ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ, ನಗರದ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದು. ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿಗಳು ಯಾರಾಗುತ್ತಾರೆ ಎಂಬ ಚರ್ಚೆಯಿಂದಲೇ ಕುತೂಹಲ ಕೆರಳಿಸಿದ್ದ ಕ್ಷೇತ್ರವಿದು. ಒಕ್ಕಲಿಗ, ವೀರಶೈವ-ಲಿಂಗಾಯತ, ಹಿಂದುಳಿದ ವರ್ಗಗಳ ಮತಗಳೇ ಹೆಚ್ಚಿನ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲಿದ್ದು, ಕೆ.ಆರ್.ಪುರಂ, ಪುಲಿಕೇಶಿನಗರ, ಬ್ಯಾಟರಾಯನಪುರ, ಹೆಬ್ಬಾಳ, ಮಲ್ಲೇಶ್ವರಂ, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳು ಈ ವ್ಯಾಪ್ತಿಯಲ್ಲಿ ಬರುತ್ತದೆ.
ಈ ವಿಧಾನಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಬಿಜೆಪಿ ಶಾಸಕರುಗಳು ಪ್ರತಿನಿಧಿಸುತ್ತಿದ್ರೆ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ಶಾಸಕರಿದ್ದಾರೆ. ಇನ್ನು ಈ ಬಾರಿ ಮಹಿಳೆ ಗಿ/S ಪುರುಷ ಆಖಾಡ ರೆಡೊಯಾಗಿದ್ದು, ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಖಾಡಕ್ಕೆ ಮೊದಲ ಬಾರಿಗೆ ಕ್ಷೇತ್ರ ಪ್ರತಿನಿಧಿಸಲು ಅಣಿಯಾದ್ರೆ, ಇತ್ತ ಕಾಂಗ್ರೆಸ್ನಿಂದ ರಾಜ್ಯಸಭೆಯ ಮಾಜಿ ಸದಸ್ಯ ಪ್ರೋ || ರಾಜೀವ್ ಗೌಡ ಆದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಕೂಡ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಅಖಾಡ ರಂಗೇರಿದೆ.
ಇನ್ನು ವಿಶೇಷ ಅಂದರೆ, ಕಳೆದ 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಸ್.ಟಿ. ಸೋಮಶೇಖರ್, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಒಂದು ಕಾಲನ್ನು ಎತ್ತಿ ಪಕ್ಷದಿಂದ ಹೊರಗಿಟ್ಟಿದ್ದಾರೆ. ಇಡೀ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಇರುವುದು ಎಸ್.ಟಿ. ಸೋಮಶೇಖರ್ ಪ್ರತಿನಿಧಿಸುವ ಕ್ಷೇತ್ರ ಯಶವಂತಪುರದಲ್ಲಿ. ಈಗ ಅವರೇ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಇನ್ನೊಂದು ವಿಶೇಷ ಅಂದರೆ, 2008 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇದೇ ಯಶವಂತಪುರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಶಾಸಕರಾಗಿ ಆಯ್ಕೆಯಾಗಿದ್ದು, ಆ ಕ್ಷೇತ್ರದ ಮೇಲೆ ಹಿಡಿತ, ಪ್ರಭಾವ ಹಾಗೂ ಪರಿಚಯವಿದೆ.
ಇನ್ನು ಪ್ರೊ|| ರಾಜೀವ್ ಗೌಡ ಮೊದಲ ಬಾರಿಗೆ ಲೋಕಾ ಆಖಾಡಕ್ಕೆ ಆದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಒಕ್ಕಲಿಗ ಸಮುದಾಯದ ವಿದ್ಯಾವಂತರಾಗಿ, ರಾಜ್ಯಸಭೆಯಲ್ಲಿ ಕಾರ್ಯನಿರ್ವಹಣೆ ಮಾಡಿರುವ ಆಧಾರದಡಿಯಲ್ಲಿ ಕಾಂಗ್ರೆಸ್ ಪ್ರೊ || ರಾಜೀವ್ ಗೌಡರನ್ನು ಕಣಕ್ಕಿಳಿಸಿದ್ರೆ, ಇತ್ತ ಬಿಜೆಪಿ ಲೇಡಿ ಫೈರ್ ಬ್ರ್ಯಾಂಡ್ ಶೋಭಾ ಕರಂದ್ಲಾಜೆ ಅವರನ್ನೇ ಆಖಾಡಕ್ಕೆ ಇಳಿಸಿ ಪೈಪೋಟಿ ಒಡ್ಡಿದೆ.
ಎರಡು ಬಾರಿ ಡಿ.ಬಿ.ಚಂದ್ರೇಗೌಡ, ಎರಡು ಬಾರಿ ಡಿ.ವಿ. ಸದಾನಂದಗೌಡ ಬಿಜೆಪಿಯಿಂದ ಆಯ್ಕೆಯಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಈ ಬಾರಿ ಮಹಿಳೆಗೆ ಬಿಜೆಪಿಗೆ ಮಣೆ ಹಾಕಿದ್ದು ಹಾಲಿ ಸಂಸದ ಡಿವಿಎಸ್ಗೆ ಕೊಕ್ ಕೊಟ್ಟಿರುವ ಕಾರಣವನ್ನೇ ಅಸ್ತ್ರವನ್ನಾಗಿ ಕಾಂಗ್ರೆಸ್ ಮಾಡಿಕೊಂಡಿದೆ. ಆದ್ರೆ, ಇದೆಲ್ಲಾ ಏನೇ ಇರಬಹುದು, ಈಗಾಗಲೇ ಅಭ್ಯರ್ಥಿ ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಪರ್ಯಟನೆ ಮಾಡಲು ಆರಂಭಿಸಿರುವ ಶೋಭಾ ಕರಂದ್ಲಾಜೆ ಬಂಡಾಯ ನಾಯಕರ ಮನವೊಲಿಕೆ ಯತ್ನಿಸುತ್ತಿದ್ದಾರೆ.
ಇನ್ನು ನರೇಂದ್ರ ಮೋದಿ ಸರ್ಕಾರದ ಸಾಧನೆ, ಯಡಿಯೂರಪ್ಪರ ಮಾರ್ಗದರ್ಶನದಂತೆ ಶೋಭಾ ಕರಂದ್ಲಾಜೆ ಅಖಾಡಕ್ಕೆ ಇಳಿದರೆ, ಪ್ರೊ|| ರಾಜೀವ್ ಗೌಡ, ಗ್ಯಾರೆಂಟಿಗಳ ಭಾಗ್ಯಗಳ ಮೇಲೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಎಂದಿದ್ದ ಅಭ್ಯರ್ಥಿಗೆ ಮತ ನೀಡುತ್ತೀರಾ? ಎಂದು ಪ್ರಶ್ನಿಸುತ್ತಾ ಆಖಾಡಕ್ಕೆ ಧುಮುಕಿದ್ದಾರೆ.ಆದ್ರೆ, ಬಿಜೆಪಿಯ ಭದ್ರಕೋಟೆ ಬೆಂಗಳೂರು ಉತ್ತರ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ಕಾರಣ. ಈ ಬಾರಿಯೂ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.