This is the title of the web page
This is the title of the web page

ಜಾಲಿ ಕಿಡ್ಸ್ ಮೊಂಟೆಸರಿ ಮತ್ತು ಅಸೆಂಟ್ ಪಬ್ಲಿಕ್ ಶಾಲಾ ವಾರ್ಷಿಕೋತ್ಸವ

ಬೆಂಗಳೂರು: ಯಲಹಂಕದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಮತ್ತು ಜಾಲಿ ಕಿಡ್ಸ್ ಮೊಂಟೆಸೆರಿ ಮತ್ತು ಅಸೆಂಟ್ ಪಬ್ಲಿಕ್ ಸ್ಕೂಲ್ ನಲ್ಲಿ 2022-2023 ಶಾಲಾ ವಾರ್ಷಿಕೋತ್ಸವ ಸಮಾರಂಭ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಎಸ್.ಆರ್.ವಿಶ್ವನಾಥ್ ಶಾಸಕರು, ಬಿ.ಡಿ.ಎ ಅಧ್ಯಕ್ಷರು ಹಾಗೂ ಟಿ.ಟಿ.ಡಿ ಸದಸ್ಯರು ಯಲಹಂಕ ವಿಧಾನಸಭಾ ಕ್ಷೇತ್ರ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಮಕ್ಕಳಿಗೆ ಪ್ರಮುಖವಾಗಿ ಉತ್ತಮ ಸಂಸ್ಕಾರ ಬೇಕು. ಶಿಕ್ಷಣವಂತ ಸಮಾಜದಲ್ಲಿ ತಪ್ಪು ಮಾಡಬಹುದು ಆದರೆ ಸಂಸ್ಕಾರವಂತ ವ್ಯಕ್ತಿಯಿಂದ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಮತ್ತು ಮಕ್ಕಳ ಜೊತೆಯಲ್ಲಿ ತಂದೆ ತಾಯಿಗಳು ಹೆಚ್ಚು ಸಮಯವನ್ನು ಕಳೆಯಿರಿ ಪ್ರೀತಿ-ವಿಶ್ವಾಸದಿಂದಿರಿ ಆಗಿದ್ದಾಗ ಮಾತ್ರ ತಂದೆ ತಾಯಿಗಳು ವೃದ್ಧಾಶ್ರಮ ಹೋಗುವುದನ್ನು ತಪ್ಪಿಸಬಹುದು ಎಂಬ ಮಾತುಗಳನ್ನು ಶಾಸಕರಿಗೆ ಸಂದರ್ಭದಲ್ಲಿ ತಿಳಿಸಿದರು ಈ ಕಾರ್ಯಕ್ರಮ ನಡೆಯಲು ಮುಖ್ಯ ರೂವಾರಿಗಳಾದ ಜಾಲಿ ಕಿಡ್ಸ್ ಮೌಂಟೆನ್ಸರಿ ಮತ್ತು ಆಸೆಂಟ್ ಪಬ್ಲಿಕ್ ಶಾಲೆ ಸಂಸ್ಥಾಪಕರಾದ ಶ್ರೀಮತಿ ವಾಣಿ ಶ್ರೀಮತಿ ಅರುಣ ಅರುಣ ಕುಮಾರಿ ರವರು ಹಾಗೂ ಶ್ರೀ ಸಂಜಯ್ ಕುಮಾರ್ ಅವರು ಕಾರಣಕರ್ತರಾಗಿದ್ದಾರೆ.

ಶಾಲೆಯ ಶಿಕ್ಷಕಿಯರು ಅಚ್ಚುಕಟ್ಟಾಗಿ ಕಾರ್ಯಕ್ರಮ ವನ್ನು ನಿರ್ವಹಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶ್ರೀವಾಣಿ ರವರು ಎಲ್ಲಾ ಗಣ್ಯರಿಗೂ ಪೋಷಕರಿಗೂ ವಂದನಾರ್ಪಣೆಯನ್ನು ಮಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಟಿ. ದೊಡ್ಡೇಗೌಡರು, ಶ್ರೀಮತಿ ಪದ್ಮ ನಾಗರಾಜ್, ಶ್ರೀಯುತ ಮಹೇಶ್ ಬಾಬುರವರು,ಶ್ರೀಯುತ ಶ್ರೀನಿವಾಸ್ ಮೂರ್ತಿರವರು, ಶ್ರೀಯುತ ಮುನಿರಾಜು ರವರು, ಶ್ರೀಯುತ ವಿ.ಎಂ. ಚಂದ್ರಯ್ಯ ರವರು, ಶ್ರೀಯುತ ಈಶ್ವರಯ್ಯ ರವರು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿದರು.

ಈ ಕಾರ್ಯಕ್ರಮದ ಕೇಂದ್ರಬಿಂದುವಾದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಪೋಷಕರಿಗೂ ಸಹ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಭಗವದ್ಗೀತೆ, ಜಾನಪದ ಹಾಡಿಗೆ ನೃತ್ಯ, ಇತ್ತೀಚಿಗೆ ಹೊಸ ಅಲೆಯನ್ನೇ ಸೃಷ್ಟಿಸಿದ ಕಾಂತಾರ ಚಿತ್ರದ ಹಾಡಿಗೆ ನೃತ್ಯ ಶಾಲಾ ಮಕ್ಕಳಿಂದ ವಿಶೇಷ ನೃತ್ಯ ಮಾಡುವುದರ ಮೂಲಕ ಕಾರ್ಯಕ್ರಮವು ವಿಶೇಷವಾಗಿ ಮುಕ್ತಾಯಗೊಂಡಿತು.