ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕು ಬೂದಿಗೆರೆ ಗ್ರಾಮದ ಕಾಲಭೈರವ ಸ್ವಾಮಿಯ ಪ್ರಯುಕ್ತ ದೇವಾಲಯದಲ್ಲಿ ಐದು ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದೆನವ ಚಂಡಿಕಾ ಹೋಮ ರುದ್ರ ಹೋಮ 108 ಕುಂಭಗಳ ಮಹಾಭಿಷೇಕ ನಡೆಯಲಿದೆ. ಸೋಮವಾರದಂದು ಸುಪ್ರಭಾತ ಗೋಪೂಜೆ ಪ್ರಾರಂಭವಾಗಿದೆ.
ಮಂಗಳವಾರ ಫಲಪಂಚಾಮೃತ ಅಭಿಷೇಕ ರುದ್ರ ಅಭಿಷೇಕ ಸಂಜೆ ಪರಿವರ್ತನಾ ಕಲಾ ಸಂಸ್ಥೆಯಿಂದ ಕಾಲಭೈರವೇಶ್ವರ ಸ್ವಾಮಿಯ ನೃತ್ಯ ರೂಪಕ ನಾಟಕ, ಬುಧವಾರ ಮೃತ್ಯುಂಜಯ ಹೋಮ ಏಕದಶ ರುದ್ರ ಹೋಮ, ಗುರುವಾರ ಅಷ್ಟಭೈರವ ಹೋಮ ಕಾಲಭೈರವ ಹೋಮ ನವ ಚಂಡಿಕಾ ಹೋಮ ವಿಶೇಷ ಪೂಜೆ ನಡೆಯುವುದು.ಶುಕ್ರವಾರ ದೇವಾಲಯದಲ್ಲಿ ಉಯ್ಯಾಲೆ ಸೇವೆ ವಿಶೇಷ ಪೂಜೆಗಳು ನಡೆಯುತ್ತವೆ ಎಂದು ಕಾಲಭೈರವ ದೇವಾಲಯ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.