ಬೆಂಗಳೂರು: “ಕಾಟೇರ” ಸಿನಿಮಾ ಯಶಸ್ಸು ಸಂಭ್ರಮಿಸಲು ನಟ ದರ್ಶನ್ ಮತ್ತು ಇತರೆ ಸಿನಿಮಾ ತಾರೆಯರು ನಿಯಮ ಮೀರಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದರು ಎಂದು….ಆರೋಪಿಸಲಾಗಿರುವ ನಗರದ ಜೆಟ್ ಲ್ಯಾಗ್ ಪಬ್ ಪರವಾನಗಿಯನ್ನು 25 ದಿನಗಳ ಕಾಲ ರದ್ದು ಮಾಡಿ ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜೆಟ್ ಲ್ಯಾಗ್ ಪಬ್ನಲ್ಲಿ ಜನವರಿ ಮೂರರಂದು ಮುಂಜಾನೆವರೆಗೂ ಪಾರ್ಟಿ ಆಯೋಜಿಸಿದ್ದ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಚಿತ್ರರಂಗದ ಎಂಟು ಮಂದಿ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಶುಕ್ರವಾರ ವಿಚಾರಣೆಗೆ ಹಾಜರಾಗಿ ನೋಟಿಸ್ ಗೆ ಉತ್ತರಿಸಿದ್ದರು, ನಟ ದರ್ಶನ್,
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ದೇಶಕ ತರುಣ್ ಸುಧೀರ್ ನಟರಾದ ನೀನಾಸಂ ಸತೀಶ್ ಡಾಲಿ ಧನಂಜಯ್ ಚಿಕ್ಕಣ್ಣ, ಅಭಿಷೇಕ್ ಅಂಬರೀಶ್ ಹಾಗೂ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ವಿಚಾರಣೆಗೆ ಹಾಜರಾಗಿದ್ದರು. ಜೆಟ್ ಲ್ಯಾಗ್ ಪಬ್ ನಲ್ಲಿ ಜನವರಿ ಮೂರರಂದು ಅಬಕಾರಿ ನಿಯಮ ಉಲ್ಲಂಘಿಸಿರುವ ಬಗೆ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿತ್ತು.