ಬೆಂಗಳೂರು : ಕ್ರೈಮ್ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್(55) ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾದರು.
ನ.16ರಂದು ಶ್ವಾಸಕೋಶ ಸೋಂಕಿಗೆ ಒಳಗಾದ ಅವರು ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಪತ್ನಿ ಕೋಮಲ, ಪುತ್ರ ತನುಷ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಆನೆಕಲ್ ನಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ ರಾ.ಪ್ರವೀಣ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ಸಂತಾಪ ವ್ಯಕ್ತಪಡಿಸಿದೆ.
ಮೂರು ದಶಕಗಳ ಕಾಲ ಸುದ್ದಿಮನೆಯಲ್ಲಿ ಕೆಲಸ ಮಾಡಿದ ರಾ.ಪ್ರವೀಣ್, ಕ್ರೈಮ್ ನ್ಯೂಸ್ ಪ್ರವೀಣ್ ಎಂದೇ ಗುರುತಿಸಿಕೊಂಡವರು. ಕ್ರೀಯಾಶೀಲ ಪ್ರವೀಣ್ ನಿಧನ ಸುದ್ದಿಮನೆಗೆ ಆದ ನಷ್ಟ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ.