ಬೆಂಗಳೂರು: ವಿಸ್ತಾರ ಸಂಸ್ಥೆಯು ನಗರದ ಎಸ್ಜೆಆರ್ಸಿ ಕಾಲೇಜಿನಲ್ಲಿ ವಿಶೇಷವಾದ ಕನ್ನಡ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾಮಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಮಂತ್ರಿಗಳು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ರವರು ಆಗಮಿಸಿ ಎಲ್ಲರಿ ಗೂ ಶುಭವನ್ನು ಕೋರಿದರು. ಮುಖ್ಯ ಅತಿಥಿಗಳಾಗಿ ಡಾ. ಬಿ.ಆರ್ ಹಿರೇಮಠ್, ಶ್ರೀ ಜಯರಾಮ್, ಉಮೇಶ್ , ಬಿ.ಕೆ ರವಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಎಂದರೆ ಅಂಧ ಮಕ್ಕಳಿಗೆ, ಮನೆ ಕೆಲಸ ಮಾಡುವವರ ಮಕ್ಕಳಿಗೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಮತ್ತು ಬಡ ಮಕ್ಕಳಿಗೆ ಅವರ ಅಗಾಧವಾದ ಪ್ರತಿಭೆಯನ್ನು ವರ ಹಾಕಲು ವೇದಿಕೆನ ಸೃಷ್ಟಿಸಿ ಕೊಡುವುದು ಕನ್ನಡ ಹಬ್ಬದ ವಿಶೇಷವಾಗಿತ್ತು ಮತ್ತು ಅನೇಕ ಮಕ್ಕಳು ಸಂಗೀತದ ಮೂಲಕ ನೃತ್ಯದ ಮೂಲಕ ಎಲ್ಲರನ್ನು ಬೆರೆಗೂ ಗೊಳಿಸುವಂತೆ ಕಾರ್ಯಕ್ರಮಗಳನ್ನು ನೀಡಿದರು.
ಇದರೊಂದಿಗೆ ಉತ್ತರ ಭಾರತದಿಂದ ಬಂದು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿನ ಹೆಣ್ಣು ಮಕ್ಕಳು ಕನ್ನಡ ಕಲಿತು ಕನ್ನಡದ ಗೀತೆಗಳು ನೃತ್ಯವನ್ನು ಮಾಡಿದ್ದು ವಿಶೇಷವಾಗಿತ್ತು.ಕಾರ್ಯಕ್ರಮವನ್ನು ಚಿನ್ಮಯಿ ಮತ್ತು ಪ್ರವೀಣ್ ರವರು ಕನ್ನಡ ಅಭಿಮಾನದ ಪ್ರತೀಕವಾಗಿ ಬಹಳ ಅದ್ಧೂರಿಯಾಗಿ ಆಯೋಜಿಸಿದ್ದರು.