ಮಾಗಡಿ: ಶಾಸಕ ಹೆಚ್.ಸಿ.ಬಾಲಕೃಷ್ಣ ರವರು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ನಡುವೆಯೂ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದಾರೆ.ಆದರೆ ಇದನ್ನು ಸಹಿಸದೇ ಪ್ರತಿಪಕ್ಷದವರು ಸುಖಾಸುಮ್ಮನೆ ಇಲ್ಲಸಲ್ಲದ ಆರೋಪ,ಟೀಕೆ,ಟಿಪ್ಪಣಿಗಳನ್ನು ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ.ಅವರು ಅಭಿವೃದ್ಧಿಗೆ ಸ್ಪಂದಿಸದಿದ್ದರೂ ಪರವಾಗಿಲ್ಲ. ವಿರೋಧ ಮಾಡುವುದನ್ನು ಬಿಡಬೇಕು ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಯೋಜನೆಯ ಅದ್ಯಕ್ಷ ಕಲ್ಕೆರೆ ಶಿವಣ್ಣ ತಾಕೀತು ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೈಟೆಕ್ ಆಸ್ಪತ್ರೆಗೆ ಶಾಸಕರು ಗುದ್ದಲಿಪೂಜೆ ನೆರವೇರಿಸುವಾಗ ಮಾಜಿ ಶಾಸಕ ಎ.ಮಂಜುನಾಥ್ ಹೆಚ್.ಎಂ.ಕೃಷ್ಣಮೂರ್ತಿಯವರು ಸುಮ್ಮನಿದ್ದು ಇದೀಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕೆ ಕಾನೂನಾತ್ಮಕವಾಗಿ ಪುರಸಭೆಯವರು ಭೂಮಿಯನ್ನು ಹಸ್ತಾಂತರಿಸಿದ್ದಾರೆ. ಸರಕಾರ ನಿಗಧಿಪಡಿಸಿರುವ ಹಣವನ್ನು ಜಮಾ ಮಾಡಿಕೊಂಡೇ ಸ್ಥಳ ನೀಡಲಾಗಿದೆ. ಇದೀಗ ಬೆಲೆ ಬಾಳುವ ಮರಗಳಿವೆ ಎಂಬ ಹೇಳಿಕೆ ನೀಡುವ ಮೂಲಕ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಾವೇನು ಕೆಂಪೇಗೌಡರ ಪ್ರತಿಮೆಯನ್ನು ಕಿತ್ತು ಎಲ್ಲಿಯೋ ಹಾಕುತ್ತಿಲ್ಲ. ಪಕ್ಕದಲ್ಲಿಯೇ ಗೌರವಯುತವಾಗಿ ಸ್ಥಳಾಂತರಿಸಲಾಗುತ್ತಿದೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಸಮಂಜಸವಲ್ಲ ಎಂದು ಶಿವಣ್ಣ ತಿಳಿಸಿದರು.ಎಸ್.ಸಿ.ಎಸ್.ಟಿ.ವಿಭಾಗ ಘಟಕದ ಅದ್ಯಕ್ಷ ಬ್ಯಾಲದಕೆರೆ ಚಿಕ್ಕರಾಜು ಆಸ್ಪತ್ರೆಯು ಈ ತಾಲ್ಲೂಕಿನ ಬಡ ಜನರಿಗೆ ಅತ್ಯವಶ್ಯಕವಾಗಿದೆ.ಪಟ್ಟಣದ ಮಧ್ಯ ಭಾಗದಲ್ಲಿ ಆಸ್ಪತ್ರೆ ನಿರ್ಮಿಸಿದರೆ ಒಳಿತು ಎಂದು ಶಾಸಕ ಬಾಲಕೃಷ್ಣರವರು ಅರ್ಥೆಸಿಕೊಂಡು ಹಳೆಯ ಆಸ್ಪತ್ರೆ ಮುಂಭಾಗದಲ್ಲಿ ನಿರ್ಮಿಸುತ್ತಿದ್ದಾರೆ.