ತಿ.ನರಸೀಪುರ: 68ನೇ ರಾಜ್ಯೋತ್ಸವ ಹಾಗೂ 50ರ ಸುವರ್ಣ ಕರ್ನಾಟಕದ ಸಂಭ್ರಮವನ್ನು ಶ್ರೀ ಬಂಡರಸಮ್ಮ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಚರಿಸಲಾಯಿತು.
ತಲಕಾಡು ಪಟ್ಟಣದ ಶ್ರೀ ಬಂಡಾರಸಮ್ಮ ದೇವಾಲಯ ಆವರಣದಲ್ಲಿ ಶ್ರೀ ಬಂಡರಸಮ್ಮ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜನೆ ಮಾಡಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯುವ ಮುಖಂಡ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸುನಿಲ್ ಬೋಸ್ ಭಾಗಿಯಾಗಿ ಆಟೋ ಚಾಲನೆ ಮಾಡುವ ಮೂಲಕ ಯುವಕರಲ್ಲಿ ಹರ್ಷೋದ್ಗಾರ ಮೂಡಿಸಿದರು.
ಆಟೊ ನಿಲ್ದಾಣದಲ್ಲಿ ವಿಧವಿಧ ಪುಷ್ಪ ಗಳಿಂದ ಅಲಂಕರಿಸಿದ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಕೆಡಿಪಿ ಸದಸ್ಯ ಯುವ ಮುಖಂಡ ಸುನಿಲ್ ಬೋಸ್ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು. ಕರ್ನಾಟಕದ ರಾಜ್ಯದ್ಯಂತ ಇಂದು ಮೂಲೆ ಮೂಲೆಗಳಲ್ಲೂ ಕನ್ನಡ ಧ್ವಜ ಹಾರಾಡುತ್ತಿರುವುದು ಅದು ಆಟೋ ಚಾಲಕರು ಮತ್ತು ಮಾಲೀಕರಿಂದ. ಶ್ರಮಿಕ ಬಡ ಜೀವಿಗಳಾದ ಆಟೋ ಚಾಲಕರಿಗೆ ಇರುವ ಕನ್ನಡ ಭಕ್ತಿ, ಕನ್ನಡದ ಶಕ್ತಿ ಅವರಂತೆ ನಡೆದರೆ ಸುವರ್ಣ ಕರ್ನಾಟಕದಲ್ಲಿ ಕನ್ನಡ ಉಳಿಯಲಿದೆ.
ಆಟೋ ಮೆರವಣಿಗೆಯು ಶ್ರೀ ಬಂಡರಸಮ್ಮ ದೇವಸ್ಥಾನ ದಿಂದ ಹೊರಟು ಹಳೆ ತಲಕಾಡು, ಗಣಪತಿ ಗುಡಿಬೀದಿ,ನೆಹರು ವೃತ್ತ, ಪೊಲೀಸ್ ಠಾಣೆ ಸರ್ಕಲ್, ರಾಮ ಮಂದಿರ ಬೀದಿ ಮೂಲಕ ಮಂಟೇಸ್ವಾಮಿ ದೇವಸ್ಥಾನ ದವರೆಗೂ ಸಾಗಿತು ಈ ದಿನ ಅಕ್ಷರಸಹ ಆಟೋ ಮೆರವಣಿಗೆಯಿಂದ ತಲಕಾಡು ಪಟ್ಟಣವು ಹಳದಿ ಕೆಂಪು ಬಾವುಟದಿಂದ ಕಂಗೊಳಿಸಿತು.
ಇದೇ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಸುಂದರ್ ನಾಯಕ್ ಮಾತನಾಡಿ ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಯುವಕರಿಗೆ ಆದ್ಯತೆ ನೀಡಬೇಕು. ಸುನಿಲ್ ಬೋಸ್ ರವರು ಎರಡು ಬಾರಿ ಟಿಕೆಟ್ ಕೈತಪ್ಪಿದೆ. ವರಿಷ್ಠರು ಈ ಬಾರಿ ಲೋಕಸಭಾ ಚುನಾವಣೆಗೆ ಸುನಿಲ್ ಬೋಸ್ ರವರಿಗೆ ಟಿಕೆಟ್ ನೀಡಬೇಕು ಸುನಿಲ್ ಬೋಸ್ ರವರು ಯುವಕರಿದ್ದಾರೆ ಅವರ ಗೆಲುವು ಶತಸಿದ್ದ ಚಾಮರಾಜನಗರ ಕಾಂಗ್ರೆಸ್ನ ಭದ್ರಕೋಟೆ ಸುನಿಲ್ ಬೋಸ್ ರವರಿಗೆ ಯುವ ಜನತೆಯನ್ನು ಸಂಘಟಿಸುವ ಮತ್ತು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮನೋಭಾವದವರಾಗಿದ್ದು ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸುನಿಲ್ ಬೋಸ್ ರವರಿಗೆ ಟಿಕೆಟ್ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಮುನೀರ್ ಪಾಷಾ, ಕಾರ್ಯದರ್ಶಿ ಚೇತನ್, ಸನ್ ಮಹೇಶ್, ಲಕ್ಷ್ಮೀನಾರಾಯಣ್, ಬಸವರಾಜು, ಅಶೋಕ್ ಪಟೇಲ್, ಕುಕ್ಕೂರು ಗಣೇಶ್, ಮಲ್ಲಣ್ಣಿ, ಕಾಳಿಹುಂಡಿ ಮಹೇಂದ್ರ, ನರಸಿಂಹ ಮಾದ ನಾಯಕ, ಕ ಸಾ ಪ ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷ ಪಾರ್ವತಿ, ಕಾವೇರಿಪುರ ಶಾಂತರಾಜು, ಅರುಂಧತಿ ನಗರದ ಮನು ಕಾಂಗ್ರೆಸ್ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.