ಪಾಟ್ನಾ: ಬಿಹಾರದ ಮಾಜಿ ಶಾಸಕ ಮತ್ತು ಮೋಕಾಮಾ ವಿಧಾನಸಭಾ ಕ್ಷೇತ್ರದ ಜನತಾದಳ ಯುನೈಟೆಡ್ (ಜೆಡಿಯು) ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ತಡರಾತ್ರಿ ಬಂಧಿಸಲಾಗಿದೆ. ಸಿಂಗ್ ಜನ್ ಸೂರಜ್ ಅವರ ಬೆಂಬಲಿಗ ದುಲಾರ್ ಚಂದ್ ಯಾದವ್ ಅವರ ಕೊಲೆ(ಒuಡಿಜeಡಿ) ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿಸಲಾಗಿದೆ. ಸಿಂಗ್ ಜೆಡಿಯು ಟಿಕೆಟ್ನಲ್ಲಿ ಮೊಕಾಮಾ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ರಾಜಧಾನಿ ಪಾಟ್ನಾದಿಂದ ಸುಮಾರು ೨೦೦ ಕಿಲೋಮೀಟರ್ ದೂರದಲ್ಲಿರುವ ಬರ್ಹ್ನಲ್ಲಿರುವ ಅವರ ಮನೆಯಲ್ಲಿ ಸಿಂಗ್ ಅವರನ್ನು ಬಂಧಿಸಲಾಗಿದೆ. ಪೊಲೀಸರು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್)) ಸೆಕ್ಷನ್ ೧೦೩(೧), ೩(೫) ಮತ್ತು ಶಸ್ತಾçಸ್ತç ಕಾಯ್ದೆಯಡಿಯಲ್ಲಿ ಆರೋಪ ಹೊರಿಸಿದ್ದಾರೆ.
ಪಾಟ್ನಾ ಪೊಲೀಸರು ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣದಲ್ಲಿ ಘಟನೆಯ ಸ್ಥಳದಲ್ಲಿದ್ದ ಮಣಿಕಾಂತ್ ಠಾಕೂರ್ ಮತ್ತು ರಂಜಿತ್ ರಾಮ್ ಎಂಬ ಇಬ್ಬರು ವ್ಯಕ್ತಿಗಳನ್ನು ಸಹ ಬಂಧಿಸಿದ್ದಾರೆ. ಮೂವರು ಪಾಟ್ನಾ ಪೊಲೀಸರೊಂದಿಗೆ ತೆರಳಿದ್ದಾರೆ ಮತ್ತು ಶೀಘ್ರದಲ್ಲೇ ಮ್ಯಾಜಿಸ್ಟೆçÃಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.
ದುಲಾರ್ ಚಂದ್ ಯಾದವ್ ಅವರ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಗಟ್ಟಿಯಾದ, ವಸ್ತುವಿನಿಂದ ಹೃದಯ ಮತ್ತು ಶ್ವಾಸಕೋಶಕ್ಕೆ ಹಾನಿಮಾಡಲಾಗಿದ್ದು, ಇದರಿಂದಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಎಸ್ಎಸ್ಪಿ ಕಾರ್ತಿಕೇಯ ಶರ್ಮಾ ಹೇಳಿದ್ದಾರೆ.



