ಸರಸ್ವತಿ ಸಮ್ಮಾನ್, ಪದ್ಮಭೂಷಣ, ಪಂಪ ಪ್ರಶಸ್ತಿ ಪುರಸ್ಕöÈತ ಹಿರಿಯ ಸಾಹಿತಿ ಡಾ. ಎಸ್. ಎಲ್. ಭೈರಪ್ಪ ಅವರು ನಾಡಿನ ಸಾರಸ್ವತ ಲೋಕವನ್ನು ಬೆಳಗಿದ ಮಹನೀಯರು.ದೀರ್ಘ ಆಲೋಚನೆ, ಸುಧೀರ್ಘ ಅವಲೋಕನ, ಸಂಶೋಧನಾತ್ಮಕವಾದ ಬರಹ, ವಸ್ತುನಿಷ್ಠ ತುಲನೆ, ಪರಿಪಕ್ವವಾದ ವಿಚಾರ ಸಂಗ್ರಹ, ಅಕ್ಷರಗಳಿಂದ ಕಾದಂಬರಿ ಲೋಕವನ್ನು ಅದ್ವಿತೀಯವಾಗಿ ಅನಾವರಣಗೊಳಿಸಿದ ಬಹುಶ್ರುತ ಲೇಖಕ. ತಮ್ಮ ಕಾದಂಬರಿಗಳ ಮೂಲಕ ಹೊಸ ದಿಕ್ಸೂಚಿಯನ್ನು ತೋರಿದ ಮಹಾನ್ ಪ್ರೇರಕ ಶಕ್ತಿ, ಬರಹದ ಮೂಲಕವೇ ಭವ್ಯತೆಯ ಕಡೆಗೆ ನಡೆದ ಅಕ್ಷರ ಸಂತ. ಅವರನ್ನು ಕಳೆದುಕೊಂಡಿರುವ ನಾಡಿನ ಸಾಹಿತ್ಯ ಲೋಕಕ್ಕೆ
ತುಂಬಲಾರದ ನಷ್ಟವಾಗಿದೆ. ಆದರೆ ಅವರು ತಮ್ಮ ಅಕ್ಷರಗಳಿಂದ ಅನುಗಾಲವೂ ನಮ್ಮೊಡನೆ ಬದುಕಿರುತ್ತಾರೆ.
ಪ್ರತಿ ಅಕ್ಷರದಲ್ಲೂ ಅವರ ಅಸ್ಮಿತೆ, ಅವರ ಚಿಂತನೆ, ಅವರ ಆಲೋಚನೆ, ಅವರ ಬರಹಗಳು ಬಹುವಾಗಿ ನಮ್ಮನ್ನು ಪ್ರೇರಣೆಯ ಕಡೆಗೆ ಕೊಂಡೊಯ್ಯುತ್ತವೆ. ಎAದೋ ಬರಲೇಬೇಕಾಗಿದ್ದ ಜ್ಞಾನಪೀಠವನ್ನು ತಪ್ಪಿಸಿದ ಪುಣ್ಯಾತ್ಮರಿಗೆ.. ಈ ಮೂಲಕ ಒಂದು ಸಂದೇಶವಿದೆ.” ಎಲ್ಲರಿಗೂ ಒಂದು ಅಂತ್ಯವಿದೆ ಆದರೆ ಒಂದು ಅಂತ್ಯ ಹೊಸ ಆರಂಭಕ್ಕೆ ಕಾರಣವಾಗಬೇಕು. ಅದು ಸೃಷ್ಟಿಯ ನಿಯಮ. ಬೈರಪ್ಪನವರು ಬರಹದ ಮೂಲಕ ನಮ್ಮ ನಡುವೆ ಬದುಕಿ ಇರುತ್ತಾರೆ. ಅವರಿಗೆ ಜ್ಞಾನಪೀಠ ತಪ್ಪಿಸಿದವರು ಹೇಗೆ ನಮ್ಮೊಡನೆ ಬದುಕಿರಲು ಸಾಧ್ಯ..? ಇದನ್ನು ಅರ್ಥಮಾಡಿಕೊಳ್ಳುವವರು ಅರ್ಥಮಾಡಿಕೊಳ್ಳಲಿ ಎಂದು ಸಾಹಿತಿ ಹಾಗೂ
ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಕಳವಳ ವ್ಯಕ್ತಪಡಿಸಿದರು. ಜ್ಞಾನ ಕಣಜಕ್ಕೆ ಬರಲೇಬೇಕಾಗಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಮರಣೋತ್ತರವಾಗಿ ಆದರೂನೀಡುವರೇ ಎನ್ನುವ ಆಶಯವನ್ನು ಸಹ ವ್ಯಕ್ತಪಡಿಸಿದರು.