ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಖಾಡ ಈ ಬಾರಿ ಬಹಳ ವಿಭಿನ್ನವಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿ ಬಿಜೆಪಿಯಿಂದ, ಅಲ್ಪಸಂಖ್ಯಾತ ಸಮುದಾಯಕ್ಕೆ ಅಭ್ಯರ್ಥಿ ಕಾಂಗ್ರೆಸ್ನಿಂದ ಕಣದಲ್ಲಿದ್ದಾರೆ. ಕಳೆದ ಮೂರು ಚುನಾವಣೆಯಲ್ಲಿ ಸತತವಾಗಿ ಗೆಲುವಿನ ನಗೆ ಬೀರುತ್ತಾ ಬರುತ್ತಿರುವ ಬಿಜೆಪಿಯ ಪಿ.ಸಿ. ಮೋಹನ್ ಈ ಬಾರಿಯೂ ನಾಲ್ಕನೇ ಅವಧಿಗೆ ಸಂಸತ್ ಪ್ರವೇಶಿಸಿ, ಕೇಂದ್ರ ಸಚಿವರಾಗುವ ಕನಸು ಕಾಣುತ್ತಿದ್ದಾರೆ.
ಆದ್ರೆ, ಪಿ.ಸಿ. ಮೋಹನ್ ಕನಸ್ಸು ನುಚ್ಚು ನೂರು ಮಾಡಲು ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿರುವ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಮನ್ಸೂರ್ ಅಲಿಖಾನ್ಗೆ ಮಣೆ ಹಾಕಿದೆ.ಪಿ.ಸಿ.ಮೋಹನ್ V/S ಮನ್ಸೂರ್ ಅಲಿಖಾನ್ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಬರುತ್ತದೆ. ಮಹದೇವಪುರ (ಮೀಸಲು), ಸರ್. ಸಿ.ವಿ.ರಾಮನ್ನಗರ (ಮೀಸಲು), ಸರ್ವಜ್ಞನಗರ, ಶಾಂತಿನಗರ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳು ಸೇರುತ್ತದೆ.
ಈ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳ 5 ಕಾಂಗ್ರೆಸ್ನ ಶಾಸಕರುಗಳು, 3 ಮಂದಿ ಬಿಜೆಪಿ ಶಾಸಕರಿದ್ದಾರೆ.
ಇದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಭದ್ರಕೋಟೆ ಆದ್ರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆ ಅಂತಲೇ ಬಿಂಬಿತವಾಗಿದೆ.
ಇತ್ತ ಪಿ.ಸಿ.ಮೋಹನ್ ಕಳೆದ ಮೂರು ಚುನಾವಣೆಯಲ್ಲಿ ಪಿ.ಸಿ. ಮೋಹನ್ ಸತತವಾಗಿ ಆಯ್ಕೆಯಾಗುತ್ತಿದ್ದು, ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಿಂದುಳಿದ ವರ್ಗಗಳ ಹಿನ್ನೆಲೆಯಲ್ಲಿ, ಆರ್ಎಸ್ಎಸ್ನ ಹಿನ್ನೆಲೆಯೂ ಪಿ.ಸಿ ಮೋಹನ್ಗೆ ಪ್ಲಸ್ ಪಾಯಿಂಟ್.
ಕಾಂಗ್ರೆಸ್ ಈ ಕ್ಷೇತ್ರವನ್ನು ತನ್ನತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದು, ಪ್ರತಿಬಾರಿಯೂ ಎಡವುತ್ತಾ ಬಂದಿದೆ. ಪ್ರತಿ ಚುನಾವಣೆಯಲ್ಲಿಯೂ ಹೊಸ ಹೊಸ ಮುಖದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತಿದೆ. ಒಂದು ಚುನಾವಣೆಯಲ್ಲಿ ಕಣಕ್ಕಿಳಿದ ಅಭ್ಯರ್ಥಿ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಮಾಡದೇ, ಯಾವುದೇ ವ್ಯಕ್ತಿಯನ್ನು ಭದ್ರ ಬುನಾದಿ ಹಾಕಲು ಬಿಡದಿರುವುದೇ ಕಾಂಗ್ರೆಸ್ ಸೋಲಿನ ಒಂದು ಅಂಶ ಎನ್ನಲಾಗಿದೆ.
ಇದರ ಜೊತೆಗೆ ಅಲ್ಪಸಂಖ್ಯಾತ ಸಮಯದಾಯ ಈ ಬಾರಿ ಕಾಂಗ್ರೆಸ್ನ ಜೊತೆಗೆ ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿದೆ. ಕ್ಷೇತ್ರದಲ್ಲಿ ಬಡತನದ ರೇಖೆಗಿಂತ ಕೆಳಗೀಳಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ.ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕ್ಚೇತ್ರದಲ್ಲಿ ಗ್ಯಾರೆಂಟಿಗಳು ಕೈ ಹಿಡಿಯುವ ಸಾಧ್ಯತೆಗಳು ಇದೆ. ಕಾರಣ ಏನು ಅಂದರೆ, ಪುರುಷ V/S ಮಹಿಳೆಯರ ಮತಗಳ ಸಂಖ್ಯಾ ಬಲಾಬಲ ಸಮ ಪ್ರಮಾಣದಲ್ಲಿದೆ. ಇನ್ನು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು ಕಾಂಗ್ರೆಸ್ ಪರ ನಿಲ್ಲುವ ಸಾಧ್ಯತೆಯಿದೆ.
ಇತ್ತ ಬಿಜೆಪಿ ಮೋದಿ ಗ್ಯಾರೆಂಟಿ ಎಂಬುದನ್ನು ಬಿಂಬಿಸುತ್ತಾ ಜನತಲರ ಬಳಿ ಹೋಗುತ್ತಿದೆ.ಇದೆಲ್ಲದರ ಮಧ್ಯೆ ಮೊದಲ ಬಾರಿಗೆ ಆದೃಷ್ಟ ಪರೀಕ್ಷೆಗೆ ಇಳಿದಿರುವ ಮನ್ಸೂರ್ ಅಲಿಖಾನ್ ಹಾಗೂ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪಿ. ಸಿ.ಮೋಹನ್ ಮಧ್ಯೆ ಪೈಪೋಟಿ ಇರಲಿದ್ದು, ಅಂತಿಮವಾಗಿ ನಗರ ಪ್ರದೇಶಗಳೇ ಇರುವ ಕಾರಣ, ನಗರ ಪ್ರದೇಶದ ಮತಗಳು ಬಿಜೆಪಿ ಪರ ಚಲಾವಣೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಪಿ.ಸಿ.ಮೋಹನ್ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.