ಡಾ.ಗುಣವಂತ ಮಂಜು ಅಧ್ಯಕ್ಷತೆಯ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಾಷ್ಟ್ರಕವಿ ಕುವೆಂಪು ಸಾಹಿತ್ಯ ಸಾಂಸ್ಕೃತಿಕ ಪರಿಷತ್ತು ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಕೊಪ್ಪಳ್ಳಿಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ 50 ಆಚರಣೆ ಮತ್ತು ಕನ್ನಡ ಡಿಂಡಿಮ ವಿಚಾರ ಸಂಕಿರಣವವನ್ನು ಏರ್ಪಡಿಸಲಾಗಿತ್ತು.
ಎರಡು ದಿನಗಳ ವಿಶೇಷ ಪ್ರವಾಸ ದಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ, ಸಕ್ರೇಬೈಲಿನ ಆನೆ ಬಿಡಾರದ ವೀಕ್ಷಣೆ ಮತ್ತು ಶೃಂಗೇರಿ ಶಾರದಾ ಮಾತೆಯ ದರ್ಶನಮಾಡಿ ನತರ ಕವಿಶೈಲದ ರಾಷ್ಟ್ರಕವಿ ಕುವೆಂಪುರವರ ಸಮಾಧಿಗೆ ಭೇಟಿ ನೀಡಿ ಗೌರವವನ್ನು ಸಲ್ಲಿಸಲಾಯಿತು.
ನಾಡಿನ ವಿವಿಧ ಕ್ಷೇತ್ರದ ಸಾಧಕ ಗಣ್ಯರಾದ, ಸಾಹಿತಿ ಶ್ರೀ ಸದಾಶಿವಯ್ಯ ಜರಗನಹಳ್ಳಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಜೋಗಿ, ಮೊಳಕಾಲ್ಮುರಿನ ಪ್ರಾಧ್ಯಾಪಕರಾದ ಡಾ.ತಿಮ್ಮಣ್ಣ, ಹೊಳೆನರಸೀಪುರದ ಚಿತ್ರ ಕಲಾವಿದರಾದ ಶ್ರೀ. ಚಂದ್ರಶೇಖರ್, ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಡಾ. ಪುಷ್ಪ ಗೌಡ, ನಂಜನಗೂಡಿನ ಸಮಾಜ ಸೇವಕಿ ಡಾ. ಸರಸ್ವತಿ ಚಂದ್ರಶೇಖರ್ ರಾವ್, ಹಳ್ಳಿ ಮೈಸೂರಿನ ಸಮಾಜ ಸೇವಕರಾದ ಡಾ. ಹೆಚ್.ಸಿ.ಪ್ರಕಾಶ್,
ಕಾಮದೇನು ಹಂಸ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಜಿ. ಜಯರಾಮ,ಅಮೃತ ಮಡಿಲು ಟ್ರಸ್ಟ್ ಸಂಸ್ಥಾಪಕರಾದ ಡಾ. ಮಹೇಶ್ ವಿ.ಎನ್, ಸಮಾಜ ಸೇವಕ ಶ್ರೀ. ರಾಮ್ ಮೋಹನ್. ಮುಂತಾದವರಿಗೆ ರಾಷ್ಟ್ರಕವಿ ಕುವೆಂಪು ಸದ್ಭಾವನ ರಾಜ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ “ನಾ ಕಂಡ ನೇಪಾಳ” “ಕನ್ನಡ ರತ್ನ” ಮತ್ತು ಕರುನಾಡ ಜನಸೇವೆ ಸಮಿತಿಯ ಕ್ಯಾಲೆಂಡರನ್ನು ಲೋಕಾರ್ಪಣೆ ಗೊಳಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಡಾ. ಗುಣವಂತ ಮಂಜು ರವರ ಮಾತನಾಡಿ, ಜಗದಕವಿ, ಯುಗದಕವಿ, ರಾಷ್ಟ್ರಕವಿ ಕುವೆಂಪು ರವರು ನಡೆದಾಡಿದ, ಕಾವ್ಯಕಟ್ಟಿದ, ಪುಣ್ಯಭೂಮಿಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬಹಳ ಹೆಮ್ಮೆ ಎನಿಸುತ್ತಿದೆ ವಿಶ್ವಮಾನವ ಸಂದೇಶ ನೀಡಿದ ಮಹಾ ಕವಿಯ ಆದರ್ಶಗಳು ಎಲ್ಲರ ಬದುಕಿನ ದಾರಿದೀಪವಾಗಲಿ ಎಂದು ಆಶಿಸಿದರು.