ತುಮಕೂರು: ನಾನು ನಾಯಕರ ನಂಬಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈ ಹಿಂದೆ ವೀರೆಂದ್ರಪಾಟೀಲ್, ಹಾಗೂ ರಾಮಕೃಷ್ಣ ಹೆಗಡೆ ಅವರನ್ನು ನಂಬಿ ರಾಜಕೀಯ ಮಾಡಿದ್ದೆ. ಇದೀಗ ಯಡಿಯೂರಪ್ಪ ಅವರನ್ನು ನಂಬಿ ರಾಜಕೀಯ ಮಾಡುತ್ತಿದ್ದೇನೆ. ಲೋಕಸಭಾಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ.
ಇಲ್ಲವಾದರೆ ನನ್ನ ಹಣೆಬರಹ ಎಂದು ಸುಮ್ಮನಾಗುತ್ತೇನೆ ಎಂದಿರುವ ಅವರು, ಟಿಕೆಟ್ಗಾಗಿ ಯಾರ ಬಳಿಯು ಕೈಚಾಚಲ್ಲ ಎಂದಿದ್ದಾರೆ.
ಒಂದು ರೀತಿಯಲ್ಲಿ ನಾನು ವಿಘ್ನೇಶ್ವರ ಇದ್ದ ಹಾಗೆ.ಮಾಜಿ ಸಚಿವ ಸೋಮಣ್ಣ ಸುಬ್ರಹ್ಮಣ್ಯ ಇದ್ದ ಹಾಗೆ.ಪ್ರಪಂಚ ಸುತ್ತಿ ಬನ್ನಿ ಎಂದು ವಿಘ್ನೇಶ್ವರ ಸುಬ್ರಹ್ಮಣ್ಯನಿಗೆ ತಿಳಿಸಿದಾಗ ವಿಘ್ನೇಶ್ವರ ತಂದೆ ತಾಯಿ ಸುತ್ತಿ ಅಲ್ಲಿಯೇ ಇದ್ದ. ಆದರೆ ಪ್ರಪಂಚ ಸುತ್ತಲು ಹೋದ ಸುಬ್ರಹ್ಮಣ್ಯ ಬರಲೇ ಇಲ್ಲ ಎಂದು ಹೇಳುವ ಮೂಲಕ ಮಾರ್ಮಿಕವಾಗಿ ತಾವು ಯಡಿಯೂರಪ್ಪನ ಆಪ್ತ ವಲಯದಲ್ಲಿದ್ದೇನೆ ಎಂದು ನುಡಿದಿದ್ದಾರೆ.