ಬೆಂಗಳೂರು: ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಸತತ 5ನೇ ವರ್ಷವೂ ಭಾರತದ ನಂ. 1 ಕಾನೂನು ಶಾಲೆಯಾಗಿದೆ. ಅಷ್ಟೇ ಅಲ್ಲ, ವಿಶ್ವದ ಪಟ್ಟಿಯಲ್ಲಿ 72 ನೇ ರ್ಯಾಂಕಿಂಗ್ ಅನ್ನೂ ಪಡೆದುಕೊಂಡಿದೆ. ಈ ಮೂಲಕ ವಿಶ್ವದ ಟಾಪ್-100 ರಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಕಾನೂನು ಶಾಲೆಯಾಗಿ ಹೊರಹೊಮ್ಮಿದೆ.
ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಕಳೆದ ವರ್ಷ 84 ನೇ ಶ್ರೇಯಾಂಕದಿಂದ ಈ ವರ್ಷ ವಿಶ್ವದಲ್ಲಿ 72 ನೇ ಸ್ಥಾನಕ್ಕೆ ಜಿಗಿದಿದೆ. ಅಂದರೆ, 12 ರ್ಯಾಂಕ್ ಸಾಧನೆ ಮಾಡಿದೆ! ಈ ವರ್ಷದ ರ್ಯಾಂಕಿಂಗ್ಗಳನ್ನು ರೂಪಿಸಲು, QS ಸುಮಾರು 5,000 ಸಂಸ್ಥೆಗಳ ಖ್ಯಾತಿ ಮತ್ತು ಸಂಶೋಧನೆಯನ್ನು ವಿಶ್ಲೇಷಿಸಿದೆ. ಈ ಗುಂಪಿನಿಂದ, 55 ವಿಷಯಗಳು ಮತ್ತು 5 ವಿಶಾಲ ವಿಷಯ ಕ್ಷೇತ್ರಗಳಲ್ಲಿ 19,100 ಎಂಟ್ರಿಗಳು ಬಂದಿದ್ದು.
ಇದರಲ್ಲಿ 1561 ಸಂಸ್ಥೆಗಳಿಗೆ ರ್ಯಾಂಕಿಂಗ್ ನೀಡಲಾಗಿದೆ. ಈ ಅಂಕಿಅಂಶಗಳು ಈ ವಿಷಯದ ಶ್ರೇಯಾಂಕಗಳನ್ನು ಉತ್ಪಾದಿಸುವ ಸಲುವಾಗಿ QS ಕೈಗೊಳ್ಳುವ ಬೃಹತ್ ಶ್ರಮದ ವ್ಯಾಪ್ತಿ ಕಂಡುಬರುತ್ತದೆ.ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಕುಲಪತಿಗಳಾದ ನವೀನ್ ಜಿಂದಾಲ್,JGLS ನ ಈ ಗಮನಾರ್ಹ ಸಾಧನೆಯ ಕುರಿತು ಮಾತನಾಡಿ ಪ್ರತಿಷ್ಠಿತ QS ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ನಲ್ಲಿ JGLS ದೇಶದ ಉನ್ನತ ಕಾನೂನು ಶಾಲೆಯಾಗಿ ಕಾಣಿಸಿಕೊಂಡಿರುವುದು ಸ್ಥಿರತೆಯನ್ನು ಸೂಚಿಸುತ್ತದೆ.
JGLS ಸತತ ಐದು ವರ್ಷಗಳ ಕಾಲ ಭಾರತದಲ್ಲಿ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದೆ ಎಂಬ ಸಂಗತಿಯು ನನ್ನನ್ನು ರೋಮಾಂಚನಗೊಳಿಸಿದೆ. JGU ಅಧ್ಯಾಪಕರು ಮತ್ತು ಸಿಬ್ಬಂದಿಯ ಬದ್ಧತೆಯಿಂದಾಗಿ ಕಾನೂನು ಶಿಕ್ಷಣದ ಮಟ್ಟವನ್ನು ಹೆಚ್ಚಿಸುವ ನಮ್ಮ ಧ್ಯೇಯ ಪೂರೈಕೆಯಾಗಿದೆ ಎಂದಿದ್ದಾರೆ.
ಒ.ಪಿ. ಜಿಂದಾಲ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಉಪಕುಲಪತಿ ಪ್ರೊ . (ಡಾ.) ಸಿ. ರಾಜ್ ಕುಮಾರ್ ಮಾತನಾಡಿ, ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ((JGLS) ಸತತ ಐದು ವರ್ಷಗಳಿಂದ ಸಬ್ಜೆಕ್ಟ್ 2024 ವಿಭಾಗದಲ್ಲಿ QS ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ಗಳಲ್ಲಿ ಭಾರತದಲ್ಲಿ ನಂ. 1 ಸ್ಥಾನದಲ್ಲಿದೆ ಎಂಬ ಸಂಗತಿಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಜಾಗತಿಕವಾಗಿ, JGLS 72 ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದಿದ್ದಾರೆ.
JGLS ಜೊತೆಗೆ, ಭಾರತದ ಇತರ ಎರಡು ಕಾನೂನು ಶಾಲೆಗಳು ಈ ವರ್ಷ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅವುಗಳೆಂದರೆ: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU), ಬೆಂಗಳೂರು (151-200 ಶ್ರೇಯಾಂಕ), ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗ (201-250 ಶ್ರೇಯಾಂಕ).