ಹುಬ್ಬಳ್ಳಿ: ನಗರದಲ್ಲಿ ಇಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಪತ್ರಕರ್ತರೊಂದಿಗೆ ಮಾತನಾಡಿ, ಪ್ರಜ್ವಲ್ ಕರೆತರುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದ ವಿಚಾರವಾಗಿ ಮಾತನಾಡಿ ಪ್ರತಿಕ್ರಿಯೆ ನೀಡಿದರು.
ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಾ ಇದೆ ಬೇರೆಯವರ ಮೇಲೆ ತಪ್ಪು ಹೊರೆಸುವ ಪ್ರಯತ್ನ ಆಗ್ತಾ ಇದೆ ಎಂದು ಹೇಳಿದರು.ತಮ್ಮ ಹಾಗೂ ಬಿಜೆಪಿ ಪ್ರಮುಖರ ಪ್ರಶ್ನೆಗೆ ರಾಜ್ಯ ಸರ್ಕಾರ, ಸಿಎಂ ಒಂದೇ ಒಂದು ಉತ್ತರ ಕೊಟ್ಟಿಲ್ಲ. ಪ್ರಜ್ವಲ್ ರೇವಣ್ಣನ ರಾಸಲೀಲೆ ವಿಡಿಯೋ ಕ್ಲಿಪ್ 21 ಕ್ಕೆ ಹೊರಗೆ ಬಂದರೆ 28 ರವರಗೆ ಯಾಕೆ ಎಫ್ಐಆರ್ ಮಾಡಿಲ್ಲ? ನೀವು ಏನು ಮಾಡಿದ್ರಿ, ಈಗ ನಮಗೆ ಕೇಳ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಆರು ತಿಂಗಳು, ಒಂದು ವರ್ಷದ ಹಳೆಯದು ಅಲ್ಲಾ, 2018 ರಿಂದಲೂ ಇದೆ ಎಂದು ಹೇಳಿದರು.
ಅಂದು ಕಾಂಗ್ರೆಸ್ ಜಾತ್ಯಾತೀತ ಜನತಾದಳದವರು ಸೇರಿಕೊಂಡು ಪ್ರಚಾರ ಮಾಡಿದ್ರಿ, ಮತಯಾಚನೆ ಮಾಡದ್ರಿ. ಯಾವ ಕಾರಣಕ್ಕಾಗಿ ಕೂಡಲೆ ಎಫ್ಐಆರ್ ಮಾಡಲಿಲ್ಲ ಓಟ್ ಬ್ಯಾಂಕ್ ರಾಜಕೀಯ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಪ್ರಚಂಡ ಗಾಳಿ ಬೀಸ್ತಾ ಇದೆ. ಗೃಹ ಸಚಿವ ಅಮಿತಾ ಶಾ ಅವರ ಹಾವೇರಿ, ಧಾರವಾಡ ಸಮಾವೇಶ ಅದ್ಭುತವಾದ ಶಕ್ತಿ ಕೊಟ್ಟಿದೆ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳನ್ನೂ ಗೆಲ್ಲುವ ಭರವಸೆ ಇದೆ.
ನೇಹಾ ಕುಟುಂಬದವರು ಗೃಹ ಸಚಿವ ಅಮಿತ್ ಶಾ ಭೇಟಿ ಆಗಿದ್ದಾರೆ. ಸಿಐಡಿ ಮೇಲೆ ನಂಬಿಕೆ ಇಲ್ಲಾ ಅಂತಾ ಹೇಳಿದ್ದಾರೆ ಎಂದು ಹೇಳಿದರು.ನಮ್ಮ ಕುಟುಂಬಕ್ಕೆ ರಕ್ಷಣೆ ಬೇಕು ಅಂತಾ ಕೇಳಿದ್ದಾರೆ ತ್ವರಿತ ನ್ಯಾಯ ಬೇಕು ಅಂದಿದ್ದಾರೆ, ಸಿಬಿಐಗೆ ಕೊಡಿ ಅಂದಿದ್ದಾರೆ ಕಠಿಣ ಶಿಕ್ಷೆ ಆರೋಪಿಗೆ ಆಗಬೇಕು ಅಂತಾ ಮನವಿ ಮಾಡಿದ್ದಾರೆ ಎಂದು ಹೇಳಿದರು.