ಚಳ್ಳಕೆರೆ: ನಗರದ ಹೃದಯ ಭಾಗದಲ್ಲಿರುವ ಇಂದಿರಾ ಕಾಂಪ್ಲೆಕ್ಸ್ ಸೇರಿದಂತೆ ನಗರಸಭೆ ವ್ಯಾಪ್ತಿಯ 94 ವಾಣಿಜ್ಯ ಮಳಿಗೆಗಳ ವರ್ತಕರಿಗೆ ಬುಧವಾರದ ಮುಂಜಾನೆ ಅಕ್ಷರಶಃ ಆಘಾತ ಕಾದಿತ್ತು. ನೂರಾರು ಪೊಲೀಸರ ಸರ್ಪಗಾವಲು, ಐದಾರು ಜೆಸಿಬಿಗಳ ಘರ್ಜನೆ ಹಾಗೂ ಅಧಿಕಾರಿಗಳ ದಿಢೀರ್ ಆಗಮನ ನಗರದಲ್ಲಿ ಭಾರೀ ಹೈಡ್ರಾಮಕ್ಕೆ ಕಾರಣವಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ನಡೆದ ಈ ಏಕಾಏಕಿ ಕಾರ್ಯಾಚರಣೆ ಹಾಗೂ ಆಡಳಿತದ ಆತುರದ ನಡೆ ವರ್ತಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಈ ಇಡೀ ಪ್ರಹಸನದಲ್ಲಿ ಎದ್ದು ಕಾಣುವುದು ಆಡಳಿತ ಯಂತ್ರದ ಸಮನ್ವಯದ ಕೊರತೆ ಮತ್ತು ಅಮಾನವೀಯ ನಡೆ. ನಗರಸಭೆಯಿಂದ ಮಳಿ ಗೆಗಳನ್ನು ಖಾಲಿ ಮಾಡಿ ಬೀಗ ಒಪ್ಪಿಸಲು ವರ್ತಕರಿಗೆ 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಆಶ್ಚರ್ಯವೆಂದರೆ ಈ 30 ದಿನಗಳ ಗಡುವು ಮುಗಿಯುವ ಮುನ್ನವೇ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು. ವರ್ತಕರಿಗೆ ಯಾವುದೇ ಅಧಿಕೃತ ‘ಡೆಮಾಲಿಷನ್ ಆರ್ಡರ್’ (ತೆರವು ಆದೇಶ)ನೀಡದೆ, ಹಿಂದಿನ ದಿನ ಸಂಜೆ ಕೇವಲ 5:30ರಸುಮಾರಿಗೆ ಬಂದು ಮಳಿಗೆ ತೆರವು ಮಾಡಿ ಎಂದು ಬಾಯಿಮಾತಿನಲ್ಲಿ ಫರ್ಮಾ ನು ಹೊರಡಿಸಿ, ಮರುದಿನ ಬೆಳ್ಳಂಬೆಳಗ್ಗೆಯೇ ಜೆಸಿಬಿ ತಂದು ನಿಲ್ಲಿಸುವುದು ಎಷ್ಟರಮಟ್ಟಿಗೆ ಸರಿ. ತೆರವು ಕಾರ್ಯಾಚರಣೆಗೂ ಮುನ್ನ ಎಲ್ಲಾ ವರ್ತಕರನ್ನು ಸೇರಿಸಿ ಕನಿಷ್ಠ ಒಂದು ಸಭೆ ಮಾಡುವ ಅಥವಾ ಪತ್ರಿಕಾ ಪ್ರಕಟಣೆ ನೀಡುವ ಸೌಜನ್ಯವ ನ್ನೂ ಅಧಿಕಾರಿಗಳು ತೋರದಿರುವುದು ವ್ಯಾಪಾರಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೀದಿಗೆ ಬೀಳಲಿದೆ ಸಾವಿರಾರು