ಚಾಮರಾಜನಗರ: ದೆಹಲಿಯ ಕೆಂಪುಕೋಟೆ ಬಳಿ ಐ೨೦ ಕಾರು ದೆಹಲಿಯ ಹತ್ತಿರವೇ ಬಾಂಬ್ ಸ್ಫೋಟ ಆಗಿದೆ. ಇದಕ್ಕೆ ಭದ್ರತಾ ವೈಫಲ್ಯವೇ ಕಾರಣ ಎಂದು ಸಚಿವ ಕೆ. ವೆಂಕಟೇಶ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಟಿ ಮಧ್ಯದಲ್ಲೇ ಟಾರ್ಗೆಟ್ ಮಾಡಿ ಸ್ಫೋಟ ಮಾಡಿದ್ದಾರೆ. ಶಂಕಿತ ಉಗ್ರರು ವೃತ್ತಿಯಲ್ಲಿ ವೈದ್ಯರಾಗಿವುದು ದುರಂತ. ಹೊಟ್ಟೆಗೆ ಇಲ್ಲದವರು, ಕಷ್ಟದ್ಲಲಿರುವವರು ಈ ಕೃತ್ಯ ಮಾಡಿಲ್ಲ, ಇಂಜಿನಿರ್ಸ್, ವೈದ್ಯರೇ ಉಗ್ರ ಕೃತ್ಯ ಎಸಗುತ್ತಿರುವುದ ದುರಂತ ಅವರಿಗೆ ದೇವರು ಏನು ಬುದ್ದಿ ಕೊಟ್ಟಿದ್ದಾನೋ ಅರ್ಥ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



