ಲಖನೌ: ವಾರಾಣಸಿಯ ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಹಿಂದೂ ಪೂಜಾಮಂದಿರವನ್ನು ಮರುಸ್ಥಾಪಿಸಲು ಕೋರಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ ಅಸ್ತು ಎಂದಿದೆ. ಈ ಅರ್ಜಿಯ ವಿಚಾರಣೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮುಸ್ಲಿಮರ ಐದು ಅರ್ಜಿಗಳನ್ನು ವಜಾ ಮಾಡಿದೆ.
ಇದು ಮುಸ್ಲಿಂ ಅರ್ಜಿದಾರರ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ. ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸುವ ಕುರಿತು ವಾರಾಣಸಿ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ…ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿದ್ದ ಎಲ್ಲಾ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಈ ತೀರ್ಪಿನೊಂದಿಗೆ ನ್ಯಾಯಾಲಯವು 1991ರ ಪ್ರಕರಣದ ವಿಚಾರಣೆಯನ್ನು ಅಂಗೀಕರಿಸಿತು. ಪ್ರಕರಣದ ವಿಚಾರಣೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸಲು ವಾರಣಾಸಿ ನ್ಯಾಯಾಲಯಕ್ಕೆ ಆದೇಶಿಸಿತು.”ಇದು ಅಲಹಾಬಾದ್ ಹೈಕೋರ್ಟ್ನ ಈ ಕುರಿತ ಎರಡನೇ ತೀರ್ಪು. ಈ ತೀರ್ಪು ಸರಿಯಾಗಿದೆ. ಈ ಸನ್ನಿವೇಶದಲ್ಲಿ ಪೂಜಾ ಸ್ಥಳದ ಕಾಯ್ದೆ ಅನ್ವಯವಾಗುವುದಿಲ್ಲ.
ಒಂದು ಸ್ಥಳವು ಧಾರ್ಮಿಕ ರಚನೆಯೇ ಅಥವಾ ಅಲ್ಲವೇ ಎಂಬುದನ್ನು ಪುರಾವೆಗಳೊಂದಿಗೆ ಮಾತ್ರ ಸಾಬೀತುಪಡಿಸಬಹುದು” ಎಂದು ಹಿಂದೂ ಪರ ವಕೀಲ ಹರಿಶಂಕರ್ ಜೈನ್ ಹೇಳಿದ್ದಾರೆ.