This is the title of the web page
This is the title of the web page

ಜೆಡಿಎಸ್ ಅಭ್ಯರ್ಥಿ ಶಾಸಕ ಎಂ.ಅಶ್ವಿನ್ ಕುಮಾರ್ ಸೋಸಲೆ ಹೋಬಳಿಯಲ್ಲಿ ಮಾತಯಾಚನೆ

ತಿ.ನರಸೀಪುರ: ಭಾರಿ ಜನ ಬೆಂಬಲ ದೊಂದಿಗೆ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಎಂ.ಅಶ್ವಿನ್ ಕುಮಾರ್ ಸೋಸಲೆ ಹೋಬಳಿಯಲ್ಲಿ ಮಾತಯಾಚನೆ ಮಾಡಿದರು. ಶಾಸಕನ ಸ್ಥಾನಕ್ಕೆ ಪುನರಾಯ್ಕೆ ಬಯಸಿರುವ ಹಾಲಿ ಶಾಸಕ ಎಂ. ಅಶ್ವಿನ್ ಕುಮಾರ್ ಸೋಸಲೆ ಹೋಬಳಿಯ ಹೊರಳಹಳ್ಳಿ.

ಹೊಸನರಿಪುರ ಹಳೆನರಿಪುರ, ದೊಡ್ಡೇ ಬಾಗಿಲು, ಕೃಷ್ಣಾಪುರ, ಕಾರಗಳ್ಳಿ, ದೊಡ್ಡಬಾಗಿಲುಮೊಳೆ, ಗ್ರಾಮಗಳಲ್ಲಿ ಮಾತಯಾಚನೆ ಮಾಡುವ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಜೆಡಿಎಸ್ ಅಭಿಮಾನಿಗಳು ಶಾಸಕರನ್ನ ಹಾರ ತೊರಾಯಿಯೊಂದಿಗೆ ಸ್ವಗತಿಸಿ ಬೆಂಬಲ ವ್ಯಕ್ತಪಡಿಸಿ ಶಾಸಕರ ಜೊತೆಯಲ್ಲಿ ಪ್ರಚಾರ ಕಾರ್ಯ ನೆಡಸಿದರು.

ಶಾಸಕ ಎಂಅಶ್ವಿನ್ ಕುಮಾರ್ ಕ್ಷೇತ್ರದ ಗ್ರಾಮಗಳ ಗಳ ಪ್ರತಿ ಮನೆಗಳಿಗೂ ಭೇಟಿ ನೀಡಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗದ ನನಗೆ ಮತ ನೀಡುವಂತೆ ಮನವಿ ಮಾಡಿ ಮಾತನಾಡಿದ ಅವರು ಕ್ಷೇತ್ರದ ಜನತೆಯ ಅಶೋತ್ತರ ಗಳಿಗೆ ಸ್ಪಂದಿಸಿ ಜನತೆಯ ಮಧ್ಯೆಯೇ ಇದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಜನತೆ ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ನನಗೆ ಗೆಲ್ಲುವ ವಿಶ್ವಾಸವಿದೆ ಎಂದರು.

ಚುನಾವಣೆ ಅಂದ ಮೇಲೆ ಪ್ರತಿಸ್ಪರ್ಧಿಗಳ ಆರೋಪ-ಪ್ರತ್ಯಾರೋಪಗಳು ಸಹಜ.ಯಾರ ಟೀಕೆ ಟಿಪ್ಪಣಿಗಳಿಗೂ ನಾನು ಉತ್ತರ ಕೊಡುವ ಅಗತ್ಯತೆ ಇಲ್ಲ. ಕೆಲವೇ ದಿನಗಳಲ್ಲಿ ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ಕ್ಷೇತ್ರದ ಮತದಾರರು ಉತ್ತರ ನೀಡಲಿದ್ದಾರೆ ಎಂದರು.

ಸಂದರ್ಭದಲ್ಲಿ ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಸಿಬಿ ಹುಂಡಿ ಚಿನ್ನಸ್ವಾಮಿ, ಮಾಜಿ ಜಿಪಂ ಸದಸ್ಯ ಜೈಪಾಲ್ ಭರಾಣಿ,ಬನ್ನೂರು ಹೋಬಳಿ ಅಧ್ಯಕ್ಷ ಅತ್ತಹಳ್ಳಿ ಕುಮಾರ್, ,ಮೂಗೂರು ಶಿವಮೂರ್ತಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ನರಿಪುರ ಸರ್ದಾರ್, ಪಟಾಕಿ ಕುಮಾರ, ಜಗಪತಿ, ಬಸವನಹಳ್ಳಿ ವೆಂಕಟೇಶ್, ಚಿಕ್ಕಸ್ವಾಮಿ, ಕುರುಬೂರು ನಾಗರಾಜಪ್ಪ, ಮಾದಪ್ಪ ತೋಳಪ್ಪ, ಕೃ. ಶಿ. ಭೃಂಗೀಶ್, ಮಲಿಯೂರು ದೊಳ್ಳಯ್ಯ, ಸಿದ್ದಯ್ಯ, ಎಂ. ಪಿ. ಮರಿಸ್ವಾಮಿ, ಸುಂದರ, ದೊಡ್ಡಮಾದ ನಾಯಕ, ಮಹೇಶ್, ನವೀನ ಇತರರು ಹಾಜರಿದ್ದರು.