ಬೆಂಗಳೂರು: 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ರಾಜ್ಯಕ್ಕೆ ಎರಡು ಬಾರಿ ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ.ಹಳೆಯ ಮೈಸೂರು ಭಾಗದಲ್ಲಿ ನರೇಂದ್ರ ಮೋದಿಯ ಪ್ರಚಾರದ ಕಾರ್ಯವೈಖರಿಯನ್ನು ವಿಭಿನ್ನವಾಗಿ ರೂಪಿಸಲು ಮುಖಂಡರು ಮುಂದಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಮಾವೇಶ ನಡೆಸಲು ನರೇಂದ್ರ ಮೋದಿ ಮಾಸ್ಟರ್ಪ್ಲಾನ್ ಮಾಡಿದ್ದು,
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರ ಪ್ರಚಾರ ಮಾಡಿ, ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಯನ್ನು ಹೊಡೆಯುವ ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಮಾವೇಶ ನಡೆಸಿ, ಮೂರು ಕಾರ್ಯಗಳನ್ನು ಸಾಧಿಸಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ಪ್ರಧಾನಿ ಆಪ್ತರಿದ್ದಾರೆ.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ, ಸಮಾವೇಶ ನಡೆಸಿದ್ದೇ ಆದ್ರೆ, ಡಿಕೆ ಬ್ರದರ್ಸ್ ಭದ್ರಕೋಟೆಗೆ ಬಿಜೆಪಿಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಾಂತಾಗುತ್ತದೆ.
ಮೋದಿ ಎಂಟ್ರಿಯಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಬಲವರ್ಧನೆಯಾಗಿ ಗೆಲುವಿನ ವಾತಾವರಣ ಸೃಷ್ಟಿಯಾಗುತ್ತದೆ. ಬಿಜೆಪಿ ಅಭ್ಯರ್ಥಿ ಗೆಲುವಿನ ದಡ ಮುಟ್ಟಬಹುದು.ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್. ಹೆಚ್ ಡಿ.ದೇವೇಗೌಡರ ಅಳಿಯ. ಅವರ ಕುಟುಂಬಕ್ಕೂ ಮೋದಿ ಆಗಮನದಿಂದ ಸಂತೃಪ್ತಿಯಾಗಲಿದೆ. ಮೋದಿ ಆಗಮನದಿಂದ ದೇವೇಗೌಡರ ಕುಟುಂಬ ಕೂಡ ನಮಗೆ ಬೆಂಬಲ ಸಂಪೂರ್ಣವಾಗಿ ಸಿಕ್ಕಿದೆ ಎಂದು ಭಾವಿಸುತ್ತಾ, ಮಂಜುನಾಥ್ಗೆ ಗೆಲುವು ಸಿಗಬಹುದು ಎಂಬ ಆಶಾಭಾವನೆ ಮೂಡಲಿದೆ.
ಇನ್ನು ಕೊನೆಯದಾಗಿ ಅಭ್ಯರ್ಥಿ ಮಂಜುನಾಥ್ ಸೇರಿದಂತೆ ಮಂಡ್ಯ, ಬೆಂಗಳೂರು ನಗರದ ಮೂರು ಕ್ಷೇತ್ರಗಳು, ಚಾಮರಾಜನಗರ, ಮೈಸೂರು- ಕೊಡಗು, ಹಾಸನ ಹಾಗೂ ಕೋಲಾರ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದ್ದು, ಅಲ್ಲಿನ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಸ್ಥಿತಿಯನ್ನು ತಲುಪಬಹುದು.ಹೀಗೆ ಮೂರು ಪ್ರಮುಖ ಕಾರಣಗಳನ್ನು, ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆಯುವ ಮಾಸ್ಟರ್ಪ್ಲಾನ್ ಮಾಡಿದ್ದಾರೆ ನರೇಂದ್ರ ಮೋದಿ.