ನವದೆಹಲಿ: ಡಾ. ಗುಣವಂತ ಮಂಜು ಅಧ್ಯಕ್ಷತೆಯ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನವದೆಹಲಿ ಘಟಕದ ಸಹಯೋಗದೊಂದಿಗೆ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ ನವದೆಹಲಿಯ ಸಭಾಂಗಣದಲ್ಲಿ ವಿಶೇಷವಾದ ಕನ್ನಡ ಡಿಂಡಿಮ ಕನ್ನಡ ರಾಜ್ಯೋತ್ಸವ 2023 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಅವರ ಆತ್ಮಕಥನ ನೀನೋಲಿದ ಬದುಕು ಕೃತಿ ಬಿಡುಗಡೆ ಸಮಾರಂಭ ಮತ್ತು ಕರ್ನಾಟಕ ರಾಜ್ಯದ ತಮಿಳುನಾಡಿನ ಮತ್ತು ಮಹಾರಾಷ್ಟ್ರದ ವಿಶೇಷ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಸಹ ಜರುಗಿತು.
ಕಾರ್ಯಕ್ರಮವನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ರಾಜ್ಯ ಸಚಿವರಾದ ಶ್ರೀ ಭಗವಂತ ಕುಭ ರವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು.ಹಾಗೂ ಮುಂದಿನ ಜನಾಂಗಕ್ಕೆ ಸ್ಪೂರ್ತಿ ಆಗಬಹುದಾದ ಮತ್ತು ಎಲ್ಲರ ಬದುಕಿಗೆ ಭರವಸೆ ತುಂಬುವ ಶರಣ ಬಂಧು ಡಾ. ಸಿ ಸೋಮಶೇಖರ್ ಅವರ ಆತ್ಮಕಥನ ನೀನೋಲಿದ ಬದುಕು ಕೃತಿಯನ್ನು ಸಹ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಡಾ. ಸಿ ಸೋಮಶೇಖರ್ ಅವರು ವಹಿಸಿದ್ದರು. ಡಾ. ಬಿ.ಆರ್ ಹಿರೇಮಠ ಉಪ ಆಯುಕ್ತರು ಅಬಕಾರಿ ಇಲಾಖೆ,ಕರ್ನಾಟಕ ಸರ್ಕಾರ ಇವರು ನಾಡಗೀತೆಗೆ ಚಾಲನೆ ನೀಡಿದರು. ಕೃತಿ ಪರಿಚಯವನ್ನು ಶ್ರೀ ಚಂದ್ರಶೇಖರ್, ಜಂಟಿ ನಿರ್ದೇಶಕರು ಸಂಸತ್ ಭವನ ನವದೆಹಲಿ ಇವರು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ವೆಂಕಟಾಚಲ ಹೆಗಡೆ, ಅಂತರಾಷ್ಟ್ರೀಯ ನ್ಯಾಯಶಾಸ್ತ್ರ ವಿಭಾಗ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ನವದೆಹಲಿ, ಡಾ.ಎಸ್ ಅಕ್ಬರ್ ಭಾಷಾ, ಉದ್ಯಮಿಗಳು ಹಾಗೂ ಸಾಹಿತಿಗಳು ಬೆಂಗಳೂರು, ಶ್ರೀ ಬಿ.ಕೆ. ನಾರಾಯಣಸ್ವಾಮಿ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಗರ ಮತ್ತು ಗ್ರಾಮಾಂತರ ಬೆಂಗಳೂರು.
ಹಾಗೂ ಶ್ರೀ ರೇಣುಕುಮಾರ್ ಉಪ ಸಮನ್ವಯ ಅಧಿಕಾರಿ ನವದೆಹಲಿ.
