ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ಕಾಂಗ್ರೆಸ್ನ ಯುವರಾಜ ಎಂದೇ ಕರೆಯಲ್ಪಡುತ್ತಿದ್ದ ರಾಹುಲ್ ಗಾಂಧಿ ಅವರಿಗೆ ಇಂದು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ನಿಂದ ಜಾಮೀನು ಮಂಜೂರಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಪ್ರಪಚಾರದ ಜಾಹೀರಾತು ಹೊರಡಿಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ಗಾಂಧಿಯವರು ಖುದ್ದಾಗಿ ಕೋರ್ಟ್ ಮುಂದೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿತ್ತು.
ಬಿಜೆಪಿ ವಿರುದ್ಧ ವಿಧಾನಸಭೆ ಚುನಾವಣೆ ವೇಳೆ 40% ಕಮಿಷನ್ ಆರೋಪದ ಜಾಹೀರಾತು ಹೊರಡಿಸಲಾಗಿತ್ತು.
ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ಖುದ್ದಾಗಿ ಹಾಜರಾಗಲು ಸೂಚಿಸಿದ ಹಿನ್ನೆಲೆಯಲ್ಲಿ ರಾಹುಲ್ ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ಗೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾದರು.42ಎಸಿಎಂಎಂ ನ್ಯಾಯಾಲಯದ ರಾಹುಲ್ಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿ ವಿಚಾರಣೆಂಯನ್ನು ಜೂ. 30ಕ್ಕೆ ಮುಂದೂಡಲಾಯಿತು.
ಈ ಸಂರ್ದದಲ್ಲಿ ಮಾಜಿ ಸಂಸದ ಡಿ.ಕೆಸುರೇಶ್ ರಾಹುಲ್ಗೆ ಶ್ಯೂರಿಟಿ ನೀಡಿ ಸಹಿ ಹಾಕಿ 75 ಲಕ್ಷ ರೂ. ಮೌಲ್ಯದ ಆಸ್ತಿಪತ್ರವನ್ನು ಭದ್ರತೆಯಾಗಿ ಸಲ್ಲಿಕೆ ಮಾಡಿದರು.ಜಾಮೀನು ಬಾಂಡ್ಗೆ ಸಹಿ ಮಾಡಿದ ರಾಹುಲ್ ಅವರು ಕೋರ್ಟ್ನಿಂದ ನಿರ್ಗಮಿಸಿದರು.ಇಂದು ಬೆಳಗ್ಗೆ ಕೋರ್ಟ್ಗೆಹಾಜರಾಗಲು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಾಗತಿಸಿದರು.ರಾಹುಲ್ ಅವರು ಕೋರ್ಟ್ಗೆ ಆಗಮಿಸಿದ ಸಂದರ್ಭದಲ್ಲಿ ಅವರೊಟ್ಟಿಗೂ ಸಿಎಂ, ಡಿಸಿಎಂ ಜೊತೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೇವಾಲಾ ಸಹ ಉಪಸ್ಥಿತರಿದ್ದರು.