ಮಳವಳ್ಳಿ: ಕೀರ್ತನೆಗಳ ಮೂಲಕ ಜಾತಿ ಸಂಘರ್ಷ ಹಾಗೂ ಸಾಮಾಜಿಕ ಅಸಮಾನತೆಗಳ ನಿರ್ಮೂಲನೆಗೆಹೋರಾಟ ನಡೆಸಿದ ದಾಸ ಶ್ರೇಷ್ಠಭಕ್ತ ಕನಕದಾಸರ ಜೀವನದ ಆದರ್ಶಗಳನ್ನು ಪಾಲಿಸುವ ಮೂಲಕ ಜಾತಿ ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕೆ ನಾಗರೀಕ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಪುರಸಭೆ ಸದಸ್ಯ ನಂದಕುಮಾರ್ ಹೇಳಿದರು.
ಪುರಸಭಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನಕರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.ಪುರಸಭೆ ಮುಖ್ಯ ಅಧಿಕಾರಿ ನಾಗರತ್ನ ಮಾತನಾಡಿ, ಬಡವರು, ಶ್ರೀಮಂತರು, ಶೋಷಿತರು ಹಾಗೂ ತುಳಿತಕ್ಕೊಳಗಾದ ಜನರು ಎಂಬ ಭೇದಭಾವವಿಲ್ಲದಂತೆ ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗಗಳ ಜನರೂ ಭಗವಂತನ ಒಲುಮೆಗೆ ಪಾತ್ರರಾಗಲು ಸಾಧ್ಯವಿದೆ.
ಆಡಂಬರದ ಪೂಜೆ ಪುರಸ್ಕಾರಗಳಿಗೆ ಭಗವಂತನು ಒಲಿಯುವುದಿಲ್ಲ ಎಂಬ ಸತ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ ದಾಸರಹಳ್ಳಿಯೇ ಶ್ರೇಷ್ಠರಾದ ಭಕ್ತ ಕನಕದಾಸರ ಜೀವನದ ಆದರ್ಶಗಳು ಹಾಗೂ ತತ್ವ ಸಂದೇಶಗಳನ್ನು ಪಾಲಿಸಿದರೆ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಪುರಸಭೆ ಸದಸ್ಯರಾದ ಕೃಷ್ಣ ಸವಿತ ಕೃಷ್ಣ ನಾಗೇಶ್ ಪ್ರಶಾಂತ್ ಸಿದ್ದರಾಜು ನೂರುಲ್ಲ ರವಿ ಶಿವಸ್ವಾಮಿ ರಾಜಶೇಖರ್ ಪುರಸಭೆಯ ಬಿಲ್ ಕಲೆಕ್ಟರ್ ಭೈರಪ್ಪ ಹಾಗೂ ಸಿಬ್ಬಂದಿಗಳು ಹಲವರು ಪಾಲ್ಗೊಂಡಿದ್ದರು.