ರಾಮನಗರ: ಸಂವಿಧಾನ ಬದ್ಧವಾಗಿ ಚುನಾವಣೆ ಮೂಲಕ ಆಯ್ಕೆಯಾಗಿರುವ ಶಾಸಕ ಇಕ್ಬಾಲ್ ಹುಸೇನ್ ವಿರುದ್ದ ಜೆಡಿಎಸ್ ಕಾರ್ಯಕರ್ತರು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸೋಲಿನ ಹತಾಶೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಿನ ಹತಾಶೆಯಿಂದಾಗಿ ಜೆಡಿಎಸ್ ಮುಖಂಡರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.ಶಾಸಕ ಇಕ್ಬಾಲ್ ಹುಸೇನ್ ಅವರ ವಿರುದ್ಧ ಜೆಡಿಎಸ್ ಮುಖಂಡ ರೈಡ್ ನಾಗರಾಜು ಬಾಲಿಶವಾದ ಹೇಳಿಕೆ ನೀಡಿದ್ದಾರೆ. ಅವರ ಎಲ್ಲಾ ಹೇಳಿಕೆಯನ್ನು ಹಿಂಪಡೆಯುವುದರ ಜತೆಗೆ, ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಗುಡ್ಡೆ ವೆಂಕಟೇಶ್ ಮಾತನಾಡಿ, ಶಾಸಕರ ವಿರುದ್ಧ ಮಾತನಾಡುತ್ತಿರುವ ರೈಡ್ ನಾಗರಾಜು ಸಿಂಗಲ್ ನಂಬರ್ ಲಾಟರಿ ಹಾಗೂ ಎರಡನೇ ದರ್ಜೆ ಮದ್ಯ ಮಾರಾಟವನ್ನು ಮಾಡುತ್ತಿದ್ದರು. ಇಂತಹ ವ್ಯಕ್ತಿ ಶಾಸಕರ ವಿರುದ್ಧ ಮಾತನಾಡುತ್ತಿರುವುದು ತರವಲ್ಲ. ಈ ತನಿಗೆ ಸರಿಯಾಗಿ ವಿದ್ಯಾಬ್ಯಾಸವೂ ಇಲ್ಲ. ವಿವೇಚನೆ ಇಲ್ಲದ ನಾಗಲಿಗೆ ಹರಿಯ ಬಿಡುತ್ತಿದ್ದಾನೆ. ಹಾಗಾಗಿ ಇವರ ಹೇಳಿಕೆಯು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಹೇಳಿದರು.
ಶಾಸಕರ ವಿರುದ್ಧ ಮಾತನಾಡಿರುವ ರೈಡ್ ನಾಗರಾಜು ಅವರು, ಕೋವಿಡ್ ಸಮಯದಲ್ಲಿ ಇಕ್ಬಾಲ್ ಹುಸೇನ್ ಅವರ ಬಳಿ 500ಕ್ಕೂ ಹೆಚ್ಚಿನ ಅಕ್ಕಿ ಚೀಲವನ್ನು ಪಡೆದುಕೊಂಡಿದ್ದರು.ಹುಸೇನ್ ಅವರ ಬಳಿ ಸಹಾಯ ಪಡೆದುಕೊಂಡು, ಮತ್ತೇ ಅವರನ್ನು ದೂಸುತ್ತಿರುವುದು ತರವಲ್ಲ. ರಾಮನಗರದ ರಾಮನಾದರೇ, ರಾಮನಪಕ್ಕ ಆಂಜನೇಯ ಲಕ್ಷ್ಮಣ ಇರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಪ್ರಕಾಶ್, ಹಾಲು ಚಂದ್ರು, ಶ್ರೀನಿವಾಸ್, ನಾಗಸಂದೀಪ್, ನರಸಿಂಹ, ಕಬ್ಬಡ್ಡಿ ವಿಜಯ್, ಹರೀಶ್, ಶಿವರಾಜು, ಮಣಿಕಂಠ ಇದ್ದರು.
Leave a Review