ ಜನಾಂಗದ ಅಭ್ಯರ್ಥಿಗೆ ಮತ ಹಾಕುವ ಮೂಲಕ ಈ ಬಾರಿ ಸುಧಾಕರ್ ರವರನ್ನು ಸೋಲಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಿಗಳರ(ವನ್ನಿಕುಲ ಕ್ಷತ್ರೀಯರ) ಸಂಘದ ರಾಜ್ಯ ಅಧ್ಯಕ್ಷರುಗಳಾದ ಎಚ್.ಸುಬ್ಬಣ್ಣ, ಕೃಷ್ಣಮೂರ್ತಿ, ಉಪಾಧ್ಯಕ್ಷ ವೈ. ವಿ.ಮುನಿರಾಜು, ವೈ.ಶಾಮಣ್ಣ, ಎಸ್.ಸಿ. ಚಂದ್ರಪ್ಪ, ನಿರ್ದೇಶಕರು ಗಳಾದ ಪಿ.ಪುಟ್ಟರಾಜು, ಕೆ.ಎಂ.ಮಂಜುನಾಥ್, ಕೋಲಾರ ಜಿಲ್ಲಾ ತಿಗಳ ಜನಾಂಗದವರು ಇದ್ದರು.