ಚಳ್ಳಕೆರೆ: ತಂಬಾಕು ಸೇವನೆಯಿಂದ ಯುವಕರು ತಮ್ಮ ಕುಟುಂಬಗಳ ನೆಮ್ಮದಿ ಹಾಳು ಮಾಡುತ್ತಿದ್ದಾರೆ.ಜೊತೆಗೆ ತಮ್ಮ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಮಾದ ಕ ವಸ್ತುಗಳನ್ನು ಸೇವನೆ ಮಾಡುವುದಿಲ್ಲ ವೆಂದು, ಶಪಥ ಮಾಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ತೇಜಸ್ವಿನಿ ಅವರು ಹೇಳಿದರು.
ನಗರದ ಆರೋಗ್ಯ ಇಲಾಖೆ ಹಾಗೂ ಬಾಪೂಜಿ ಪ್ರಥ ಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ. ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಮಾತನಾಡಿದ ಅವರು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಹಾಗೂ ಹೃದ್ರೋಗ ದಂತ ಮಾರಕ ರೋಗಗಳು ಬರುತ್ತವೆ. ತಂಬಾಕು ವಸ್ತುಗಳ ಜಾಹೀರಾತುಗಳಿಗೆ ಮಾರು ಹೋಗ ಬೇಡಿ.ತಂಬಾಕು ಸೇವನೆಯ ವ್ಯಾಸ ನಿ ಯಿಂದ ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯ ಹಾಳಗುತ್ತದೆ.
ಯುವಕರು ಹಾಗೂ ವಿದ್ಯಾರ್ಥಿಗಳು ಈ ತಂಬಾಕು ವ್ಯಸನಗಳಿಂದ ದೂರ ವಿದ್ದು. ಉತ್ತಮ ಶಿಕ್ಷಣ ಪಡೆ ಯುವ ಮೂಲಕ, ಒಳ್ಳೆಯ ಜೀವನ ರೂಪಿಸಿ ಕೊಂಡು. ನಿಮ್ಮ ತಂದೆ ತಾಯಿಗಳಿಗೆ ಕೀರ್ತಿಯನ್ನು ತರಬೇಕು. ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಕಾಶೀ ಮಾತನಾ ಡಿ. ಯುವಕರು ಹಾಗೂ ಸಾರ್ವಜನಿಕರು ತಂಬಾಕು ಸೇವನೆಯನ್ನು ತ್ಯಜಿಸುವ ಕಡೆ ಗಮನ ನೀಡಿ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಪ್ರತಿ ವರ್ಷ ತಂಬಾಕು ರಹಿತ ದಿನಾಚರಣೆಯನ್ನು ಮಾಡಲಾಗುತ್ತದೆ .ತಂಬಾಕು ವ್ಯಸನದಿಂದ ಮುಕ್ತರಾಗಲು ತಂಬಾಕುಮುಕ್ತ ಕೇಂದ್ರಗಳು ಇವೆ. ಪೋಷಕರು ತಮ್ಮ ಮಕ್ಕಳ ಮುಂದೆ ದುಶ್ಚಟಗಳನ್ನು ಮಾಡಿದರೆ, ಮಕ್ಕಳು ಸಹ ನಿಮ್ಮನ್ನು ಅನುಕರಿಸಿ. ದುಶ್ಚಟಗಳಿಗೆ ಬಲಿಯಾಗುತ್ತಾ ರೆ. ಆದ್ದರಿಂದಲೇ ಮನೆಯಿಂದಲೇ ತಂಬಾಕು ನಿಷೇಧ ವನ್ನು ಮಾಡಬೇಕು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಅರೋಗ್ಯ ಅಧಿಕಾರಿ ತಿಪ್ಪೇ ಸ್ವಾಮಿ, ಬಿಪಿಎಂ ಅಧಿಕಾರಿ ಗಳಾದಪ್ರದೀಪ್,ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಂ.ನಾಗರಾಜ್, ವಕೀಲರ ಸಂಘದ ಉಪಾಧ್ಯಕ್ಷರಾದ ಪಾಲಯ್ಯ, ಕಾರ್ಯದರ್ಶಿ ಎಂ.ಸಿದ್ದರಾಜು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಕಾರ್ಯ ಕರ್ತರಾದತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಣಾ ಧಿಕಾರಿ ಅಮೃತ್ ರಾಜ್, ಬಾಪೂಜಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲರಾ ದ ಕರಿಯಣ್ಣ,ಹಾಗೂ ಉಪನ್ಯಾಸಕರಾದ ತಿಪ್ಪೇಸ್ವಾಮಿ, ಉಮೇಶ್, ಚಂದ್ರ ಶೇಖರ್, ಹಾಗೂ ವಿದ್ಯಾರ್ಥಿ ವಿದ್ಯಾ ರ್ಥಿನಿಯರು ಮತ್ತು ಕಾಲೇಜ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.