ನವ ನಿರ್ದೇಶಕ ಸೂಚನ್ ಶೆಟ್ಟಿ ಕಲ್ಪನೆಯಲ್ಲಿ ಮೂಡಿ ಬರ್ತಿರುವ ಸಿನಿಮಾ ಗಾಡ್ ಪ್ರಾಮಿಸ್. ಗಾಡ್ ಪ್ರಾಮಿಸ್ ಸಿನಿಮಾಗೀಗ ನಾಯಕಿ ಸಿಕ್ಕಿದ್ದಾರೆ. ಕೇರಳ ಮೂಲದ ಮಲಯಾಳಂ ನಟಿ ಜೂಹಿ ಜಯಕುಮಾರ್ ನಾಯಕ ಸೂಚನ್ ನಾಯಕಿ.
ಜೂಹಿ ಗಾಡ್ ಪ್ರಾಮಿಸ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡಿಗರಿಗೆ ಪರಿಚಯವಾಗುತ್ತಿದ್ದಾರೆ. ಜೂಹಿ ಜಯಕುಮಾರ್ ಅವರನ್ನು ಚಿತ್ರತಂಡ ಆಡಿಷನ್ ಮೂಲಕ ಆಯ್ಕೆ ಮಾಡಿದೆ.
ಕುಂದಾಪುರ ಹಾಗೂ ಬೆಂಗಳೂರು ಎರಡು ಕಡೆ ಆಡಿಷನ್ ನಡೆಸಲಾಯಿತು. ಆನ್ ಲೈನ್ ಹಾಗೂ ಆಫ್ ಲೈನ್ ಎರಡು ವಿಧದಲ್ಲಿ ಆಡಿಷನ್ ನಡೆಸಲಾಗಿದೆ. ೪ ಸಾವಿರಕ್ಕೂ ಹೆಚ್ಚು ಆನ್ ಲೈನ್ ನಲ್ಲಿ ಹಾಗೂ ಆಫ್ ಲೈನ್ ಆಡಿಷನ್ ನಲ್ಲಿ ೧ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇಷ್ಟು ಜನರ ಪೈಕಿ ಪಾತ್ರಕ್ಕೆ ಜೂಹಿ ಜಯಕುಮಾರ್ ಸೂಕ್ತರಾಗಿದ್ದಾರೆಂದು ಚಿತ್ರತಂಡ ಅವರನ್ನು ಆಯ್ಕೆ ಮಾಡಿದೆ. ಆಯ್ಕೆ ಬಳಿಕ ಜೂಹಿ ಅವರಿಗಾಗಿ ವರ್ಕ್ ಶಾಪ್ ನಡೆಸಲಾಯಿತು. ಈ ವೇಳೆ ಅವರು ತಮ್ಮ ಕಲಾ ಕೌಶಲ್ಯವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು.
ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಜೂಹಿ ಜಯಕುಮಾರ್, “ಗಾಡ್ ಪ್ರಾಮಿಸ್ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಚಿತ್ರದಲ್ಲಿ ಒಳ್ಳೆ ಸ್ಕೋಪ್ ಇದೆ. ಮರ ಸುತ್ತವ ಪಾತ್ರವಲ್ಲ. ಬದಲಿಗೆ ತೂಕ ಇರುವಂತಹ ಪಾತ್ರದಲ್ಲಿ ತಾವು ಅಭಿನಯಿಸಿದ್ದೇನೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಖುಷಿ ಇದೆ. ನಿರ್ದೇಶಕ ಸೂಚನ್ ಶೆಟ್ಟಿ ಹೊಸತನಕ್ಕೆ ತುಡಿತ ಹೊಂದಿರುವ ನಿರ್ದೇಶಕರು. ಗಾಡ್ ಪ್ರಾಮಿಸ್ ಪ್ರೇಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲಿದೆ” ಎಂದರು.
`ಗಾಡ್ ಪ್ರಾಮಿಸ್’ಗೆ ಜೂಹಿ ನಾಯಕಿ



