ಚನ್ನರಾಯಪಟ್ಟಣ: ಕನ್ನಡ ರಾಜ್ಯೋತ್ಸವ ಕೇವಲ ನವಂಬರ್ ತಿಂಗಳಿಗೆ ಸೀಮಿತವಾಗದೆ ಕನ್ನಡ ಭಾಷೆಯನ್ನು ರಾಜ್ಯೋತ್ಸವದ ಮುಖಾಂತರ ಉಳಿಸಿ ಬೆಳೆಸುವಂತಾಗಬೇಕು ಎಂದು ಗ್ರಾಪಂ ಅಧ್ಯಕ್ಷ ಗಂಗಾಧರಮೂರ್ತಿ ಹೇಳಿದರು.
ದೇವನಹಳ್ಳಿ ತಾಲೂಕು, ನಲ್ಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಹಾಗೂ ಭುವನೇಶ್ವರಿ ಭಾವಚಿತ್ರಕ್ಕೆ ಪೂಜ ಸಲ್ಲಿಸಿ ಮಾತನಾಡಿ ಇಂದಿಗೆ 50 ವರ್ಷ ಆಯ್ತು ಕರ್ನಾಟಕ ಎಂದು ಹೆಸರು ಬಂದು ಹಿಂದೆಮೈಸೂರು ರಾಜ್ಯ ಎಂದು ಹೆಸರಿದ್ದಿದ್ದು 1973ರಲ್ಲಿ ನಮ್ಮ ರಾಜ್ಯಕ್ಕೆ ಕರ್ನಾಟಕ ಹೆಸರಾಗಿದ್ದುಕನ್ನಡ ನಾಡು ನುಡಿ ಉಳಿಸು ಬೆಳೆಸುವಂತಾಗಬೇಕು ಕನ್ನಡ ನಾಡು
ಎಂದರೆ ಸೊಬಗಿನಬೀಡು ನಮ್ಮ ಭಾಷೆಗೆ ಅದರದ ಸ್ಥಾನಮಾನ ಇದೆ ಎಲ್ಲಾ ಭಾಷೆಗಳನ್ನು ಪ್ರೀತಿಸಿ ಕನ್ನಡವನ್ನು ಬೆಳೆಸಿ ಎಂದರು.
ಅಭಿವೃದ್ಧಿ ಅಧಿಕಾರಿ ಸುಶೀಲಮ್ಮ ಮಾತನಾಡಿ ನಮ್ಮ ರಾಜ್ಯಕ್ಕೆ ನಾಡು ನುಡಿಯ ಪ್ರಶಂಸೆ ಇದೆ ತಾಯಿ ಭುವನೇಶ್ವರಿಯ ನಾಡಾ
ಗಿರುವುದು ಧ್ವಜಕ್ಕೂ ಅರಿಶಿನ ಕುಂಕುಮದ ಬಣ್ಣ ಇರುವುದು ಅದರದೇ ಸ್ಥಾನಮಾನ ಇದೆ ನಿಮ್ಮ ಮನೆಗಳಲ್ಲಿ ಯಾವುದೇ ಭಾಷೆ ಮಾತನಾಡಿದರು ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಮಹಾದೇವಿ ವೀರಭದ್ರಪ್ಪ ಸದಸ್ಯರಾದ ಮುನಿರಾಜು ನರಸಿಂಹಮೂರ್ತಿ ಕರವಸಲಿ
ಗಾರ ರಾಮಯ್ಯ ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.