This is the title of the web page
This is the title of the web page

ಕನಕಪುರ: ಬಸವಣ್ಣನವರ 890ನೇ ಜಯಂತಿ ಅಂಗವಾಗಿ ಪಾದಯಾತ್ರೆ

ಕನಕಪುರ: ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಳಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ಪರಮತತ್ತ್ವ ವಾಗಿದೆ ಎಂದು ಬಿಲ್ವಪತ್ರೆ ಮಠದ ಶ್ರೀ ಶ್ರೀ ಶ್ರೀ ಶಿವಲಿಂಗ ಮಹಾಸ್ವಾಮೀಜಿ ತಿಳಿಸಿದರು,

ತಾಲ್ಲೂಕು ವೀರಶೈವ ತರುಣ ಸಂಘದ ವತಿಯಿಂದ ಬಸವಣ್ಣನವರ 890 ನೇ ಜಯಂತಿ ಅಂಗವಾಗಿ ನಗರದ ಕೋಟೆ ಬಸವ ಮಂದಿರದಿಂದ ಎಂ.ಜಿ.ರಸ್ತೆಯಲ್ಲಿರುವ ಬಸವಣ್ಣ ದೇವಸ್ಥಾನದವರೆಗೂ ಪಾದಯಾತ್ರೆ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು ಹರಳಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಶಿವನಾಗಮಯ್ಯ ಮೊದಲಾದ ಅಸ್ಪಶ್ಯರು ಬಸವ ತತ್ವದ ಆಶ್ರಯ ಪಡೆದು ಶರಣರು, ಅನುಭವಿ ಗಳು, ವಚನಕಾರರಾಗಿ ಬಸವಣ್ಣ ನವರ ಮಹದಾಶಯ ಗಳ ಸಾಕಾರ ಮೂರ್ತಿಗಳಾದರು.

ಬಸವಣ್ಣನವರ ಕಾಯಕದ ಕಲ್ಪನೆಯಂತೂ ಸಮಗ್ರ ಜೀವನದ ದರ್ಶನವೇ ಆಗಿ ನಿಲ್ಲುತ್ತದೆ, ವ್ಯಕ್ತಿ ಕೈಗೊಂಡ ಉದ್ಯೋಗ ಸಮಾಜದ ಅವಶ್ಯಕತೆಗಳನ್ನು ಪೂರೈಸು ವಂತಿರಬೇಕು, ಅದರ ಫಲ ತನಗೆ ಮಾತ್ರವಲ್ಲದೆ ಸಮಾಜ ಕ್ಕೂ ದೊರೆಯುವಂತಿರಬೇಕು, ಆಗ ಸ್ವಾರ್ಥವಳಿದು ವಿಶ್ವ ಶಕ್ತಿ ಅಂತರಂಗದೊಳಗೆ ಇಳಿದು ಬರಲು ಸಹಾಯಕ ವಾಗುತ್ತದೆ ಎಂದರು,

ನಾವು ಮಾಡುವ ಕಾಯಕದಲ್ಲಿ ಮೇಲು ಕೀಳುಗಳಿಲ್ಲ. ಪ್ರತಿಯೊಬ್ಬನೂ ತನ್ನ ಉದ್ಯೋಗ ಮಾಡಲೇಬೇಕು. ವ್ಯಕ್ತಿ ಅಂದಂದಿನ ಕಾಯಕವನ್ನು ಅಂದಂದು ಮಾಡಿ ಶುದ್ಧನಾಗಬೇಕು.ತನಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ ಶೇಖರಿಸಿಟ್ಟುಕೊಳ್ಳದೆ ಸಮಾಜದ ಒಳಿತಿಗಾಗಿ ವೆಚ್ಚ ಮಾಡುವ ಮೂಲಕ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಂತೆ ತಿಳಿಸಿದರು,
ತಾಲ್ಲೂಕು ವೀರಶೈವ ಸಂಘದ ಮಹದೇವ್ ಪ್ರಸಾದ್, ಕೆ. ಆರ್. ಸುರೇಶ್, ದೇವರಾಜು, ಪವಿತ್ರ ಸೇರಿದಂತೆ ನೂರಾರು ಭಕ್ತ ಮಹಾಶಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.