ಆದರೆ ಮಾಡಬಾಳ್ ಜಯರಾಮ್ ಅವರು ಹಾರೋಹಳ್ಳಿ ಬಳಿಯಲ್ಲಿ ಆಸ್ಪತ್ರೆ ನಿರ್ಮಿಸಬೇಕು ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ.ಆಸ್ಪತ್ರೆ ನಿರ್ಮಾಣಕ್ಕೆ 42 ಕೋಟಿ ಹಣ ಬಿಡುಗಡೆಯಾಗಿದ್ದು ಇದು ಶಾಸಕರ ಸಾರ್ವಜನಿಕ ಇಚ್ಚಾಶಕ್ತಿಯ ಮತ್ತೊಂದು ವಿಶೇಷವಾಗಿದೆ.ಇದನ್ನು ಸಹಿಸದೆ ಅಡ್ಡಿಪಡಿಸಲು ಮುಂದಾದರೆ ನಾವುಗಳು ಸುಮ್ಮನೆ ಕೂರುವುದಿಲ್ಲ.ಅಡ್ಡಿಪಡಿಸುವವರ ವಿರುಧ್ಧವಾಗಿ “ಕರಪತ್ರ”ಮುದ್ರಿಸಿ ಇಡೀ ತಾಲ್ಲೂಕಿನಾದ್ಯಂತ ಹಂಚಲಾಗುತ್ತದೆ ಎಂದು ಚಿಕ್ಕರಾಜು ಎಚ್ಚರಿಕೆ ನೀಡಿದರು.ಪುರಸಭೆ ಸ್ಥಾಯಿಸಮಿತಿ ಮಾಜಿ ಅದ್ಯಕ್ಷ ಹೊಸಪೇಟೆ ಶಿವಕುಮಾರ್ ಮಾತನಾಡಿ ಪೂಜಾರಿಪಾಳ್ಯ ಕೃಷ್ಣಮೂರ್ತಿಯವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು “ತಲೆ ಉಳಿಸಿಕೊಳ್ಳಲು”ಜೆಡಿಎಸ್ ಬಿಟ್ಟು ನಮ್ಮ ಬಳಿ ಬಂದಿದ್ದಾರೆ ಎಂದು ಜೆಡಿಎಸ್ ಮುಖಂಡರು ಹೇಳಿಕೆ ನೀಡಿದ್ದಾರೆ. ಅವರು ಎಲ್ಲಿ ಇರುತ್ತಾರೋ ಅಲ್ಲಿ ಪ್ರಾಮಾಣಿಕ,ನಿಷ್ಠೆಯಿಂದ ಇರುತ್ತಾರೆ. ಅವರ ಬಳಿಯಲ್ಲಿ ಇದ್ದಾಗ ಇವರಿಗೆ ಒಳ್ಳೆಯವರು.ಆದರೆ ನಮ್ಮ ಬಳಿ ಬಂದಾಗ ಕೆಟ್ಟವರೇ.?ಇವರು ಗೌರವಯುತವಾಗಿ ನಡೆಸಿಕೊಂಡಿದ್ದರೆ ನಮ್ಮ ಬಳಿಗೆ ಏಕೆ ಬರುತ್ತಿದ್ದರು. ಎನ್.ಇ.ಎಸ್ ರಮೇಶ್ ಅವರು ನಾನು “ಬೋಗಸ್” ಖಾತೆಗಳನ್ನು ಮಾಡಿ ಜನರಿಗೆ ವಂಚಿಸುತ್ತಿದ್ದೇನೆ ಎಂದಿದ್ದಾರೆ. ನಾನು ಎಲ್ಲಿ ಯಾರಿಗೆ ಬೋಗಸ್ ಖಾತೆ ಮಾಡಿದ್ದೇನೆ ಎಂದು ಸಾಬೀತುಮಾಡಲಿ. ಇವರ ಸಹೋದರಿಗೆ ಬೋಗಸ್ ನಿವೇಶನ ಖಾತೆಯಾಗಿದ್ದು ಇದನ್ನು ವಜಾಗೊಳಿಸಲು ಜಿಲ್ಲಾಧಿಕಾರಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.ಯೋಜನಾ ಪ್ರಾಧಿಕಾರದ ಅದ್ಯಕ್ಷ ತಟವಾಳ್ ಪ್ರಕಾಶ್.ಮುಖಂಡರಾದ ಎಂ.ಆರ್.ಮAಜನಾಥ್, ಹೊಸಪೇಟೆ ಅಶ್ವಥ್, ಕನ್ನಸಂದ್ರ ರವಿಕುಮಾರ್, ದೊಡ್ಡಿ ಲಕ್ಷ÷್ಮಣ್, ಲಕ್ಕೇನಹಳ್ಳಿ ಮುನಿರಾಜು, ರೆಹಮಾನ್ ಖಾನ್, ಚಂದ್ರಶೇಖರ್, ಕಲ್ಯಾಗೇಟ್ ಕೃಷ್ಣಪ್ಪ, ಕಲ್ಯಾಗೇಟ್ ಶಾಂತಕುಮಾರ್, ತಿರುಮಲೆ ಗುರುರಾಜು(ಕಾಡ) ಸೇರಿದಂತೆ ಮತ್ತಿತರಿದ್ದರು.
ಅಭಿವೃದ್ಧಿಗೆ ಕೈಜೋಡಿಸಲು ಸಾಧ್ಯವಾಗದಿದ್ದರೆ ಸುಮ್ಮನಿರಿ: ಕಲ್ಕೆರೆ ಶಿವಣ್ಣ



