ತಿ.ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ತಿಳಿದು ನನ್ನ ಗೆಲುವಿಗೆ ಸಹಕಾರ ನೀಡಿ ಕಾರ್ಯಕರ್ತರು ನಾನೇ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಗೆಲ್ಲಲು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನಾಂಕ 03:04:2023 ರ ಬುಧವಾರ ನಾಮ ಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಚಿಕ್ಕಮ್ಮ ತಾಯಿ ಯಾತ್ರಿ ಭವವನದಲ್ಲಿ ಕಾರ್ಯಕರ್ತರ ಸಭೆ ನೆಡಸಿ ಮಾತನಾಡಿದ ಸುನಿಲ್ ಬೋಸ್ ಇದು ಲೋಕಸಭಾ ಚುನಾವಣೆ ಆಗಿರುವ ಕಾರಣ ಕ್ಷೇತ್ರದ ಪ್ರತಿಯೊಬ್ಬ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದು ಕಷ್ಟವಾಗುತ್ತದೆ. ಆದರಿಂದ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆ ಪ್ರಚಾರ ನೆಡಸಬೇಕೆಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪರವಾಗಿ ಮತ ಕೇಳಲಿಕ್ಕೆ ಕಾಂಗ್ರೆಸ್ ಪಕ್ಷದ ಸಾಧನೆ ಇದೆ. ಮತದಾರರಿಗೆ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕೆಲಸ ಹಾಗೂ ಗ್ಯಾರೆಂಟಿ ಯೋಜನೆಗಳನ್ನು ತಿಳಿಸಿ ಮತ ಕೇಳಬಹುದು. ಬಿಜೆಪಿ ಪಕ್ಷಕ್ಕೆ ಜನರ ಬಳಿ ಮತ ಕೇಳಲು ವಿಷಯಗಳೇ ಇಲ್ಲ.ಬಿಜೆಪಿಯ ಭ್ರಷ್ಟಾಚಾರ, ಕೋಮುವಾದ.ಸುಳ್ಳು ಭರವಸೆಗಳನ್ನು ಜನರಿಗೆ ಕಾರ್ಯಕರ್ತರು ತಿಳಿಸಬೇಕು ಎಂದು ಹೇಳಿದರು.
ಏಪ್ರೀಲ್ 3 ರಂದು ನಾಮ ಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಹಾಗೂ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಶಾಸಕರು ಬರುತ್ತಾರೆ ಅಂದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು ಹಾಗೂ ಏಪ್ರಿಲ್ 1 ರಂದು ನರಸೀಪುರ ಪಟ್ಟಣದ ಚಿಕ್ಮಮ್ಮ ತಾಯಿ ಯಾತ್ರಿ ಭವನದಲ್ಲಿ ಸಭೆ ಇದ್ದು ಅಂದಿನ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಮನವಿ ಮಾಡಿದರು .
ಮುಂದುವರಿದು ಮಾತನಾಡಿದ ಸುನಿಲ್ ಬೋಸ್ ಇಂದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಬೇಕಾದರೆ ನರಸೀಪುರ ಕ್ಷೇತ್ರದ ಮತದಾರರು ಕಾಂಗ್ರೆಸ್ ಕಾರ್ಯಕರ್ತರೆ ಕಾರಣ ತಾವು ಈ ಚುನಾವಣೆಯಲ್ಲಿ ಶಕ್ತಿ ನೀಡಿದರೆ ಮರಳಿ ಆ ಶಕ್ತಿಯನ್ನು ತಮಗೆ ನೀಡುತ್ತೇನೆ ಮೂರು ಬಾರಿ ಟಿಕೆಟ್ ವಂಚಿತನಾಗಿದ್ದೇನೆ ಈ ಬಾರಿ ಪಕ್ಷ ಅವಕಾಶ ಮಾಡಿಕೊಟ್ಟಿದೆ ತಾವೇಲ್ಲರೂ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಿ ಎಂದರು.
ಇದೇ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ವತಿಯಿಂದ ಸುನಿಲ್ ಬೋಸ್ ಬೆಂಬಲಿಸಿ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೈ.ಎನ್.ಶಂಕೆರೇಗೌಡ, ಜಿ.ಪಂ ಮಾಜಿ ಸದಸ್ಯರಾದ,ತಲಕಾಡು ಮಂಜುನಾಥ್, ಪದವೀಧರ ಘಟಕದ ತಾಲೂಕು ಅಧ್ಯಕ್ಷ ಪರಮೇಶ್ ಪಟೇಲ್, ಎಂ.ಸುಧೀರ್, ಉಕ್ಕಲಗೆರೆ ಬಸವಣ್ಣ, ಚೆನ್ನಕೇಶವ,ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ. ನರಸಿಂಹಮಾದನಾಯಕ, ಸೋಸಲೆ ಪರಶಿವಮೂರ್ತಿ, ಕೆ.ಮಲ್ಲು, ಟೌನ್ ಅಧ್ಯಕ್ಷ ಅಂದಾನಿ, ಬಸವನಹಳ್ಳಿ ಮಹೇಂದ್ರ, ಮಂಜು, ಮುಖಂಡರಾದ ತಲಕಾಡು ಸುಂದರ ನಾಯಕ. ಬೂದಹಳ್ಳಿ ಸಿದ್ದರಾಜು, ಮುಸುವಿನ ಕೊಪ್ಪಲು ಶಿವರಾಂ, ಹೆಮ್ಮಿಗೆ ಶೇಷಾದ್ರಿ, ಗ್ರಾಪಂ ಉಪಾಧ್ಯಕ್ಷ ಸೋಮಣ್ಣ,ವೀಣಾ ಶಿವಕುಮಾರ್, ಬನ್ನೂರು ಕೃಷ್ಣ, ವಾಟಾಳ್ ನಾಗೇಶ್, ಅಕ್ಕೂರು ಗುರುಮೂರ್ತಿ, ಆದಿ ಬೆಟ್ಟಳ್ಳಿ ಮಂಜುನಾಥ್, ಅಶೋಕ್ ಕುಮಾರ್, ಮಹೇಶ್, ಡೈರಿ ಸೋಮಣ್ಣ ಇದ್ದರು.