ನವದೆಹಲಿ; ರಾಜ್ಯದಲ್ಲಿ ಎಲೆಕ್ಟಿಕ್ ವಾಹನಗಳಿಗೆ ತೆರಿಗೆ ವಿಧಿಸಿರುವ ರಾಜ್ಯ ಸರ್ಕಾರದ ವಿರುದ್ಧ ನೂತನ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವಪ್ರಹ್ಲಾದ್ ಜೋಷಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪರಿಸರ ಸ್ನೇಹಿ ವಾಹನಗಳನ್ನು ರಾಜ್ಯ ದೂರಸರಿಸುತ್ತಿದೆ. ರಾಜ್ಯದಲ್ಲಿ ಆರ್ಥಿಕ ದಿವಾಳಿಯಾಗಿದೆ ಲೈಫ್ ಟೈಮ್ ಟ್ಯಾಕ್ಸ್ ಹಾಕುವ ಮೂಲಕ ಹಣ ಸಂಪಾದನೆಯ ದಾರಿ. ಡಿಸೇಲ್ ಪೆಟ್ರೋಲ್ ಬಳಕೆ ಪ್ರೋತ್ಸಾಹಿಸುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಡಿಸೇಲ್ ಮೇಲೆ ವ್ಯಾಟ್ ವಿಧಿಸಲಾಗುತ್ತದೆ. ಆರ್ಥಿಕ ದಿವಾಳಿತನವನ್ನು ತಪ್ಪಿಸಿಕೊಳ್ಳಲು ವ್ಯಾಟ್ ಹಣಕ್ಕಾಗಿ ಪ್ರೋತ್ಸಾಹ. ದೇಶದ ಅಭಿವೃದ್ಧಿಗಿಂತಲೂ ಕೇವಲ ತೆರಿಗೆ ವಸೂಲಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇಡೀ ದೇಶವೇ ಇಂದು ಶುದ್ಧ ಇಂಧನ ಮತ್ತು ಎಲೆಕ್ಟಿಕ್ ವಾಹನಗಳತ್ತ ಸಾಗುತ್ತಿದೆ. ಸುಸ್ಥಿರ ಭವಿಷ್ಯದ ಆಶಯಗಳಿಗೆ ತಣ್ಣೀರು ಸುರಿಸುತ್ತಿದೆ ರಾಜ್ಯ ಸರ್ಕಾರ. ಇವಿ ವಾಹನಗಳನ್ನು ಜನಸಾಮಾನ್ಯರಿಗೆ ಎಟುಕದಂತೆ ದುಬಾರಿಯಾಗಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಎಲೆಕ್ಟಿಕ್ ವಾಹನಗಳಿಗೆ ತೆರಿಗೆ ಜೋಷಿ ಅಸಮಾಧಾನ



