ಬೆಂಗಳೂರು: ಕರುನಾಡನ್ನು ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಕಲ್ಯಾಣಿ ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ದೊರೆಗಳು, ಚಿತ್ರದುರ್ಗದ ಪಾಳೇಗಾರರು, ಬೆಂಗಳೂರಿನ ಕೆಂಪೇಗೌಡರು, ಕಿತ್ತೂರು ಸಂಸ್ಥಾನ ಮುಂತಾದ ರಾಜವಂಶಗಳು ಆಳಿವೆ.
ಸಾಹಿತ್ಯ, ಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯದ ಮೂಲಕ ರಾಜವಂಶಗಳು ಈ ನಾಡಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿವೆ. ಅದೇ ಪರಂಪರೆಯನ್ನು ಶ್ರೀ ನಾಗಮುನೇಶ್ವರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಮುಂದುವರೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಲೇಖಕ, ಚಿಂತಕ ಮಣ್ಣೆ ಮೋಹನ್ ಅಭಿಪ್ರಾಯಪಟ್ಟರು.
ಅವರು ಹೊಸೂರು ಮುಖ್ಯರಸ್ತೆಯ ಪರಪ್ಪನ ಅಗ್ರಹಾರದ ಶ್ರೀ ನಾಗಮುನೇಶ್ವರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ (ರಿ) ವತಿಯಿಂದ ಹಮ್ಮಿಕೊಂಡಿದ್ದ 11 ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀನಿವಾಸ್ ಎಸ್. ಎನ್.ರವರು, ಮಾಜಿ ಬಿ.ಬಿ.ಎಂ.ಪಿ. ಸದಸ್ಯರು, ಮಾತನಾಡಿ ಶ್ರೀ ನಾಗಮುನೇಶ್ವರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘವು ಅನೇಕ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಇದು ಇತರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಸಂಘದ ಪದಾಧಿಕಾರಿಗಳಾದ ಎನ್ ಕೃಷ್ಣಪ್ಪ, ನಾಗರಾಜ್ ರೆಡ್ಡಿ, ಬಿ.ಎಸ್. ಪ್ರವೀಣ್, ವಿಶ್ವನಾಥ್ ಬಿ ಎನ್, ಅಶ್ವತ್ಥ ಎಂ, ಎಸ್. ರೇವಣಸಿದ್ದಪ್ಪ, ಚಂದ್ರಪ್ಪ, ಶಶಿಧರ್ ಮುನವಳ್ಳಿ,ಗಂಗಾಧರ, ದೇವರಾಜ್,ಸಿ ಉಮಾಶಂಕರ್, ಕೆ.ಎ. ರಂಗನಾಥ್, ಟಿ.ಎಸ್.ಜಯಶಂಕರ್, ದಿನೇಶ್ ಎನ್.ಆರ್, ಪ್ರಸನ್ನಕುಮಾರ್, ಕೀರ್ತಿರಾಜ್ ಬಿ.ಕೆ, ಎನ್.ಮಲ್ಲೇಶ್, ಎ ಪ್ರಹ್ಲಾದ ಕುಮಾರ್, ವೇಣು, ಪಿ. ರಮೇಶಪ್ಪ, ಮಧುಸೂಧನ್ ರೆಡ್ಡಿ, ನವೀನ್ ಕುಮಾರ್ ಎನ್, ನವೀನ್ ಬಿ ಎನ್ ಎಸ್, ರಾಜಶೇಖರ್ ಎಸ್.ವಿ, ಈಶ್ವರಯ್ಯನವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಬಡಾವಣೆಯ ಎಲ್ಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೆಯೇ ವಯಸ್ಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಗೀತ ಮನೋರಂಜನೆ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ನಾಗರಿಕರು ಉತ್ಸಾಹದಿಂದ ಭಾಗವಹಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.