ಮಾಗಡಿ: ತಾಲ್ಲೂಕಿನ ಜುಟ್ಟನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಜೆ.ಪಿ.ಚಂದ್ರೇಗೌಡ ಅದ್ಯಕ್ಷರಾಗಿ ರಂಗಸ್ವಾಮಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅದ್ಯಕ್ಷ ಜೆ.ಪಿ.ಚಂದ್ರೇಗೌಡ ಮಾತನಾಡಿ, ನಾನು ಅದ್ಯಕ್ಷನಾಗಿ ಆಯ್ಕೆಯಾಗಲು ಸಂಸದ ಡಿ.ಕೆ.ಸುರೇಶ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳಿಗೆ ಅಭಾರಿಯಾಗಿರುತ್ತೇನೆ.ಸಂಘಕ್ಕೆ ನೂತನ ಕಟ್ಟಡ ಅತ್ಯವಶ್ಯಕವಾಗಿದ್ದು ಆಡಳಿತ ಮಂಡಳಿಯ ನಿರ್ದೇಶಕರೆಲ್ಲರೂ ಒಗ್ಗೂಡಿ ಕಟ್ಟಡ ನಿರ್ಮಿಸಲು ಮುಂದಾಗುತ್ತೇವೆ.
ಸಂಘದ ವತಿಯಿಂದ ಸಿಗಬಹುದಾದ ಸೌಲಭ್ಯಗಳನ್ನು ಹಾಲು ಉತ್ಪಾದಕರಿಗೆ ತಲುಪಿಸಲಾಗುವುದು.ಪ್ರಸ್ತುತ ದಿನಂಪ್ರತಿ 400 ಲೀಟರ್ ಪೂರೈಕೆಯಾಗುತ್ತಿದ್ದು ಮತ್ತಷ್ಟು ಹಾಲು ಉತ್ಪಾದನೆ ಕಡೆಗೆ ಹೆಚ್ಚಿನ ಗಮನಹರಿಸಿ ಸಂಘವು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ಚಂದ್ರೇಗೌಡ ತಿಳಿಸಿದರು.
ಉಪಾಧ್ಯಕ್ಷ ರಂಗಸ್ವಾಮಯ್ಯ, ಗ್ರಾಪಂ ಸದಸ್ಯೆ ಲಕ್ಚ್ಮಮ್ಮ ರಾಮಣ್ಣ, ನಿರ್ದೇಶಕರಾದ ಹನುಮಂತಯ್ಯ,ಕುಮಾರ್, ಸರೋಜಮ್ಮ, ಗೋಪಾಲ್, ಸುಮಿತ್ರ, ಲೀಲಾವತಿ, ಕಾಂತರಾಜು, ಮುಖಂಡರಾದ ಸುರೇಶ್ ಗೌಡ, ಬೆಟ್ಟಪ್ಪ, ಬಲರಾಮ್, ಜಯರಾಮ್, ನಾರಾಯಣಗೌಡ, ಪಾಂಡುರಂಗಯ್ಯ, ಆಂಜನಪ್ಪ, ಗುರುಪ್ರಸಾದ್, ಪಂಚಾಕ್ಷರಿ, ಯೋಗೇಶ್, ಹೊನ್ನಪ್ಪ ಸೇರಿದಂತೆ ಮತ್ತಿತರಿದ್ದರು.