ಶ್ರೀ ಬಿ.ಕೆ ಬಸವರಾಜ್ ಅಧ್ಯಕ್ಷರು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ, ಶ್ರೀ ಮೈಲಾರಪ್ಪಗೌರವ ಕಾರ್ಯದರ್ಶಿ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ. ಶ್ರೀ. ಶಿವಪ್ಪ ಮಲ್ಲೇಶ್ ದೆಹಲಿ ಶರಣ ಸಾಹಿತ್ಯ ಸಾಹಿತ್ಯ ಪರಿಷತ್ತಿನ ಸದಸ್ಯರು ಭಾಗಿಯಾಗಿದ್ದರು ಇದರೊಂದಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನವದೆಹಲಿ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯ ಕನ್ನಡ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬೆಂಗಳೂರಿನ ನವ್ಯಶ್ರೀ ಎಂ.ಕೆ ರವರು ಹಚ್ಚೇವು ಕನ್ನಡದ ದೀಪ ನೃತ್ಯವನ್ನು ವಿಶೇಷವಾಗಿ ಪ್ರದರ್ಶನ ಮಾಡಿದರು. ದೆಹಲಿ ಕನ್ನಡ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕರ್ನಾಟಕ , ಮಹಾರಾಷ್ಟ್ರ ಮತ್ತು ತಮಿಳುನಾಡಿನ ಸಾಧಕರನ್ನು ಕನ್ನಡ ಕಾರ್ಯಕ್ರಮದಲ್ಲಿ ಒಟ್ಟಾಗಿ ಗೌರವಿಸಿದ್ದು ಕನ್ನಡದ ಸ್ವಾಭಿಮಾನದ ಸಂಕೇತವಾಗಿತ್ತು. ಮತ್ತು ತ್ರಿವೇಣಿ ಸಂಗಮದ ಪ್ರತೀಕವಾಗಿತ್ತು.
ಡಾ.ಸುಕನ್ಯ ಹಿರೇಮಠ, ಡಾ. ಬಿ.ಎನ್ ಮಹೇಶ್ ಕುಮಾರ್, ಡಾ. ಶ್ರೀನಿವಾಸ್ ಬಾಬು, ಡಾ. ಎಸ್. ಆರ್. ಕಮಲ್. ಡಾ. ಕೆ. ಆರ್. ವೆಂಕಟೇಶ್ ಗೌಡ, ಡಾ. ಟಿ.ವಿ ಸಂಪಂಗಿ, ಶ್ರೀ ರಾಜಶೇಖರ ಹಿರೇಮಠ, ಡಾ. ಎಚ್. ಪುಷ್ಪಲತಾ, ಶ್ರೀಮತಿ ನಂದಿನಿ, ಶ್ರೀಮತಿ ರಾಧ, ಡಾ. ಎಸ್. ಭಾಸ್ಕರ್. ಶ್ರೀ ಗೋವಿಂದಳ್ಳಿ ಕೃಷ್ಣೇಗೌಡ, ಡಾ. ಗಾಯಿತ್ರಿ ರುದ್ರೇಶ್, ಶ್ರೀಮತಿ ಎಂ.ಪಿ. ಮಹಾಲಕ್ಷ್ಮಿ, ಶ್ರೀಮತಿ ಸರಸ್ವತಿ ಚಂದ್ರಶೇಖರ್ ರಾವ್ , ಡಾ. ಭಾಸ್ಕರ ಪಾರ್ಥಸಾರಥಿ, ಡಾ. ದಿಲೈ ಬಾಬು ತುಳಸಿ, ಶ್ರೀ. ಸುರೇಶ್ ರಾಜ ಮಾಣಿಕ್ಯಂ, ಡಾ ದಿಲೀಪ್ ಗಣಪತಿ ನಿವಾಸೆ, ಡಾ.ಕಲ್ಲೂರು ದಶರಥ ಮಾಲಗುಂಡೆ , ಡಾ.ಯೋಗೇಶ್ ಅನಿಲ್, ಡಾ.ವಿಕ್ರಮ್ ಬಸಂತ್ ಸಿಂಗಾಡೆ, ಡಾ. ಶಂಕರ್ ಶಿವಾಜಿ ಕಾರತ್, ಡಾ.ಸಂಜಯ್ ಗೋಡೆಕರ್, ಡಾ, ಅಶೋಕ್ ಕುಮಾರ್, ಡಾ. ಆರ್ ವಿಠೋಬಚಾರ್, ಡಾ. ಅರವಿಂದ ಬಸಪ್ಪ ಕರಡಿ ಡಾ. ಸಂತೋಷ್ ಗವಾಸ್, ಡಾ. ಧನಂಜಯ ಹಿಂಗಾಳೆ, ಡಾ.ಎಚ್.ಸಿ .ಪ್ರಕಾಶ್ , ಶ್ರೀ. ಚಂದ್ರಶೇಖರ, ಡಾ. ಶ್ರೀ ಗಂಗಾಧರ್ ಅರ್ಜುನ ಕಾಂಬಳೆ, ಡಾ. ನೂರುಲ್ಲಾ.ಪಿ, ಶ್ರೀಮತಿ ಕಾವ್ಯ ಗೌಡ, ಹೇಮಾ. ಎಂ, ಪ್ರೀತಿ ಬೆಳಗಾವಿ ಮುಂತಾದ ಸಾಧಕರನ್ನು ಗೌರವಿಸಿ ಪುರಸ್ಕರಿಸಲಾಯಿತು.