ಮಂಜುಮ್ಮೆಲ್ ಬಾಯ್ಸ್ ಮಾಲಿವುಡ್ ಇಂಡಸ್ಟ್ರೀಗೆ ಈ ವರ್ಷ ಸಿಕ್ಕಂತಹ ಸೂಪರ್ ಡೂಪರ್ ಹಿಟ್ ಸಿನಿಮಾ.. ಭಾಷೆ ಗಡಿಯಿಲ್ಲದೆ ವಿಶ್ವದಾದ್ಯಂತ ಪ್ರೇಕ್ಷಕರು ಸಿನಿಮಾವನ್ನ ನೋಡಿ ಇಷ್ಟಪಡ್ತಿದ್ದಾರೆ. ಪಾತ್ರದಾರಿಗಳ ಬಗ್ಗೆ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಇಂಚಿಚೂ ಮಾತನಾಡ್ತಿದ್ದಾರೆ.ಇದೇ ವೇಳೆ ಡಾಟರ್ ಆಫ್ ಪಾರ್ವತಮ್ಮ, ವೀರಂ, ಶುಗರ್ ಲೆಸ್ ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಶಶೀಧರ ಶುಗರ್ ಲೆಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಇದೀಗ ಮಲಯಾಳಂನಲ್ಲಿ ತಮ್ಮ ಮೊದಲ ಚಿತ್ರವನ್ನ ನಿರ್ದೇಶನ ಮಾಡಲು ಹೊರಟಿದ್ದಾರೆ. ಈ ಮೂಲಕ ಇದು ಶಶೀಧರ ಅವರ ಸಿನಿಜರ್ನಿಯ ಎರಡನೇ ಡೈರೆಕ್ಷನ್ ನ ಸಿನಿಮಾವಾಗಲಿದೆ.ಹೌದು ಮಂಜುಮ್ಮೆಲ್ ಬಾಯ್ಸ್ ಬಗ್ಗೆ ಈಗಾಗಲೇ ಹೇಳಿದೆ ಕಾರಣ ಈ ಸಿನಿಮಾದ ಪಾತ್ರದಾರಿ ಶ್ರೀನಾಥ್ ಭಾಸಿ ವೈರಸ್, ಹೋಮ್, ಕುಂಬಳಂಗಿ ನೈಟ್ಸ್ ಅಂತಹ ಅದ್ಭುತ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಮಾಲಿವುಡ್ ಸ್ಟಾರ್ ನಟ ನಮ್ಮ ಕನ್ನಡದ ಪ್ರೊಡ್ಯೂಸರ್ & ಡೈರೆಕ್ಟರ್ ಶಶೀಧರ ಕೆ ಎಮ್ ನಿರ್ದೇಶನ ಮಾಡ್ತಿರೋ ಚೊಚ್ಚಲ ಮಲಯಾಳಂ ಸಿನಿಮಾ ಸಿಬಿಲ್ ಸ್ಕೋರ್ ನಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.
ಈ ಸಿನಿಮಾವನ್ನು ಕನ್ನಡದ ನಿರ್ದೇಶಕ ಡೈರೆಕ್ಟ್ ಮಾಡ್ತಿರೋ ಕಾರಣ, ಹಾಗೆ ಮಲಯಾಳಂ ಸಿನಿಮಾ ಆಗಿರೋದ್ರಿಂದ ಈ ಸಿನಿಮಾದಲ್ಲಿ ಟೆಕ್ನಿಶಿಯನ್ಸ್ ಆರ್ಟಿರ್ಸ್ಟ್ ಕನ್ನಡ ಹಾಗೂ ಮಲಯಾಳಂ ನವರಾಗಿರುತ್ತಾರೆ. ಸೋಹನ್ ಸೀನುಲಾಲ್, ದೀಪಕ್ ಪ್ರಿನ್ಸ್ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ದಿ ಎಮೋಷನ್ಸ್ ಫ್ಯಾಕ್ಟರಿ ಗ್ರೂಪ್ (EFG) ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರ್ತಿರೋ ಸಿನಿಮಾಗೆ ವಿವೇಕ್ ಶ್ರೀಕಂಠಯ್ಯ ಬಂಡವಾಳ ಹೂಡ್ತಿದ್ದಾರೆ. ಕೋ ಪ್ರೊಡ್ಯೂಸರ್ ಆಗಿ ವಿಕ್ರಮ್, ಲೈನ್ ಪ್ರೊಡ್ಯೂಸರ್ ಆಗಿ ದೀಪು ಕರುಣಾಕರಣ್ ಎಕ್ಸೆಕ್ಯೂಟೀವ್ ಪ್ರೊಡ್ಯೂಸರ್ ಆಗಿ ಶಾಜಿ ಫ್ರಾನ್ಸಿಸ್ ಕೈ ಜೋಡಿಸಿದ್ದಾರೆ. ಸಿನಿಮಾದ DOP ಪ್ರದೀಪ್ ನಾಯರ್, ಡೈಲಾಗ್ಸ್ ಅರ್ಜುನ್ ಟಿ ಸತ್ಯನ್, ಎಡಿಟರ್ ಸೋಬಿನ್ ಕೆ ಸೋಮನ್. ಇನ್ನೂ ಕ್ರಿಯೇಟಿವ್ ಹೆಡ್ ಆಗಿ ಶರತ್ ವಿನಾಯಕ್ ಸಿನಿಮಾಗೆ ಜೊತೆಯಾಗಿದ್ದಾರೆ.