ಭಾರತೀಯ ಜೀವವಿಮಾ ನಿಗಮದ ಪೀಣ್ಯ ಶಾಖೆಯ ಬ್ರಾಂಚ್ ಸೆಕ್ರೇಟರಿ ಎಲ್ ರಾಮಯ್ಯ ಮತ್ತು ಅವರ ಪತ್ನಿ ರಾಧಾ ರವರು, ತಮ್ಮ ಆಸ್ಟ್ರೇಲಿಯಾ ಪ್ರವಾಸ ಸಂದರ್ಭದಲ್ಲಿ, ಕ್ಯಾನ್ಬೆರಾ, ಸಿಡ್ನಿ, ಮೆಲ್ಬೋರ್ನ್, ಗೋಲ್ಡ್ ಕಾಸ್ಟ್, ಬ್ರಿಸ್ಬೇನ್, ಬ್ಲೂಮೌಂಟೇನ್, ಸ್ವಾಮಿ ನಾರಾಯಣ ದೇವಸ್ಥಾನ. ಗುರುದ್ವಾರ, ಗಣೇಶ ದೇವಸ್ಥಾನ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿದಾಗ,
ಲೇಖಕ ಚಿಂತಕ ಅಂಕಣಕಾರ ಮಣ್ಣೆ ಮೋಹನ್ ಸಂಪಾದಕತ್ವದ, ಕನ್ಯಾಕುಮಾರಿಯಲ್ಲಿ ಬಿಡುಗಡೆಗೊಂಡಿದ್ದ ‘ವಿಶಾಲ ವಿಕಾಸ ವಿವೇಕ’ ಕವನ ಸಂಕಲನವನ್ನು ಮತ್ತು ಇತರೆ ಕನ್ನಡ ಪುಸ್ತಕಗಳನ್ನು ಅಲ್ಲಿನ ಕನ್ನಡಿಗರಿಗೆ ವಿತರಿಸುವ ಮೂಲಕ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ಆ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅವರ ಮಗಳಾದ ಶ್ರೀ ಲಕ್ಷ್ಮಿ ಜೊತೆಯಲ್ಲಿದ್ದರು.
ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ ಎನ್ ಕೃಷ್ಣಪ್ಪನವರು, ಲೇಖಕ ಮಣ್ಣೆ ಮೋಹನ್, ನೆಲಮಂಗಲ ತಾಲೂಕು ಕಸಾಪ ಅಧ್ಯಕ್ಷರಾದ ಪ್ರಕಾಶ್ ಮೂರ್ತಿ, ನಿಕಟ ಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್, ರಾಜ್ಯ ಪ್ರತಿನಿಧಿ ಡಾ.ಎಲ್.ಕೃಷ್ಣಮೂರ್ತಿ, ಜಿಲ್ಲಾ ಪ್ರತಿನಿಧಿ ರಾಮಕೃಷ್ಣಪ್ಪ, ಕೋಶಾಧ್ಯಕ್ಷರಾದ ನಾರಾಯಣಗೌಡ, ಮಹಿಳಾ ಪ್ರತಿನಿಧಿ ಮಂಜುಳಾ ಸಿದ್ದರಾಜು ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಹಾಗೂ ನಾಡಿನ ಅನೇಕ ಕನ್ನಡ ಪರ ಸಂಘಟನೆಗಳು ಅಭಿನಂದನೆ ಸಲ್ಲಿಸಿದ್ದಾರೆ.