ಕುಣಿಗಲ್: ಅಂಧಿನ ದಿನಗಳಲ್ಲಿ ಶಿಕ್ಷಣದ ಕೊರತೆ ಇದ್ದರೂ ಸಾಹಿತ್ಯವನ್ನು ಕರಗತ ಮಾಡಿಕೊಂಡು ಆ ಮೂಲಕ ಜಾತಿ ನಿರ್ಮೂಲನೆ ಮತ್ತು ಮೌಡ್ಯತೆ ಬಗ್ಗೆ ಕೀರ್ತನೆ ಮೂಲಕ ಜನ ಜಾಗೃತಿ ಮೂಡಿದ ಕೀರ್ತಿ ಭಕ್ತ ಕನಕದಾಸರಿಗೆ ಸಲ್ಲಬೇಕಾಗಿದೆ ಎಂದು
ಶಾಸಕ ಡಾ.ಹೆಚ್.ಡಿ.ರಂಗನಾಥ್ ತಿಳಿಸಿದರು.
ಗುರುವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 536 ನೇ ಸಂತಶ್ರೇಷ್ಠ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮನುಷ್ಯನಲ್ಲಿನ ಜಾತಿ ಪದ್ದತಿ, ಮೂಢ ನಂಬಿಕೆ ಕಂದಾಚಾರಗಳನ್ನು ಹೊರ ತಂದು ಅವರ ಬದುಕಿಗೆ ವಿನೂತನ ಆಯಾಮ ಕೊಡಬೇಕೆಂದು ಕನಕದಾಸರು ಹಲವು ಕವನಗಳು, ಸಾಹಿತ್ಯಗಳು, ದಾಸರ ಪದಗಳು ರಚನೆ ಮಾಡಿ ಆ ಮೂಲಕ ಜನರಲ್ಲಿ ಹರಿವು ಮೂಡಿಸಿ, ಅವರಲ್ಲಿ ಬದಲಾವಣೆ ತರುವಂತ ಕೆಲಸ ಮಾಡಿದರು,
ಆಧುನೀಕ ಜಗತ್ತಿನಲ್ಲಿ ಈಗಲು ಸಹಾ ಜಾತಿ ಹೆಸರಿನಲ್ಲಿ ಶೋಷಣೆ ದಬ್ಬಾಳಿಕೆ ನಡೆಯುತ್ತಿರುವುದು ದುರಾದೃಷ್ಟಕರ ಎಂದ ಶಾಸಕರು 500 ವರ್ಷಗಳ ಹಿಂದೆ ಇನ್ನೂ ಯಾವ ರೀತಿ ಜಾತಿ ಪದ್ದತಿ ವ್ಯವಸ್ಥೆ ಇತ್ತು ಎಂಬುದು ಉಯಿಸಲು ಸಾಧ್ಯವಿಲ್ಲಿ, ಜಾತಿ ಪದ್ದತಿ ಮಾಡುತ್ತಿದ್ದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನುಷ್ಯ ಕುಲ ಒಂದೇ ಎಂಬ ತತ್ವವನ್ನು ಅಡಿಯಲ್ಲಿ ಸಾರುವ ಮೂಲಕ ಬದಲಾವಣೆ ತಂದಿದ್ದಾರೆ, ಪ್ರಾಣಿ ಸ್ನಾನ ಮಾಡಿರುವುದಿಲ್ಲ, ಹಲ್ಲು ಉಜ್ಜಿರುವುದಿಲ್ಲ, ಅದನ್ನು ನಾವು ತಬ್ಬಿಕೊಳ್ಳುತ್ತೇವೆ, ಆದರೆ ಷೋಷಿತ ಜನರನ್ನು ಏಕೆ ದೂರವಿಡಬೇಕು ಎಂದು ಪ್ರಶ್ನಿಸಿದರು, ಅವರು ನಮ್ಮ ಹಾಗೆ ಮನುಷ್ಯರಲ್ಲವೆ ಎಂದರು, ಕನಕದಾಸರ ಆದರ್ಶವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು,
ನನ್ನಗೆ ಜಾತಿ ಇಲ್ಲ: ನನ್ನಗೆ ಯಾವುದೇ ಜಾತಿ, ಮತ, ಧರ್ಮವಿಲ್ಲ ನಾನು ಯಾರೊಂದಿಗೆ ಒಡ ನಾಟ ಇಟ್ಟುಕೊಂಡಿರುತ್ತೇನೋ ಅದೇ ನನ್ನ ಜಾತಿ, ಯಾರ ಜೊತೆ ಸಂವಾದ ಇಟ್ಟುಕೊಂಡಿರುತ್ತೇನೋ ಅದೇ ನನ್ನ ಧರ್ಮ, ಜಗತ್ತಿನಲ್ಲಿ ಯಾವುದೇ ಜಾತಿ ಇಲ್ಲ, ಮನುಷ್ಯನ್ನು ತಮ್ಮ ಸ್ವಾರ್ಥಕ್ಕಾಗಿ ಜಾತಿ ಮತ ಸೃಷ್ಠಿ ಮಾಡಿ ಮನುಷ್ಯ ಮನುಷ್ಯನ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿ ಸಮಾಜದ ಕಲುಷಿತಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಜಿ.ಕೆ.ನಾಗಣ್ಣ ಮಾತನಾಡಿ ಹೀಗೆ ಸುಮಾರು ಐದು ಸಾವಿರ ವರ್ಷಗಳ ಹಿಂದೆ ದೇಶದಲ್ಲಿ ಜಾತಿ ಎಂಬುದು ಇರಲಿಲ್ಲ, ಬುಡಕಟ್ಟು ಜನಾಂಗ ಮಾತ್ರ ಇತ್ತು, ಮಧುವೆ ಎಲ್ಲರೊಂದಿಗೂ ನಡೆಯುತ್ತಿತು ಆದರೆ ದೇಶಕ್ಕೆ ಆರ್ಯರು ಆಗಮನ ಆದ ಬಳಿಕ ಜಾತಿಗಳನ್ನು ಸೃಷ್ಠಿಸಿ, ನಮ್ಮ ನಮ್ಮಲ್ಲೇ ಜಾತಿ ಶೋಷಣೆ ಪ್ರಾರಂಭಿಸಿದರು ಎಂದು ಹೇಳಿದರು.
ಇದಕ್ಕೂ ಮುನ್ನ ಗ್ರಾಮ ದೇವತೆ ವೃತ್ತದಿಂದ ವೇದಿಕೆ ವರಗೆ ಬಳ್ಳಿ ರಥದಲ್ಲಿ ಕನಕದಾಸರ ಭಾವಚಿತ್ರ ಜಾನಪದ ಘೋಷ್ಠಗಳೊಂದಿಗೆ ಕರೆ ತರಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಸ್.ವಿಶ್ವನಾಥ್, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ಬಿಇಓ ಬೋರೇಗೌಡ, ತುಮುಲ್ ನಿರ್ದೇಶಕ ಬೇಗೂರು ನಾರಾಯಣ್, ಜಿ.ಪಂ ಮಾಜಿ ಸದಸ್ಯ ದೊಡ್ಡಯ್ಯ, ಗ್ರಾ.ಪಂ ಮಾಜಿ ಅಧ್ಯಕ್ಷ ಎಡಿಯೂರುದೀಪು ಮತ್ತಿತರರು ಇದ್ದರು.