ಬೆಂಗಳೂರು: ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ಆಯೋಜಿಸಿದ್ದ “ಸಂಕ್ರಾಂತಿ ಸಂಭ್ರಮ” ಮತ್ತು ” ಕರ್ನಾಟಕ ಸುವರ್ಣ ಸಂಭ್ರಮ” ಕುರಿತಾದ ಕವಿಗೋಷ್ಠಿ, ಶಾಂತಿನಗರದ ಡಾ.ಪುನೀತ್ ರಾಜಕುಮಾರ್ ಕನ್ನಡ ಭವನದಲ್ಲಿ ನಡೆಯಿತು.
ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎನ್ನುವ ನಾಣ್ಣುಡಿಯಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ತಮ್ಮ ಕವನದ ಸಾಲುಗಳಲ್ಲಿ ನಾಡಿನ ಕುರಿತಾದ ವೈಭವವನ್ನು ವಿಭಿನ್ನವಾಗಿ ತೆರೆದಿಟ್ಟರು.ಡಾ.ಗುಣವಂತ ಮಂಜು ಅವರು ಶಾಲಾ ಮತ್ತು ಕಾಲೇಜು ಮಕ್ಕಳಿಗೆ ಉಚಿತವಾಗಿ ಹಂಚಲು ಬರೆದಿರುವ “ಕನ್ನಡ ರತ್ನ” ಕೃತಿಯನ್ನುಕರ್ನಾಟಕ ವಿಕಾಸ ರಂಗದ ಅಧ್ಯಕ್ಷರಾದ ಶ್ರೀ ವ.ಚ. ಚನ್ನೇಗೌಡ ರವರು ಬಿಡುಗಡೆಗೊಳಿಸಿದರು. ಮತ್ತು ಕರ್ನಾಟಕ ಸುವರ್ಣ ಸಂಭ್ರಮ 50 ಕುರಿತಾಗಿ ಉಪನ್ಯಾಸ ನೀಡಿದರು.
2024ರ ಕರುನಾಡು ಸೇವಾ ಸಮಿತಿಯ ಪಾಕೆಟ್ ಕ್ಯಾಲೆಂಡರನ್ನು ಡಾ. ಗುಣವಂತ ಮಂಜು ಬಿಡುಗಡೆಗೊಳಿಸಿದರು. ಸಂಕ್ರಾಂತಿ ಸುಗ್ಗಿ ಕುರಿತಾಗಿ ಡಾ. ಮಹೇಂದ್ರನಾಥ ಶರ್ಮ ಗುರೂಜಿ ರವರು ಉಪನ್ಯಾಸ ನೀಡಿದರು. ದಾಸೋಹದ ವ್ಯವಸ್ಥೆಯನ್ನು ಡಾ. ಕೆ. ಆರ್. ವೆಂಕಟೇಶ್ ಗೌಡ ರವರು ಆಯೋಜಿಸಿದ್ದರು.
ಉದ್ಘಾಟನೆಯನ್ನು ವಕೀಲರಾದ ಎಸ್. ಎಸ್ ಪಾಟೀಲ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ತಹಸಿಲ್ದಾರ್ ಹಾಗೂ ಹಿರಿಯ ಕಲಾವಿದರಾದಡಾ. ಎ.ಪಿ ರಾಮಕೃಷ್ಣ, ವಕೀಲರು ಹಾಗೂ ಸಮಾಜಸೇವಕರಾದ ಡಾ. ಸಾಯಿಸುಮನ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಡಾ. ಎನ್ ಆರ್ ಮಂಜುನಾಥ್. ಯುವ ಕವಿಯತ್ರಿ ಹಾಗೂ ಬರಹಗಾರ್ತಿ ಶ್ರೀಮತಿ ಮಂಜು ಪಾವಗಡ ಭಾಗಿಯಾಗಿದ್ದರು.
ಎಳ್ಳು ಬೆಲ್ಲ ಹಂಚುವ ಮೂಲಕ ಆರಂಭವಾದ ಗೋಷ್ಠಿ ಬಹಳ ಅರ್ಥಪೂರ್ಣವಾಗಿತ್ತು.
ಶ್ರೀಯುತ ಯೋಗೇಶ್. ಎಂ ರವರ ಸಹಕಾರದೊಂದಿಗೆ ಸ್ವಾವಲಂಬಿ ಬದುಕಿನ ದಾರಿಗಾಗಿ ಶ್ರೀಮತಿ ಶುಭ ರವರಿಗೆ ಟೈಲರಿಂಗ್ ಮಿಷನ್ ಕೊಂಡುಕೊಳ್ಳಲು ಧನ ಸಹಾಯ ಮಾಡಲಾಯಿತು. ಅನೇಕ ವಿಷಯಗಳ ಸಂಗಮವಾಗಿ ಸಂಕ್ರಾಂತಿ ಶುಭಾಶಯಗಳೊಂದಿಗೆ ನಾಡಿನ ಜನತೆಗೆ ಸಹ ಬಾಳ್ವೆಯ ಸಂದೇಶವನ್ನು ನೀಡಲಾಯಿತು.