ಬೆಂಗಳೂರು: ಡಾ.ರಾಜಕುಮಾರ್ ರಂತಹ ಶ್ರೇಷ್ಟ ನಟರು ಚಲನಚಿತ್ರಗಳ ಮೂಲಕ, ರಂಗಭೂಮಿ ಕಲಾವಿದರು ನಾಟಕದ ಮೂಲಕ, ಉತ್ತಮ ಸಂದೇಶದಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯೆ, ಹಿರಿಯ ನಟಿ ಉಮಾಶ್ರೀ ಹೇಳಿದರು.
ಬೆಂಗಳೂರು ಜೆ.ಸಿ. ರಸ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ, ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯಿಂದ ನಡೆದ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮ್ರಾಟ್ ಎಂಬ ಬಿರುದುಗಳು ಶ್ರೇಷ್ಟ ನಟರಿಗೆ, ನಿರ್ದೇಶಕರುಗಳಿಗೆ, ಸಾಹಿತಿಗಳಿಗೆ ಸಂಘ- ಸಂಸ್ಥೆಗಳು ನೀಡಿರುವುದು ಗಮನಾರ್ಹ, ಅದರಂತೆ ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮೈಸೂರು ಮಂಜುಳ(ಜೂ. ಮಾಲಾಶ್ರೀ), ರಂಗಭೂಮಿ, ಚಿತ್ರನಟಿ ಕಲಾವಿದೆ ಇವರು ಸಾಧಕರುಗಳಿಗೆ ಸಾಮ್ರಾಟ್ ಸ್ಟಾರ್ ಅವಾರ್ಡ್ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ ಎಂದು ಹಾಗೂ ಗಣ್ಯರಿಗೆ ಉಮಾಶ್ರೀ ರವರು ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪಾಲಹಳ್ಳಿ ಮಠಾಧ್ಯಕ್ಷರಾದ ಡಾ ಶ್ರೀಶ್ರೀ ಸಿದ್ದರಾಜ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು, ಶಶಿಧರ್ ಕೋಟೆ, ಮಿಮಿಕ್ರಿ ಗೋಪಿ, ಮೈಸೂರಿನ ಗೋಲ್ಡನ್ ಸುರೇಶ್, ಎಬಿ.ಬಿ. ಮಂಜಣ್ಣ, ಪಿ. ಸುಜ್ಞಾನ ಮೂರ್ತಿ, ದಯಾನಂದ್, ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ, ಮೈಸೂರು ಲತಾ(ಜೂ.ರಕ್ಷಿತ) ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಚಿತ್ರ: ಜಿ.ಎಲ್.ಸಂಪಂಗಿ ರಾಮುಲು
ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯಿಂದ ಕಲಾ ಸಾಮ್ರಾಟ್ ಸ್ಟಾರ್ ಅವಾರ್ಡ್ ಪ್ರಶಸ್ತಿ ಪ್ರದಾನ