ಕುಟುಂಬಗಳ ಬದು ಕುಇದು ಕೇವಲ 94 ಕಾಂಕ್ರೀಟ್ ಕಟ್ಟಡಗಳ ಪ್ರಶ್ನೆಯಲ್ಲ; ಸಾವಿರಾರು ಜೀವಗಳ ಉಸಿರಿನ ಪ್ರಶ್ನೆ. ಪ್ರತಿಯೊಂದು ಅಂಗಡಿಯಲ್ಲಿಯೂ ತಲಾ 4 -5 ಮಂದಿ ದುಡಿಯುತ್ತಿದ್ದಾರೆ. ಅವರ ಹೆಂಡತಿ, ಮಕ್ಕಳು, ವಯಸ್ಸಾದ ಪೋಷಕರ ಆರೋಗ್ಯದ ಖರ್ಚು-ವೆಚ್ಚಗಳು ಸೇರಿದಂತೆ ಇಡೀ ಸಂಸಾರ ಈ ವ್ಯಾಪಾರದ ಮೇಲೆಯೇ ಅವಲಂಬಿತವಾಗಿದೆ. ಇದೇನಾದರೂ ವಾಸದ ಮನೆಯಾಗಿದ್ದರೆ, ಊರ ಹೊರಗೋ, ತೋಟದ ಲ್ಲೋ ಗುಡಿಸಲು ಹಾಕಿಕೊಂಡಾದರೂ ಇರಬಹುದಿತ್ತು. ಆದರೆ ಇದುವ್ಯಾ ಪಾರ ಮಾಡುವ ಸ್ಥಳ. ಏಕಾಏಕಿ 94
ಮಳಿಗೆಗಳನ್ನು ಒಡೆದು ಹಾಕಿದರೆ, ಇಷ್ಟು ಜನರಿಗೆ ಪರ್ಯಾಯವಾಗಿ ಬೇರೆ ಕಟ್ಟಡಗಳು ಎಲ್ಲಿ ಸಿಗುತ್ತವೆ, ತೆರವು ಮಾಡುವ ಮುನ್ನ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವುದು ಸ್ಥಳೀಯ ಆಡಳಿತದ ಕನಿಷ್ಠ ಜವಾಬ್ದಾರಿಯಲ್ಲವೇ, ಎಂಬುದು ವರ್ತಕರ ಕಳಕಳಿಯ ಪ್ರಶ್ನೆಯಾಗಿದೆ.ಅಧಿಕಾರಿಗಳ ಬಳಿಯೇ ಇರಲಿಲ್ಲ ಆದೇಶದ ಪ್ರತಿ, ಮುಂಜಾನೆ 7 ಗಂಟೆಗೇ 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಬೆಸ್ಕಾಂ ಹಾಗೂ ನಗರಸಭೆ ಅಧಿಕಾರಿಗಳು ಪಥಸಂಚಲನದ ಮಾದರಿಯಲ್ಲಿ ಬಂದು,ರಸ್ತೆಗಳಿಗೆಬ್ಯಾ ರಿಕೇಡ್ ಅಳವಡಿಸಿದಾಗ ಯುದ್ಧಭೂಮಿಯ ವಾತಾವರಣ ನಿರ್ಮಾಣ ವಾಗಿತ್ತು. ಮಹದೇವ ರಸ್ತೆಯ ಎರಡು ಹಾಗೂ ಚಿತ್ರದುರ್ಗ ರಸ್ತೆಯ ಮೂರು ಮಳಿಗೆಗಳ ಶೆಡ್ಗಳ ಮೇಲೆ ಜೆಸಿಬಿ ಯಂತ್ರಗಳು ಘರ್ಜಿಸುತ್ತಿ ದ್ದಂತೆ, ಒಳಗೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಇಟ್ಟುಕೊಂಡಿದ್ದ ಬಾಡಿಗೆದಾರರು ಹೌಹಾರಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪೌರಾಯುಕ್ತೆ ಡಾ. ನಾಗಮಣಿ ನೇತೃತ್ವದ ಅಧಿಕಾರಿಗಳ ತಂಡವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೋರ್ಟ್ ಡೆಮಾಲಿಷನ್ ಆರ್ಡರ್ (ತೆರವು ಆದೇಶ) ಕಾಪಿ ಇದ್ದರೆ ಕೊಡಿ ಎಂದು ಪಟ್ಟು ಹಿಡಿದರು. ಇದಕ್ಕೆ ತಡಬಡಾಯಿಸಿದ ಪೌರಾಯುಕ್ತರು, ಈಗ ಆರ್ಡರ್ ಕಾಪಿ ಕೈಯಲ್ಲಿಲ್ಲ, ಆಫೀಸಿನಲ್ಲಿದೆ, ನಿಮಗೆ ತಲುಪಿಸುತ್ತೇನೆ ಎಂದು ಹೇಳಿ ಜಾರಿಕೊಳ್ಳಲು ಯತ್ನಿಸಿದ್ದು ಕಾರ್ಯಾಚರಣೆಯ ಪಾರದರ್ಶಕತೆಯನ್ನೇ ಅಣಕಿಸುವಂತಿತ್ತು. ಅಧಿಕಾರಿಗಳುಪಾ ರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಕಾನೂನು ಅಡಿಯಲ್ಲಿ ಕೆಲಸ ಮಾಡಬೇಕು, ಇಲ್ಲಾಂದ್ರೆ ಈ ವಿಚಾರವಾಗಿ ತೀವ್ರ ಹೋರಾಟ ಮಾಡ ಬೇಕಾಗುತ್ತೆ ಎಂದು ಈ ಸಂಧರ್ಭದಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದರು.ಅಂತಿಮವಾಗಿ ಅಧಿಕಾರಿಗಳ ತಂಡವು ಮಳಿಗೆಗಳನ್ನು ನೆಲಸಮ ಮಾಡದೆ, ವಸ್ತುಗಳನ್ನು ಖಾಲಿ ಮಾಡಲು ಸ್ವತಃ ಬಾಡಿಗೆದಾರರಿಗೆ ಐದು ದಿನಗಳ ಅಂತಿಮ ಗಡುವು ನೀಡಿ ವಾಪಸ್ಸಾಯಿತು. ಬಂದ್ರು, ನಿಂತ್ರು ಹೋದರು ಎಂಬAತಾದ ಈ ಕಾರ್ಯಾಚರಣೆ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ನೀಡಿದ್ದರೂ, ವರ್ತಕರ ತಲೆ ಮೇಲಿನ ತೂಗುಗತ್ತಿ ಇನ್ನೂ ಹಾಗೆಯೇ ಇದೆ.ಈ ಸಂಧರ್ಭದಲ್ಲಿ ಬಾಳೆಕಾಯಿರಾಮದಾಸ್, ಸೂರನಹಳ್ಳಿ ಶ್ರೀನಿವಾಸ್, ಸೋಮಶೇಖರ್ ಮಂಡಿಮಠ್, ಡಿ.ಎಂ.ತಿಪ್ಪೇಸ್ವಾಮಿ, ಬಿ.ಎಂ.ಸುರೇಶ್, ಆದಿಶೇಷ, ಕಿರಣ್, ಫಣಿ, ಗುರು, ಇಮ್ತಿಯಾಜ್, ಬಿ.ಎಂ.ಶ್ರೀನಿವಾಸ್, ಡಾ ರಾಮರಾಜು, ಚನ್ನಕೇಶವ, ಕಾಟಯ್ಯ, ಬಂಡೆ ರಂಗಪ್ಪ, ಮೋಹನ್ ಕುಮಾರ್, ಕರಿಬಸವ ಸೇರಿದಂತೆ ನೂರಾರು ವರ್ತಕರು ಭಾಗವಹಿಸಿದ್ದರು.
ಚಳ್ಳಕೆರೆಯಲ್ಲಿ ಬೆಳ್ಳಂ ಬೆಳಗ್ಗೆ ಜೆಸಿಬಿಗಳ ಘರ್ಜನೆ: ನಗರಸಭೆ ಅಮಾನವೀಯ ನಡೆಗೆ, ಸಾರ್ವಜನಿಕರ ಆಕ್ಷೇಪ



