![]() |
![]() |
![]() |
![]() |
![]() |
ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಆತಿಥೇಯ ಭಾರತ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಆಯ್ಕೆಯಾಗಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಅಜಿತ್ ಆಗರ್ಕರ್ ಮಂಗಳವಾರ 15 ಆಟಗಾರರ ತಂಡವನ್ನು ಪ್ರಕಟಿಸಿದರು. ಬ್ಯಾಟರ್ ರೋಹಿತ್ ಶರ್ಮಾ ನಾಯಕ ಹಾಗೂ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ನೇಮಕವಾಗಿದ್ದಾರೆ.
ಕನ್ನಡಿಗ ರಾಹುಲ್ ವಿಕೆಟ್‍ಕೀಪರ್ ಆಗಿದ್ದಾರೆ. ಇಶಾನ್ ಕಿಶನ್ ಅವರು ಎರಡನೇ ವಿಕೆಟ್ ಕೀಪರ್ ಆಗಿ ಸ್ಥಾನ ಗಿಟ್ಟಿಸಿದ್ದಾರೆ.
ಕಳೆದ ಐಪಿಎಲ್ ಸಂದರ್ಭದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರು ದೀರ್ಘ ಸಮಯದಿಂದ ತಂಡದಲ್ಲಿ ಆಡಿರಲಿಲ್ಲ. ಇತ್ತೀಚೆಗೆ ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗಿದ್ದರು. ಆದರೆ ಸ್ನಾಯುವಿನಲ್ಲಿ ಸಣ್ಣ ಪ್ರಮಾಣದ ನೋವು ಇದ್ದ ಕಾರಣ ಮೊದಲೆರಡು ಪಂದ್ಯಗಳಲ್ಲಿ ಆಡಿರಲಿಲ್ಲ.
‘ರಾಹುಲ್ ಉತ್ತಮವಾಗಿ ಸಿದ್ಧಗೊಂಡಿರುವಂತೆ ಕಾಣಿಸುತ್ತಿದ್ದಾರೆ. ಅವರು ತಂಡಕ್ಕೆ ಉತ್ತಮ ಕಾಣಿಕೆ ನೀಡುವ ಭರವಸೆ ಇದೆ. ಅವರ ಸೇರ್ಪಡೆಯಿಂದ ತಂಡವು ಸಮತೋಲನಗೊಳ್ಳಲಿದೆ. ಕಳೆದ ಎರಡು ದಿನಗಳಲ್ಲಿ ಎನ್‍ಸಿಎನಲ್ಲಿ ಅವರು ಕೆಲವು ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದಾರೆ’ ಎಂದು ಅಜಿತ್ ಆಗರ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
![]() |
![]() |
![]() |
![]() |
![]() |
Leave a Review